Sunday, November 22, 2026

ಪ್ರಾಯೋಗಿಕ ಆವೃತ್ತಿ

ಪೂರಿಗಾಲಿ ಹನಿ ನೀರಾವರಿ ಯೋಜನೆ | ಭೂ ಮಾಲೀಕರು ನೀರು ಬಳಕೆದಾರರ ಸಂಘಕ್ಕೆ ಸದಸ್ಯರಾಗಿ ; ನರೇಂದ್ರಸ್ವಾಮಿ

ಪೂರಿಗಾಲಿ ಹನಿ ನೀರಾವರಿ ಯೋಜನೆ ಯಶಸ್ವಿಗೊಳಿಸಲು ಭೂ ಮಾಲೀಕರು ನೀರು ಬಳಕೆದಾರರ ಸಂಘಕ್ಕೆ ಸದಸ್ಯರಾಗಬೇಕೆಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮನವಿ ಮಾಡಿದರು.

ಮಳವಳ್ಳಿ ತಾಲೂಕಿನ ಬಿಜಿಪುರ ಹೋಬಳಿಯ ಪಂಡಿತಹಳ್ಳಿ ಗ್ರಾಮಪಂಚಾಯತಿ ಆವರಣದಲ್ಲಿ ಕೃಷಿ ಇಲಾಖೆ, ಜಲಾಯನ ಇಲಾಖೆ ಬೆಂಗಳೂರು, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಜಲಾಯನ ಅಭಿವೃದ್ಧಿ ಘಟಕ, ೨೦೨೫-೨೬ ನೇ ಸಾಲಿನ ಅರಣ್ಯಘಟಕ ಮತ್ತು ತೋಟಗಾರಿಕೆ ಘಟಕ ಹಾಗೂ ಉತ್ಪಾದನಾ ವ್ಯವಸ್ಥೆ ಘಟಕದಡಿ ಸಸಿಗಳು ಮತ್ತು ಯಾತ್ರಿಕರಣ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸಸಿಗಳು ಮತ್ತು ಯಂತ್ರೋಪಕರಣಗಳನ್ನು ವಿತರಿಸಿ ಮಾತನಾಡಿದ ಅವರು ಮಾತನಾಡಿದರು.

ಬಿ.ಜಿ.ಪುರ ಹೋಬಳಿಗೆ ನೀರಾವರಿಯನ್ನು ಕಲ್ಪಿಸಬೇಕೆಂಬ ಆಕಾಂಕ್ಷೆಯೊAದಿಗೆ ೫೯೩ ಕೋಟಿರೂ ವೆಚ್ಚದಲ್ಲಿ ಪೂರಿಗಾಲಿ ಹನಿ ನೀರಾವರಿ ಯೋಜನೆಯನ್ನು ಜಾರಿಗೆ ತಂದು ಕಾಮಗಾರಿ ಅಂತಿಮಗೊಳ್ಳುತ್ತಿದ್ದರೂ ಕೂಡ ರೈತರ ಸ್ಪಂದನೆ ಸರಿಯಾಗಿ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಾಮಾಜಿಕ ಕೃಷಿ ಪದ್ದತಿ ಯಶಸ್ವಿಯಾಗಬೇಕಾದರೇ ರೈತರು ಸಂಘಕ್ಕೆ ಸದಸ್ಯತ್ವ ಪಡೆದಿರಬೇಕು, ಎಷ್ಟೇ ತಿಳುವಳಿಕೆ ನೀಡಿದರೂ ರೈತರಿಗೆ ಇನ್ನೂ ಅರ್ಥವಾಗಿಲ್ಲ, ಸಂಘದ ಷೇರನ್ನು ನಾನೇ ಭರಿಸುತ್ತೇನೆ, ಯುವಕರು ಗ್ರಾಮಗಳಿಗೆ ಹೋಗಿ ತಿಳುವಳಿಕೆ ಮೂಡಿಸಿ ಸದಸ್ಯತ್ವ ಪಡೆಯುವಂತೆ ಶ್ರಮಿಸಬೇಕೆಂದು ಕರೆ ನೀಡಿದರು.

ಹಿಂದೆ ಹೆಬ್ಬಣಿ ಗ್ರಾಮದಲ್ಲಿ ೨೨೦ ಕೆ.ವಿ.ವಿದ್ಯುತ್ ಘಟಕ ಸ್ಥಾಪನೆ ಮಾಡಲಾಗಿತ್ತು, ಪ್ರಸ್ತುತದಲ್ಲಿ ೪೦೦ ಕೆ.ವಿ.ವಿದ್ಯುತ್ ಘಟಕ ಸ್ಥಾಪನೆಗೆ ಜಾಗ ನಿಗದಿ ನಿಗದಿಪಡಿಸುತ್ತಿರುವುದರಿಂದ ಈ ಭಾಗದಲ್ಲಿ ಕಾರ್ಖಾನೆಗಳು ಪ್ರಾರಂಭಿಸಲು ಹಲವಾರು ಮಂದಿ ಮುಂದೆ ಬರುತ್ತಿದ್ದಾರೆ, ಸಾವಿರಾರು ಯುವಕರಿಗೆ ಉದ್ಯೋಗವು ಸಹ ದೊರೆಯಲಿದೆ, ಯೋಜನೆಯನ್ನು ರೈತರು ಸಮರ್ಪಕವಾಗಿ ಬಳಸಿಕೊಂಡು ಆಧುನಿಕ ಬೇಸಾಯಕ್ಕೆ ಹೆಚ್ಚು ಒತ್ತು ನೀಡಬೇಕೆಂದರು.

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಭಿವೃದ್ಧಿ ಘಟಕದ ೨.೦ ಯೋಜನೆಅಡಿ ಬಿಜಿಪುರ ಹೋಬಳಿಯ ೧೯ ಗ್ರಾಮಗಳಿಗೆ ೬,೪೫೦ ರೈತ ಫಲಾನುಭವಿಗಳಿಗೆ ಯೋಜನೆ ಸೌಲಭ್ಯ ಸಿಗಲಿದೆ, ಮಳೆಗಾಲ ಆರಂಭಗೊಂಡಿರುವ ರೈತರಿಗೆ ತೆಂಗು ಮಾವು ಸಪೋಟ ಸೀಬೆ ದಾಳಿಂಬಿ ನಿಂಬೆ ಹಲಸು, ಫ್ರೂಟ್, ಬಟರ್, ತೇಗ, ಮಹಾಗನಿ, ಹೆಬ್ಬೇವು, ಅಗಸೆ,ಜಂಬುನೇರಳೆ,ಹುಣಸೆ, ಮೇವು ಕತ್ತರಿಸುವ ಯಂತ್ರ,ರಬ್ಬರ್ ನೆಲಹಾಸು, ರಸಮೇವು ಉತ್ಪಾದನೆ ಚೀಲ, ಜೇನುಅಭಿವೃದ್ಧಿ ಘಟಕ ಸೇರಿದಂತೆ ಹಲವು ಸೌಲತ್ತುಗಳನ್ನು ಕೃಷಿ ಇಲಾಖೆ ನೀಡುತ್ತಿದ್ದು ಇದರ ಸದುಪಯೋಗವನ್ನು ಪಡೆದುಕೊಂಡು ಆರ್ಥಿಕವಾಗಿ ಮುನ್ನಡೆಯಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮನ್‌ಮುಲ್ ನಿರ್ದೇಶಕರಾದ ಕೃಷ್ಣೇಗೌಡ, ವಿಶ್ವಾಸ್, ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕ ಮುನ್ನೇಗೌಡ, ಎಸಿಎಫ್ ದಿನೇಶ್ ಕುಮಾರ್, ಸಹಾಯಕ ಕೃಷಿ ನಿರ್ದೇಶಕ ದೀಪಕ್, ಕೃಷಿ ಅಧಿಕಾರಿ ರಾಜೇಶ್, ಮನಮುಲ್ ಉಪಾಧ್ಯಕ್ಷ ಕೃಷ್ಣೇಗೌಡ, ಕೆಪಿಸಿಸಿ ಸದಸ್ಯ ಪುಟ್ಟಸ್ವಾಮಿ, ಗ್ರಾ.ಪಂ.ಅಧ್ಯಕ್ಷ ಶ್ರೀನಿವಾಸ್, ಸದಸ್ಯ ನಾಗರಾಜು,ಪಿಡಿಓ ಎನ್.ಎಂ.ಯಶಸ್ವಿನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಚೆಸ್ಕಾಂ ಎಇಇ ಪ್ರೇಮ್ ಕುಮಾರ್, ವಡ್ಡರಹಳ್ಳಿ ಸೊಸೈಟಿ ಅಧ್ಯಕ್ಷ ದೀಪು, ನಿರ್ದೇಶಕ ಮಂಚನಹಳ್ಳಿ ಸಿದ್ದರಾಜು, ಮುಖಂಡ ದೇವರಾಜು, ಸುರೇಶ್,ರವೀಂದ್ರ ಕುಮಾರ್, ಪಿಡಬ್ಲ್ಯೂಡಿ ಎಇಇ ಸೋಮಶೇಖರ್, ಬಬ್ರುವಾಹನ ಸೇರಿದಂತೆ ಹಲವರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ