Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ‘ನನ್ನವ್ವ’ ಚಲನಚಿತ್ರದ ಪೋಸ್ಟರ್ ಬಿಡುಗಡೆ

ಮಂಡ್ಯ ನಗರದ ಹರ್ಡಿಕರ್ ಭವನದಲ್ಲಿ ಸುಭಾಷ್ ನಗರದ ಪ್ರೊ ಡಾ.ಮಹದೇವ ಅವರ ‘ಕರಿಯ ಕರಿಯ ಕಾಲ್ಮುರಿಯ ಎಂಬ ಕಥಾ ಸಂಕಲನದ ಆಧಾರಿತ “ನನ್ನವ್ವ” ಎಂಬ ಕನ್ನಡ ಚಲನಚಿತ್ರದ ಪೋಸ್ಟರ್ ಅನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ ಶ್ರೀಕಂಠೇಗೌಡ ಬಿಡುಗಡೆ ಮಾಡಿದರು.

ಈ ಚಿತ್ರದ ನಾಯಕನನ್ನಾಗಿ ವಿಕಾಸ್ ಗೌಡ ಅವರನ್ನು ಆಯ್ಕೆ ಮಾಡಲಾಗಿದೆ. ಈ ಕಥೆ ಎಂಬ ಬಹಳ ಗಟ್ಟಿತನದಿಂದ ಕೂಡಿದೆ ಎಂದು ಚಿತ್ರದ ನಿರ್ದೇಶಕ ಜನಾರ್ಧನ್ ಕೊಂಡ್ಲಿ ತಿಳಿಸಿದರು.

ಸಮಾರಂಭದಲ್ಲಿ ಜಿ.ವಿ ನಾಗರಾಜು, ನಾಯಕ ವಿಕಾಸ್ ಗೌಡ, ಸಾಹಿತ್ಯ ರಚನೆಕಾರ ಚೆಲುವರಾಜ್ ಕೋಲುರ್, ನಿರ್ಮಾಪಕ ಲೋಕೇಶ್, ಸಹ ನಿರ್ಮಾಪಕ ಹೇಮಂತ್ ಕುಮಾರ್, ಸಂಗೀತ ನಿರ್ದೇಶಕ ದೇವರಾಜ್ ಗಾಮನಹಳ್ಳಿ ಹಾಗೂ ಪತ್ರಿಕಾ ಪ್ರಚಾರಕ ಎಂ.ಎಲ್ ತುಳಸೀಧರ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ