Wednesday, September 18, 2024

ಪ್ರಾಯೋಗಿಕ ಆವೃತ್ತಿ

ನರೇಗಾ: ಮಾರ್ಚ್ ವೇಳೆಗೆ 10 ನೇ ಸ್ಥಾನಕ್ಕೆ ಬರುತ್ತೇವೆ

ಕೋವಿಡ್,ಚುನಾವಣೆಗಳು,ಮಳೆ ಹಾವಳಿ ಹೆಚ್ಚಾಗಿದ್ದರಿಂದ ನರೇಗಾ ಅನುಷ್ಠಾನದಲ್ಲಿ ಹಿನ್ನಡೆಯಾಗಿದೆ. ಮುಂದಿನ ಮಾರ್ಚ್ ರವರೆಗೆ ಸಮಯವಿದ್ದು,10 ಸ್ಥಾನಕ್ಕೆ ಬರುತ್ತೇವೆ ಎಂದು ಸಂಸದೆ ಸುಮಲತಾ ಅಂಬರೀಶ್ ವಿಶ್ವಾಸ ವ್ಯಕ್ತಪಡಿಸಿದರು.

ನರೇಗಾ ಅನುಷ್ಠಾನದಲ್ಲಿ ಮಂಡ್ಯ ಜಿ.ಪಂ‌.ರಾಜ್ಯದಲ್ಲಿ 29 ನೇ ಸ್ಥಾನದಲ್ಲಿರುವ ಹಿನ್ನಲೆಯಲ್ಲಿ ಇಂದು ಸುಮಲತಾ ಅಂಬರೀಶ್ ಅವರು ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ ಅವರನ್ನು ಭೇಟಿ ಮಾಡಿ ನರೇಗಾ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ನರೇಗಾ ಯೋಜನೆಯಡಿ ಯಾವ ಅಭಿವೃದ್ಧಿ ಕೆಲಸ ಮಾಡಿಸಬಹುದು ಎಂಬ ಬಗ್ಗೆ ನಿರ್ಧಾರ ಮಾಡುವುದು ಜಿಲ್ಲಾ ಪಂಚಾಯಿತಿ ಸಿಇಒ ಮತ್ತು ಪಿಡಿಒ ಗಳದ್ದಾಗಿರುತ್ತದೆ. ನಾವು ಅವರನ್ನು ಕೆಲಸದ ಬಗ್ಗೆ ಕೇಳಬಹುದು. ಜೊತೆಗೆ ಕೆಲಸ ಎಲ್ಲಿ ಆಗಬೇಕು ಎಂಬುವುದನ್ನು ತಿಳಿಸಬಹುದಷ್ಟೆ. ದಿಶಾ ಸಭೆ ಮಾಡಿಸುವುದರಲ್ಲಿ ಸಂಸದರು ನಂಬರ್ ಒನ್ ಇದ್ದಾರೆ, ನರೇಗಾದಲ್ಲಿ ಹಿಂದಿದ್ದಾರೆ ಎಂದು ಹೇಳುವುದೇ ತಪ್ಪು ಕಲ್ಪನೆ ಎಂದರು.

ಜಿಲ್ಲೆಯು ನರೇಗಾದಲ್ಲಿ 2019ರ ತನಕವೂ ನಾಲ್ಕನೇ ಸ್ಥಾನದಲ್ಲಿತ್ತು. ಆದರೆ ಕೋವಿಡ್ ಸಂದರ್ಭದಲ್ಲಿ ಸ್ವಲ್ಪ ಹಿನ್ನಡೆ ಆಗಿದೆ. ಎಂಎಲ್ಸಿ ಎಲೆಕ್ಷನ್, ಮಳೆ ಹಾವಳಿ ಹೆಚ್ಚಾಗಿದ್ದರಿಂದ ನರೇಗಾ ಅನುಷ್ಠಾನದಲ್ಲಿ ಹಿಂದೆ ಬಿದ್ದಿದ್ದೇವೆ. ಈಗ 31 ಸ್ಥಾನದಿಂದ 29ನೇ ಸ್ಥಾನಕ್ಕೆ ಕಳೆದ ಒಂದು ತಿಂಗಳಿಂದ ಬಂದಿದ್ದೇವೆ. ಮಾರ್ಚ್ ವೇಳೆಗೆ ಟಾಪ್ 10ನೇ ಸ್ಥಾನಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಲವು ಪಿಡಿಓಗಳು ಅಕ್ರಮದಲ್ಲಿ ಭಾಗಿಯಾಗಿರುವುದು ಸಾಬೀತಾದ ಹಿನ್ನಲೆಯಲ್ಲಿ ಅಮಾನತು ಮಾಡಲಾಗಿದೆ. ಯಾವುದೇ ಅಧಿಕಾರಿಗಳನ್ನು ಅಮಾನತುಗೊಳಿಸುವ ಅಥವಾ ವರ್ಗಾವಣೆ ಮಾಡುವ ಅಧಿಕಾರ ಸಂಸದರಿಗೆ ಇರುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಬಂದಾಗ ಅಧಿಕಾರಿಗಳು ಬರುತ್ತಾರೆ, ಆದರೆ ಸಂಸದರ ಕಾರ್ಯಕ್ರಮ ಎಂದರೆ ಅವರಿಗೆ ಭಯವಿಲ್ಲ.ಇನ್ನೂ ಜನಸಾಮಾನ್ಯರ ಜೊತೆ ಅಧಿಕಾರಿಗಳು ಹೇಗೆ ವರ್ತಿಸುತ್ತಾರೆ ಎಂಬುದು ಗೊತ್ತಾಗುತ್ತದೆ ಎಂದರು.

ನಾನೇ ಟಾರ್ಗೆಟ್
ನರೇಗಾ ಅನುಷ್ಠಾನದಲ್ಲಿ ನನ್ನ ಪಾತ್ರ ಹೆಚ್ಚಿರದಿದ್ದರೂ ಕೆಲವರು ಹೊಟ್ಟೆಕಿಚ್ಚಿನಿಂದ ನನ್ನನ್ನು ಟಾರ್ಗೆಟ್‌ ಮಾಡಿದ್ದಾರೆ ಎಂದು ಸುಮಲತಾ ಅಂಬರೀಶ್ ಬೇಸರ ವ್ಯಕ್ತಪಡಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!