Thursday, September 19, 2024

ಪ್ರಾಯೋಗಿಕ ಆವೃತ್ತಿ

NEET ಫಲಿತಾಂಶ ವಿವಾದ| ರಾಷ್ಟ್ರೀಯ ಪರೀಕ್ಷಾ ಸಂಸ್ಥೆ( NTA) ನೀಡಿದ ಸ್ಪಷ್ಟೀಕರಣವೇನು ?

NEET ಫಲಿತಾಂಶ ವಿವಾದದ ಬೆನ್ನಲ್ಲೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ( NTA)ಯು ಹಲವು ಸ್ಪಷ್ಟನೆಗಳನ್ನು ನೀಡಿದೆ. ನೀಟ್ ಟಾಪರ್‌ಗಳ ಬಗ್ಗೆ, ಹೆಚ್ಚಿನ ಕಟ್-ಆಫ್‌ಗಳ ಕುರಿತು ಸ್ಪಷ್ಟೀಕರಣವನ್ನು ನೀಡಿದೆ.

NTA ತನ್ನ ವಿವರವಾದ ಹೇಳಿಕೆಯಲ್ಲಿ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) NEET-UG ನಲ್ಲಿ ಕಟ್-ಆಫ್ ಮತ್ತು ಟಾಪರ್‌ಗಳ ಸಂಖ್ಯೆಯಲ್ಲಿನ ಹೆಚ್ಚಳವು ಪರೀಕ್ಷೆಯ ಸ್ಪರ್ಧಾತ್ಮಕ ಸ್ವರೂಪವನ್ನು ಪ್ರತಿಬಿಂಬಿಸುತ್ತದೆ ಮತ್ತು ಪರೀಕ್ಷೆಯ ಸಮಗ್ರತೆಗೆ ಧಕ್ಕೆಯಾಗಿಲ್ಲ ಎಂದು ಹೇಳಿದೆ.

  • ಕಟ್-ಆಫ್‌ನಲ್ಲಿನ ಹೆಚ್ಚಳವು NEET ಪರೀಕ್ಷೆಯ ಸ್ಪರ್ಧಾತ್ಮಕ ಸ್ವರೂಪವನ್ನು ತೋರಿಸುತ್ತದೆ. ಹಣದ ಅವ್ಯವಹಾರವು 67 ಅಭ್ಯರ್ಥಿಗಳು ಉನ್ನತ ಶ್ರೇಣಿಯನ್ನುಗಳಿಸಲು ಕಾರಣವಾಯಿತು ಎಂದು ಹಲವು ವಿದ್ಯಾರ್ಥಿಗಳು ಆರೋಪಿಸಿರುವುದು ಸತ್ಯಕ್ಕೆ ದೂರವಾಗಿದೆ ಎಂದಿದೆ.
  • NCERT ಪಠ್ಯಪುಸ್ತಕಗಳಲ್ಲಿ ಮಾಡಿದ ಬದಲಾವಣೆಗಳು, ಗ್ರೇಸ್ ಮಾರ್ಕ್‌ಗಳು ಕೆಲವು ಆಕಾಂಕ್ಷಿಗಳು  ಹೆಚ್ಚಿನ ಅಂಕಗಳನ್ನು ಪಡೆಯಲು ಕಾರಣವಾಗಿವೆ ಎಂದು NTA ಹೇಳಿದೆ.

NEET-UG ಪ್ರವೇಶ ಪರೀಕ್ಷೆಯಲ್ಲಿ 67 ಅಭ್ಯರ್ಥಿಗಳು ಮೊದಲ Rank ಗಳಿಸಲು ಕಾರಣವಾದ ಅಂಕಗಳ ವಿವಾದದ ನಡುವೆ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಗುರುವಾರ ಕೀ ಉತ್ತರ ಮತ್ತು ನಂತರದ ಪರಿಷ್ಕರಣೆ ಬಗ್ಗೆ ತಿಳಿಸಿದೆ. ಸಮಯದ ನಷ್ಟಕ್ಕೆ ನೀಡಲಾದ ಪರಿಹಾರದ ಭಾಗವಾಗಿ ಅಂಕಗಳನ್ನು ನೀಡಲಾಗಿದೆ ಎಂದು ಹೇಳಿದೆ.

“720/720 ಅಂಕಗಳನ್ನು ಪಡೆದ 67 ಅಭ್ಯರ್ಥಿಗಳ ಪೈಕಿ 44 ಮಂದಿ ಭೌತಶಾಸ್ತ್ರದ ಒಂದು ಉತ್ತರದ ಕೀ ಉತ್ತರವನ್ನು ಪರಿಷ್ಕರಣೆ ಮಾಡಿದ್ದಾರೆ ಮತ್ತು ಆರು ಮಂದಿ ಸಮಯ ನಷ್ಟಕ್ಕೆ ಪರಿಹಾರದ ಅಂಕಗಳನ್ನು ಹೊಂದಿದ್ದಾರೆ” ಎಂದು ಎನ್‌ಟಿಎ ಹೇಳಿದೆ. ಪರೀಕ್ಷೆಯಲ್ಲಿ 67 ವಿದ್ಯಾರ್ಥಿಗಳು ಒಂದೇ ಶ್ರೇಣಿಯನ್ನು ಹಂಚಿಕೊಂಡಿದ್ದಾರೆ ಎಂದು ತಿಳಿಸಿದೆ.

ಹರಿಯಾಣದ ಒಂದೇ ಕೇಂದ್ರದ ಆರು ಮಂದಿ ಟಾಪರ್‌ಗಳು ಬಂದಿದ್ದಾರೆಂಬ ಆರೋಪವನ್ನು ಎನ್‌ಟಿಎ ನಿರಾಕರಿಸಿದೆ. “ಟಾಪರ್‌ಗಳು ದೇಶಾದ್ಯಂತ ಇದ್ದಾರೆ, ಎಂದು ನಮೂದಿಸುವುದು ಸೂಕ್ತವಾಗಿದೆ” ಎಂದು ಎನ್‌ಟಿಎ ಹೇಳಿದೆ.

571 ನಗರಗಳ 4,750 ಕೇಂದ್ರಗಳಲ್ಲಿ ಮೇ 5 ರಂದು ನಡೆಸಲಾದ ವೈದ್ಯಕೀಯ ಪ್ರವೇಶ ಪರೀಕ್ಷೆ NEET (ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ) ಮತ್ತು ಅಂಕಗಳ ಏರಿಕೆ ಅಕ್ರಮಗಳ ಆರೋಪದ ಬಗ್ಗೆಯೂ  ಸ್ಪಷ್ಟನೆ ನೀಡಿದೆ.

ಈ ಹಿಂದೆ ಎಕ್ಸ್‌ ಪೋಸ್ಟ್‌ನಲ್ಲಿ, ಆಕಾಂಕ್ಷಿಯೊಬ್ಬರು, “ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆಯ ನಂತರ ಬಿಡುಗಡೆಯಾದ ಫಲಿತಾಂಶಗಳಲ್ಲಿ 67 ವಿದ್ಯಾರ್ಥಿಗಳು 720ರಲ್ಲಿ 720 ಅಂಕಗಳನ್ನು ಗಳಿಸಿರುವುದು ಅನುಮಾನವನ್ನು ಹುಟ್ಟುಹಾಕಿದೆ. ಇದು ದೇಶದ ಲಕ್ಷಾಂತರ ಅಭ್ಯರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿದೆ. ಎಂದು ಆಕ್ರೋಶ ವ್ಯಕ್ತಪಡಿಸಿ, ಸರಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದರು.

ಈ ಪ್ರಶ್ನೆಗಳಿಗೆ ತನ್ನ ವಿವರವಾದ ಪ್ರತಿಕ್ರಿಯೆಯಲ್ಲಿ ಎನ್‌ಟಿಎಯು,  NEET-UG ಯಲ್ಲಿನ ಕಟ್-ಆಫ್ ಮತ್ತು ಟಾಪರ್‌ಗಳ ಸಂಖ್ಯೆಯಲ್ಲಿನ ಹೆಚ್ಚಳವು ಪರೀಕ್ಷೆಯ ಸ್ಪರ್ಧಾತ್ಮಕ ಸ್ವರೂಪವನ್ನು ಪ್ರತಿಬಿಂಬಿಸುತ್ತದೆ ಮತ್ತು ಪರೀಕ್ಷೆಯ ಸಮಗ್ರತೆಗೆ ರಾಜಿಯಾಗಿಲ್ಲ ಎಂದು ಹೇಳಿದೆ.

“ಕಟ್‌ಆಫ್‌ನಲ್ಲಿನ ಹೆಚ್ಚಳವು ಪರೀಕ್ಷೆಯ ಸ್ಪರ್ಧಾತ್ಮಕ ಸ್ವರೂಪವನ್ನು ಪ್ರತಿಬಿಂಬಿಸುತ್ತದೆ ಮತ್ತು ಈ ವರ್ಷ ಅಭ್ಯರ್ಥಿಗಳು ಸಾಧಿಸಿದ ಹೆಚ್ಚಿನ ಕಾರ್ಯಕ್ಷಮತೆಯ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ” ಎಂದು ಹಿರಿಯ ಎನ್‌ಟಿಎ ಅಧಿಕಾರಿಯೊಬ್ಬರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

“2023ರಲ್ಲಿ ಹಾಜರಾದ ಅಭ್ಯರ್ಥಿಗಳ ಸಂಖ್ಯೆ 20,38,596 ಆಗಿದ್ದರೆ, 2024 ರಲ್ಲಿ ಹಾಜರಾದ ಅಭ್ಯರ್ಥಿಗಳ ಸಂಖ್ಯೆ 23,33,297 ಕ್ಕೆ ಏರಿದೆ. ಅಭ್ಯರ್ಥಿಗಳ ಹೆಚ್ಚಳವು ಸ್ವಾಭಾವಿಕವಾಗಿ ಟಾಪರ್ ಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಸ್ಪಷ್ಟನೆ ನೀಡಿದೆ.

ಕೆಲವು ವಿದ್ಯಾರ್ಥಿಗಳಿಗೆ ನೀಡಲಾದ ಗ್ರೇಸ್ ಅಂಕಗಳ ಕುರಿತು NTA, NEET-UG, ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯ ಸಮಯದಲ್ಲಿ ಪರೀಕ್ಷಾ ಸಮಯದ ನಷ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿ ಅನೇಕ ಉಚ್ಚ ನ್ಯಾಯಾಲಯಗಳಿಗೆ ಕೆಲವರು ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ತಿಳಿಸಿದೆ.

“ಪರೀಕ್ಷಾ ಸಮಯದ ನಷ್ಟದ ಬಗ್ಗೆ ರಿಟ್ ಅರ್ಜಿಗಳು ಮತ್ತು ಪ್ರಾತಿನಿಧ್ಯಗಳ ಮೂಲಕ ಅಭ್ಯರ್ಥಿಗಳು ಎತ್ತಿದ ಕಳವಳಗಳನ್ನು ಕಂಡು ಹಿಡಿಯಲಾಯಿತು ಮತ್ತು 1,563 ಅಭ್ಯರ್ಥಿಗಳಿಗೆ ಸಮಯದ ನಷ್ಟಕ್ಕೆ ಪರಿಹಾರವನ್ನು ನೀಡಲಾಗಿದೆ ಮತ್ತು ಅಂತಹ ಅಭ್ಯರ್ಥಿಗಳ ಪರಿಷ್ಕೃತ ಅಂಕಗಳು -20 ರಿಂದ 720 ಅಂಕಗಳವರೆಗೆ ಬದಲಾಗುತ್ತವೆ. ಇವುಗಳಲ್ಲಿ, ಪರಿಹಾರದ ಅಂಕಗಳಿಂದಾಗಿ ಇಬ್ಬರು ಅಭ್ಯರ್ಥಿಗಳ ಸ್ಕೋರ್ ಕ್ರಮವಾಗಿ 718 ಮತ್ತು 719 ಆಗಿರುತ್ತದೆ” ಎಂದು ತಿಳಿಸಿದೆ.

ಮೇ 5 ರಂದು ರಾಜಸ್ಥಾನದ ಪರೀಕ್ಷಾ ಕೇಂದ್ರವೊಂದರಲ್ಲಿ ತಪ್ಪು ಪ್ರಶ್ನೆ ಪತ್ರಿಕೆಗಳ ವಿತರಣೆಯು, ಕೆಲವು ಅಭ್ಯರ್ಥಿಗಳು ಪತ್ರಿಕೆಗಳೊಂದಿಗೆ ಹೊರ ನಡೆಯಲು ಕಾರಣವಾಯಿತು ಎಂದು ಎನ್‌ಟಿಎ ಹೇಳಿಕೊಂಡಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ ಎಂದು ಸಂಸ್ಥೆ ತಿಳಿಸಿದೆ.

ಫಲಿತಾಂಶ ಪ್ರಕಟವಾದ ಒಂದು ದಿನದ ನಂತರ, NTA ವೈದ್ಯಕೀಯ ಪ್ರವೇಶ ಪರೀಕ್ಷೆ NEET-UG ನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಹೇಳುವ ವರದಿಗಳು “ಸಂಪೂರ್ಣವಾಗಿ ಆಧಾರ ರಹಿತವಾಗಿವೆ ಎಂದು ತಿಳಿಸಿದೆ.

ಪ್ರಧಾನಿ ಮೋದಿಯವರ  ರ್ಕಾರ ರಚನೆ ಮತ್ತು ಸಂಸದರ ಖರೀದಿಯ ಕಸರತ್ತು ಮುಗಿದಿದ್ದರೆ ನೊಂದ ನೀಟ್ ಪರೀಕ್ಷಾರ್ಥಿಗಳ ಅಹವಾಲು ಆಲಿಸಲಿ. ನೀಟ್ ಪರೀಕ್ಷಾ ಅಕ್ರಮದ ಬಗ್ಗೆ ತನಿಖೆಯಾಗಲಿ ಎಂದು ಸಿಎಂ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.

2019ರಲ್ಲಿ ಒಬ್ಬ ವಿದ್ಯಾರ್ಥಿ, 2020ರಲ್ಲಿ ಒಬ್ಬ, 2021ರಲ್ಲಿ ಮೂವರು, 2022ರಲ್ಲಿ ಒಬ್ಬ, 2023ರಲ್ಲಿ ಇಬ್ಬರು ವಿದ್ಯಾರ್ಥಿಗಳು ನೂರಕ್ಕೆ ನೂರು ಪ್ರತಿಶತ ಅಂಕ ಪಡೆದಿದ್ದರೆ ಈ ವರ್ಷ – 67 ವಿದ್ಯಾರ್ಥಿಗಳು ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ನೀಟ್‌ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ ಋಣಾತ್ಮಕ ಅಂಕಗಳಿರುವ ಕಾರಣ ಇಷ್ಟೊಂದು ಮಂದಿ ನೂರು ಪ್ರತಿಶತ ಅಂಕ ಗಳಿಸುವುದು ಅಸಾಧ್ಯ ಎನ್ನಿಸುತ್ತದೆ. ಇದು ಕಾಕತಾಳೀಯವೋ ಅಥವಾ ಹೊಸ ಪ್ರಯೋಗವೋ? ಇದನ್ನು ಮೋದಿ ಸರ್ಕಾರವೇ ಸ್ಪಷ್ಟಪಡಿಸಬೇಕು ಎಂದಿದ್ದಾರೆ.

“>

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!