Saturday, November 21, 2026

ಪ್ರಾಯೋಗಿಕ ಆವೃತ್ತಿ

ನಾಗಣ್ಣಬಾಣಸವಾಡಿ ಶ್ರದ್ಧಾಂಜಲಿ : ಪೂರ್ವ ಭಾವಿ ಸಭೆ

ಅಧಿಕಾರ ವಿಕೇಂದ್ರಿಕರಣಪರ ಚಿಂತಕ, ಒಕ್ಕಲಿಗ ಜನಾಂಗದ ಮುಖಂಡ ನಾಗಣ್ಣ ಬಾಣಸವಾಡಿ ಅವರ ನಿಧನಕ್ಕೆ ಸಂತಾಪ ಸೂಚಿಸಿ ಗೌರವರ್ಪಣೆ ಸಲ್ಲಿಸಲು ಈ ಬಗ್ಗೆ ಚರ್ಚಿಸಿ, ಕಾರ್ಯಕ್ರಮದ ರೂಪುರೇಷಗಳನ್ನು ಸಿದ್ಧಪಡಿಸಲು ದಿನಾಂಕ 29-3-2023 ರಂದು ಬೆಳಿಗ್ಗೆ 11 ಘಂಟೆಗೆ ಮಂಡ್ಯದ ಸುಭಾಷ್ ನಗರದ ಒಂದನೇ ಕ್ರಾಸ್ ನಲ್ಲಿ ಇರುವ ಶ್ರೀ ಆದಿಚುಂಚನಗಿರಿ ಕಟ್ಟಡದ ಒಕ್ಕಲಿಗರ ಸೇವಾ ಟ್ರಸ್ಟ್ ಕಛೇರಿಯಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.

ಈ ಸಭೆಗೆ ನಾಗಣ್ಣ ಬಾಣಸವಾಡಿ ಅವರ ಒಡನಾಡಿಗಳು, ಸಮಾಜಪರತೆಯುಳ್ಳ ಸಮಾನ ಮನಸ್ಕರು, ಗ್ರಾ ಪಂ ಮಾಜಿ ಆಧ್ಯಕ್ಷರು, ಹಾಲಿ ಅಧ್ಯಕ್ಷರುಗಳು,ಸದಸ್ಯರುಗಳು ಮತ್ತು ವಿವಿಧ ಸಂಘಟನೆಯವರು ಹಾಜರಾಗಿ ತಮ್ಮ ಅನುಭವ ಮತ್ರು ಜ್ಞಾನದ ಹಿನ್ನಲೆಯಲ್ಲಿ ಸೂಕ್ತ ಸಲಹೆ ಮಾರ್ಗದರ್ಶನಗಳನ್ನು ನೀಡಲು,ನಾಗಣ್ಣ ಬಾಣಸವಾಡಿಯವರ ಒಡನಾಡಿಯಾದ ಮದ್ದೂರಿನ ನ.ಲಿ.ಕೃಷ್ಣ ಕೋರಿದ್ದಾರೆ.‌

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ