Thursday, September 19, 2024

ಪ್ರಾಯೋಗಿಕ ಆವೃತ್ತಿ

ರಾಜ್ಯದಲ್ಲೇ ಮೊದಲ ಬಾರಿಗೆ ಪಂಚಾಯತ್ ರಾಜ್ ಸಂಘಟನೆ ಮಾಡಿದ ನಾಗಣ್ಣ ಬಾಣಸವಾಡಿ ನಿಧನ

ವರದಿ : ನ.ಲಿ.ಕೃಷ್ಣ ಕೃಷಿಕರು.

ಕರ್ನಾಟಕ ಪಂಚಾಯತ್ ರಾಜ್ ಸಂಘಟನೆಯ ರಾಜ್ಯಾಧ್ಯಕ್ಷರಾಗಿದ್ದ ನಾಗಣ್ಣ ಬಾಣಸವಾಡಿ ಇಂದು ಬೆಳಿಗ್ಗೆ ಸುದೀರ್ಘ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ರಾಜ್ಯದಲ್ಲೇ ಮೊದಲಬಾರಿಗೆ ಪಂಚಾಯತ್ ರಾಜ್ ಸಂಘಟನೆ ಮಾಡಿದ ಹಿರಿಮೆ ಇವರದು. ರಾಜ್ಯ ಒಕ್ಕಲಿಗರ ಸಂಘದ  ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಆದಿ ಚುಂಚನಗಿರಿ ಮಠದ ಪರಮ ಭಕ್ತರಾಗಿದ್ದ ಇವರು ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ ಯವರ ಆಶಯವಾಗಿದ್ದ ಉತ್ತರ ಕರ್ನಾಟಕ ಭಾಗದ ಕುಡು ಒಕ್ಕಲಿಗರ ಸಂಘಟನೆ ಮಾಡಿ ಅವರನ್ನು ಮುಖ್ಯವಾಹಿನಿಗೆ ತರಬೇಕೆಂಬ ಆಪಾರ ಕನಸೊತ್ತು ಕುಡು ಒಕ್ಕಲಿಗರ ಸಂಘಟನೆಗಾಗಿ ಹತ್ತಾರು ವರ್ಷ ಶ್ರಮಿಸಿ ಕುಡು ಒಕ್ಕಲಿಗರನ್ನು ಸಂಘಟಿಸಿ ಯಶಸ್ಸು ಸಾಧಿಸಿ, ಶ್ರೀ ಮಠದಲ್ಲಿ ಕುಡು ಒಕ್ಕಲಿಗರ ಸಮಾವೇಶ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಅಹಿಂಸಾ ಸಂಘಟನೆ ಮಾಡುವಲ್ಲಿಯು‌ ಅಪಾರವಾಗಿ ನಾಗಣ್ಣ ಬಾಣಸವಾಡಿ ಶ್ರಮಿಸಿದ್ದರು. 2010 ರಲ್ಲಿ ದೊಡ್ಡಬಾಣಸವಾಡಿ ಗ್ರಾ. ಪಂ. ಅಧ್ಯಕ್ಷರಾಗಿ ಆಯ್ಕೆ ಆಗಿದ್ದ ಇವರು, ಸಂಪೂರ್ಣವಾಗಿ ತಮ್ಮನ್ನು ಸಮಾಜಪರತೆಗಾಗಿ ಅರ್ಪಿಸಿಕೊಂಡಿದ್ದರು.

ಮಂಡ್ಯದ ಸಿಲ್ವರ್ ಜೂಬಿಲಿ ಪಾರ್ಕ್ ನ ಒಂದು ಭಾಗಕ್ಕೆ ಕೆಂಪೇಗೌಡ ಉದ್ಯಾನವನ ಎಂದು ಮತ್ತೊಂದು ಭಾಗಕ್ಕೆ ಆದಿಚುಂಚನಶ್ರೀಗಳ ಹೆಸರಿಡುವಲ್ಲಿ ಶ್ರಮಿಸಿದ್ವರು ನಾಗಣ್ಣ ಬಾಣಸವಾಡಿ.

ನಾಡಪ್ರಭು ಕೆಂಪೇಗೌಡರ ಅಶ್ವರೂಡ ಪ್ರತಿಮೆಯನ್ನು ಸಿಲ್ವರ್ ಜೂಬಿಲಿಪಾರ್ಕ್ ನಲ್ಲಿ ಸ್ಥಾಪಿಸಬೆಕೆಂಬ ಅದಮ್ಯ ಬಯಕೆ ಹೊತ್ತು ಕಾರ್ಯ ನಿರ್ವಹಿಸುತ್ತಿದ್ದರು.

ಇತ್ತೀಚೆಗೆ ನಡೆದ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಸ್ಪರ್ದಿಸಿ ಗಣನೀಯ ಮತ ಪಡೆದು ಸಮಾಜದ ಮನ್ನಣೆಗೆ ಪಾತ್ರರಾಗಿದ್ದರು.

ತನ್ನ ಕಡೆ ಉಸಿರು ಇರುವವರೆಗೂ ಜನಾಂಗದ ಏಳಿಗೆಗೆ ಶ್ರಮಿಸುವ ಸಂಕಲ್ಪ ಹೊಂದಿದ್ದ ಶ್ರೀಯುತರು ಸದಾ ಒಕ್ಕಲಿಗ ಜನಾಂಗದ ಏಳಿಗೆಗಾಗಿ ಹಂಬಲಿಸುತ್ತಿದ್ದರು.

           ಶ್ರೀಯುತರು ಪುತ್ರ ಸಿದ್ದು ಹಾಗು ಧರ್ಮ ಪತ್ನಿ ಹಾಗೂ ಆಪಾರ ಬಂದುಗಳು ಸ್ನೇಹಿತರನ್ನು ಆಗಲಿದ್ದಾರೆ.

ನಾಗಣ್ಣ ಬಾಸವಾಡಿಯವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಸುಮಾರು 12 ಗಂಟೆಗೆ  ದೊಡ್ಡಬಾಣಸವಾಡಿಯಲ್ಲಿ ನಡೆಯಲಿದೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!