Saturday, May 18, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ ಪುರಸಭೆ | ಉಳಿತಾಯ ಬಜೆಟ್ ಮಂಡನೆ

ಮಳವಳ್ಳಿ ಪಟ್ಟಣದ ಪುರಸಭೆಯ 2023-24 ನೇ ಆಯವ್ಯಯ ಮಂಡನೆ ಸಭೆ ಪುರಸಭೆಯ ಅಧ್ಯಕ್ಷರಾದ ರಾಧ ನಾಗರಾಜು ಅವರ ಅಧ್ಯಕ್ಷತೆಯಲ್ಲಿ ಇಂದು ನಡೆಯಿತು.

ಸಭೆಯಲ್ಲಿ 52.42 ಸಾವಿರದ 300 ರೂ ಉಳಿತಾಯ ತೋರಿಸುವ ಈ ಸಾಲಿನ ಬಜೆಟ್ ಅನ್ನು ಮಂಡಿಸಿದರು.
ಈ ಸಾಲಿನಲ್ಲಿ ಆರಂಭಿಕ ಶಿಲ್ಕು 6 ಕೋಟಿ 20ಲಕ್ಷದ 37 ಸಾವಿರದ 100 ರೂ ಸೇರಿ 24 ಕೋಟಿ, 65 ಲಕ್ಷದ 22ಸಾವಿರದ 100 ರೂ ಆದಾಯ ನಿರೀಕ್ಷಿಸಲಾಗಿದೆ.
ಇದರಲ್ಲಿ 24ಕೋ 12 ಲಕ್ಷದ 39 ಸಾವಿರದ 800 ರೂಗಳನ್ನು ವಿವಿಧ ಬಾಬ್ತುಗಳಿಗೆ ಖರ್ಚು ಮಾಡಲು ಉದ್ದೇಶಿಸಲಾಗಿದೆ, ಇದರೊಂದಿಗೆ 52 ಲಕ್ಷದ 42 ಸಾವಿರದ 900 ರೂ ಉಳಿತಾಯ ತೋರಿಸುವ ಬಜೆಟ್ ಮಂಡಿಸಲಾಯಿತು.

ಇದಕ್ಕೂ ಮೊದಲು ಕನಿಷ್ಟ ಮೂರು ದಿನ ಮೊದಲೇ ಬಜೆಟ್ ಮೀಟಿಂಗ್ ನೋಟೀಸ್ ನೀಡುವ ಬದಲು ನಿನ್ನೆ ಸಂಜೆಯಷ್ಟೇ ನೋಟೀಸ್ ನೀಡಿ ಇಂದು ಬೆಳಿಗ್ಗೆ ಸಭೆ ನಡೆಸುತ್ತಿರುವುದು ನಿಯಮ ಬಾಹಿರವಾಗಿದ್ದು ನೋಟೀಸ್ ಗೆ ಹಳೇ ದಿನಾಂಕ ಹಾಕಲಾಗಿದೆ ಎಂದು ಆರೋಪಿಸಿ ಸದಸ್ಯರಾದ ಕೃಷ್ಣ, ಬಸವರಾಜು ರವಿ , ಶಿವಸ್ವಾಮಿ , ಪುಟ್ಟಸ್ವಾಮಿ ಮತ್ತಿತರರು ಆಡಳಿತ ಮಂಡಳಿ ಕ್ರಮ ವಿರೋಧಿಸಿ ಸಭೆಯ ವೇದಿಕೆ ಮುಂದೆ ಧರಣಿ ನಡೆಸಿದರು.

ತುರ್ತಾಗಿ ಸಭೆ ನಡೆಸಲು ಹೋಗಿ ಕೆಲ ತಪ್ಪುಗಳಾಗಿದೆ ಮುಂದೆ ಇಂತಹ ತಪ್ಪುಗಳಾಗದಂತೆ ಕ್ರಮ ವಹಿಸುವುದಾಗಿ ಅಧ್ಯಕ್ಷರು ಭರವಸೆ ನೀಡಿದ ನಂತರ ಸದಸ್ಯರು ಧರಣಿ ಅಂತ್ಯಗೊಳಿಸಿದರು.

ಸಭೆಯಲ್ಲಿ ಉಪಾಧ್ಯಕ್ಷ ಎಂ ಟಿ ಪ್ರಶಾಂತ್, ಮುಖ್ಯಾಧಿಕಾರಿ ಹರಿಪ್ರಸಾದ್ ಸಭೆಯಲ್ಲಿ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!