Friday, September 20, 2024

ಪ್ರಾಯೋಗಿಕ ಆವೃತ್ತಿ

ಯುವ ಸಮುದಾಯಕ್ಕೆ ನಾಲ್ವಡಿ-ಸರ್ ಎಂವಿ ಮಾದರಿ-ರಾಮಚಂದ್ರು

ಮಂಡ್ಯ ಜಿಲ್ಲೆಯ ಬರಡು ನೆಲವನ್ನು ಹಸಿರಾನ್ನಾಗಿಸಿದ ಮಹಾಪುರುಷರಾದ ನಾಲ್ವಡಿ ಕೃಷ್ಣರಾಜು ಒಡೆಯರ್ ಮತ್ತು ವಿಶ್ವೇಶ್ವರಯ್ಯ ಅವರ ಶ್ರಮ, ತ್ಯಾಗ, ದೂರದೃಷ್ಠಿತ್ವ ಇಂದಿನ ಯುವ ಸಮುದಾಯಕ್ಕೆ ಮಾದರಿಯಾಗಿದೆ ಎಂದು ಎಂದು ಮನ್ ಮುಲ್ ಅಧ್ಯಕ್ಷ ರಾಮಚಂದ್ರು ಹೇಳಿದರು.

ಮಂಡ್ಯ ನಗರದ ನ್ಯಾಷನಲ್ ಚಿಲ್ಡ್ರನ್ ಶಾಲೆಯಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಘಟಕ, ಶ್ರೀ ಶಂಭು ಸೇವಾ ಟ್ರಸ್ಟ್ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ಸರ್.ಎಂ.ವಿ.ದಿನಾಚರಣೆ ಕಾರ‍್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರು ನಿತ್ಯ ಸ್ಮರಣೀಯರು, ಕಾವೇರಿ ನದಿಗೆ ಕನ್ನಂಬಾಡಿ ಕಟ್ಟೆ ಕಟ್ಟಿ ಲಕ್ಷಾಂತರ ಎಕ್ಟೇರ್ ಒಣ ಪ್ರದೇಶಗಳಿಗೆ ನೀರು ಹರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಅಭಿನಂದಿಸಿ ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣಪತ್ರ ನೀಡಲಾಯಿತು.

ಕಾರ‍್ಯಕ್ರಮದಲ್ಲಿ ನ್ಯಾಷನಲ್ ಚಿಲ್ದ್ರನ್ ಶಾಲೆಯ ಕಾರ್ಯದರ್ಶಿ ಬಿ.ಟಿ.ನಾಗರಾಜು, ವಕೀಲ ಎಂ.ಗುರುಪ್ರಸಾದ್, ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಘಟಕ ರಾಜ್ಯಾಧ್ಯಕ್ಷ ಪೊತೇರ ಮಹದೇವು, ಶಿವಪ್ರಸಾದ್‌ಗುರು, ಶಿಕ್ಷಕರಾದ ಬಾಲಚಂದ್ರ ಹೆಗಡೆ, ರಾಮಚಂದ್ರ,  ಗೀತಾ, ಚಂಪಕ್, ಮಂಜುಳಾ, ಅಭಿಯಂತರ ಜಗದೀಶ್, ಸಹಕಾರ ರತ್ನ ಪುರಸ್ಕೃತ ಕೀಲಾರಕೃಷ್ಣ ಹಾಗೂ ಸುಧಾ ಆರಾಧ್ಯ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!