Tuesday, April 30, 2024

ಪ್ರಾಯೋಗಿಕ ಆವೃತ್ತಿ

ಜನಬಲದಿಂದ ಕುಮಾರಸ್ವಾಮಿ ಗೆಲ್ಲುತ್ತಾರೆ: ಬಿ.ವೈ ವಿಜಯೇಂದ್ರ

ಮಳವಳ್ಳಿಯಲ್ಲಿ ಸೇರಿರುವ ಜನಸಮೂಹ ಅಧಿಕಾರ, ಹಣ ಬಲದ ಅಮಲಿನಲ್ಲಿರುವ ಕಾಂಗ್ರೆಸ್‌ಗೆ ನೀಡಿದ ತಕ್ಕ ಉತ್ತರ. ಜನಬಲದಿಂದ ಕುಮಾರಸ್ವಾಮಿ ಗೆಲ್ಲುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಮಳವಳ್ಳಿಯಲ್ಲಿ‌ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರ ಬಹಿರಂಗ ಸಭೆಯಲ್ಲಿ ಮತಯಾಚಿಸಿದರು.

ದೇಶದ ಜನರು ಮೋದಿ ಪರವಾಗಿದ್ದಾರೆ. ಮಂಡ್ಯದ ಜನರು ಕುಮಾರಣ್ಣನಿಗೆ ಆಶೀರ್ವಾದ ಮಾಡಬೇಕು.
ದೇಶದ ಭವಿಷ್ಯದ ದೃಷ್ಟಿಯಿಂದ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಮಾಜಿ ಪ್ರಧಾನಿ ದೇವೇಗೌಡರೇ ಹೇಳಿದ್ದಾರೆ‌.ಆ ಸಂಕಲ್ಪದಿಂದಲೇ ಬಿಜೆಪಿ ಜೊತೆ ಜೆಡಿಎಸ್‌ ಕೈಜೋಡಿಸಿದೆ ಎಂದರು.

ನನ್ನ ತೆರಿಗೆ ನನ್ನ ಹಕ್ಕು ಎನ್ನುತ್ತಿದ್ದ ಡಿ.ಕೆ.ಶಿವಕುಮಾರ್ ಅವರು ಸಿಎಂ ಸೀಟ್ ನನ್ನ ಹಕ್ಕು ಎನ್ನಲು ರೆಡಿಯಾಗಿದ್ದಾರೆ.ಲೋಕಸಭಾ ಚುನಾವಣೆ ಬಳಿಕ ಸಿಎಂ ಸ್ಥಾನಕ್ಕೇರಲು ಗುದ್ದಲಿ ಪೂಜೆ ಮಾಡಿದ್ದಾರೆ.ಕುಮಾರಸ್ವಾಮಿ ಗೆಲುವು ತಡೆಯುವ ಶಕ್ತಿ ಸಿಎಂ ಸಿದ್ದರಾಮಯ್ಯ,ಡಿ.ಕೆ. ಶಿವಕುಮಾರ್‌ಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.ಕುಮಾರಸ್ವಾಮಿ ಅವರು ಗೆದ್ದರೆ ಕೇಂದ್ರ ಸಚಿವರಾಗಿ ಮೋದಿ ಕೈ ಬಲ ಪಡಿಸುತ್ತಾರೆ.ಹಾಗಾಗಿ ಕುಮಾರಸ್ವಾಮಿ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ಮನವಿ ಮಾಡಿದರು.

ಕಾಂಗ್ರೆಸ್ ಸರ್ಕಾರ ಬಂದು 10ತಿಂಗಳು ಕಳೆದರೂ ರೈತರ ಸಂಕಷ್ಟ ಕೇಳಿಲ್ಲ.ಸುಪ್ರೀಂ ಕೋರ್ಟ್ ನೆಪ ಹೇಳಿ ತಮಿಳುನಾಡಿಗೆ ಕಾವೇರಿ ನೀರು ಬಿಟ್ರಲ್ಲ ಅವಾಗ ಎಲ್ಲೋಗಿತ್ತು ನಿಮ್ಮ ತಾಕತ್ತು?ನೀರು ಬಿಟ್ಟು ರೈತರಿಗೆ ಅನ್ಯಾಯ ಮಾಡಿದ್ರಲ್ಲ ಅವಾಗ ಎಲ್ಲೋಗಿತ್ತು ನಿಮ್ಮ ಗಂಡಸ್ತನ ಎಂದು ಕಿಡಿ ಕಾರಿದರು.

ಈ ಬರಗಾಲದಲ್ಲಿ ರೈತ ವಿದ್ಯುತ್ ಸಂಪರ್ಕ ಪಡೆಯಲು 3ಲಕ್ಷ ಕಟ್ಟಬೇಕು.ಇದು ರೈತರಿಗೆ ನ್ಯಾಯ ಕೊಡುವ ಕೆಲಸಾನಾ? ರೈತರಿಗೆ ಅನ್ಯಾಯ ಮಾಡುವ ಸರ್ಕಾರ ಯಾವುದಾದರೂ ಇದ್ರೆ ಅದು ರಾಜ್ಯ ಕಾಂಗ್ರೆಸ್ ಸರ್ಕಾರ.
ಬಡವರಿಗೆ ಅಕ್ಕಿ ಕೊಡ್ತಿರುವುದು ಕಾಂಗ್ರೆಸ್ ಸರ್ಕಾರ ಅಲ್ಲ, ನರೇಂದ್ರ ಮೋದಿ ಸರ್ಕಾರ.ಮದ್ಯದ ಬೆಲೆ ಏರಿಸಿ ಗ್ಯಾರಂಟಿ ಕೊಡ್ತಿದ್ದಾರೆ.ಗಂಡಸರ ಜೇಬಿಗೆ ಕತ್ತರಿ ಹಾಕಿ ಹೆಂಗಸರ ಅಕೌಂಟಿಗೆ ಹಾಕ್ತಿದ್ದಾರೆ.ಬಸ್ ದರ ಏರಿಸಿ ಮಹಿಳೆಯರಿಗೆ ಫ್ರೀ ಮಾಡಿದ್ದಾರೆ.

ವಿದ್ಯುತ್ ದರ ಏರಿಸಿ ಕರೆಂಟ್ ಫ್ರೀ ಅಂತಾರೆ. ಒಂದು ಕೈಲಿ ಕಿತ್ತುಕೊಂಡು ಇನ್ನೊಂದು ಕೈಲಿ ಕೊಡುವ ಕೆಲಸ ಮಾಡ್ತಿದ್ದಾರೆ.ರಾಜ್ಯದ ಮುಗ್ದ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ಯಾರಂಟಿ ಗ್ಯಾರಂಟಿ ಎಂದು ರಾಜ್ಯದ ಜನರಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ.ಈ ಲೋಕಸಭಾ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು.ಜನರಿಂದ ಜನರಿಗಾಗಿ ಜನರಿಗೋಸ್ಕರ ಪ್ರಾಣ ಕೊಡುವ ಕುಮಾರಸ್ವಾಮಿ ಅವರನ್ನು ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು.ಕುಮಾರಸ್ವಾಮಿ ಮಾತ್ರ ಮಂಡ್ಯ ಜಿಲ್ಲೆಗೆ ನ್ಯಾಯ ಕೊಡುವ ಕೆಲಸ ಮಾಡಲು ಸಾಧ್ಯ. ಶ್ರೀಮಂತರು, ಹೊಟ್ಟೆ ತುಂಬಿದವರು ಗೆದ್ದರೆ ಮಂಡ್ಯಕ್ಕೆ ಪ್ರಯೋಜನವಿಲ್ಲ ಎಂದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ,ಶಾಸಕ ಜಿ.ಟಿ.ದೇವೇಗೌಡ,ಮಾಜಿ ಶಾಸಕ ಅನ್ನದಾನಿ,ಮನ್ಮುಲ್ ನಿರ್ದೇಶಕ ವಿಶ್ವನಾಥ್,ಬಿಜೆಪಿ ಅಧ್ಯಕ್ಷ ಇಂದ್ರೇಶ್,ಮುಖಂಡರಾದ ಮುನಿರಾಜು,ಶ್ರೀಧರ್ ಸೇರಿದಂತೆ ಹಲವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!