Thursday, September 19, 2024

ಪ್ರಾಯೋಗಿಕ ಆವೃತ್ತಿ

ಗೋದಿ ಮಾಧ್ಯಮಗಳ ಕಾಡುತ್ತಿರುವ ನೆಹರೂ ಸಿಂಡ್ರೋಮ್ !

ದೇಶದ ಮಾಧ್ಯಮಗಳು ಅದರಲ್ಲೂ ಮುಖ್ಯವಾಗಿ ಗೋದಿ ಟಿವಿ ಮಾಧ್ಯಮಗಳಿಗೆ ನೆಹರೂ ಸಿಂಡ್ರೋಮ್ ಕಾಡುತ್ತಿದೆ ಎನ್ನಿಸುತ್ತಿದೆ. ಇಷ್ಟು ದಿನಗಳ ತನಕ ಬಿಜೆಪಿ ಐಟಿ ಸೆಲ್ ಕೊಡುವ ನರೆಟೀವ್ ಅನ್ನು ಪ್ರಸಾರ ಮಾಡಿಕೊಂಡು, ನೆಹರೂ ದೇಶ ಹಾಳು ಮಾಡಿದರು, ನೆಹರು ದೇಶ ವಿಭಜನೆ ಮಾಡಿದರು ಎಂದೆಲ್ಲ ತುತ್ತೂರಿ ಓದುತ್ತಿದ್ದವು.

ಈಗ ನೆಹರೂ ಮೂರು ಬಾರಿ ಪ್ರಧಾನಿ ಆಗಿ ಪ್ರಮಾಣ ವಚನ ಸ್ವೀಕರಿಸಿದಂತೆ, ಮೋದಿಜೀ ಸಹ ಮೂರನೇ ಬಾರಿ ಪ್ರಧಾನಿ ಆಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ ಎಂದು ನೆಹರು ಅವರ ಮುಂದೆ ಮೋದಿ ತುಲನೆ ಮಾಡುತ್ತ ನೆಹರು ಸಿಂಡ್ರೋಮ್ ಗೆ ಒಳಗಾಗಿ ಜನರ ಕೋಪಕ್ಕೆ ಗುರಿಯಾಗಿವೆ.

ನೆಹರೂ ಅವರು ತಮ್ಮ ನಾಯಕತ್ವದಲ್ಲಿ 1952 ರಲ್ಲಿ 364 ಸ್ಥಾನಗಳಲ್ಲಿ, 1957 ರಲ್ಲಿ 371 ಸ್ಥಾನ ಹಾಗೂ 1962 ರಲ್ಲಿ 361 ಸ್ಥಾನ ಪಡೆದಿದ್ದರು. ಆದರೆ ಮೋದಿಯವರು 2014 ರಲ್ಲಿ 282 ಸ್ಥಾನ ,2019 ರಲ್ಲಿ 303 ಹಾಗೂ 2024 ರಲ್ಲಿ 240 ಸ್ಥಾನ ಗೆಲ್ಲುವ ಮೂಲಕ ಕುಸಿದಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನ ಸಾಮಾನ್ಯರು ಕಮೆಂಟ್ ಹಾಕುತ್ತಾ, ಎಲ್ಲಾ ಸಮುದಾಯದವರನ್ನೂ ಒಳಗೊಂಡಿದ್ದ ನೆಹರೂ ಸಂಪುಟ ಎಲ್ಲಿ, ಕ್ರೈಸ್ತ, ಸಿಖ್, ಮುಸ್ಲಿಂ ಸಮುದಾಯದರಿಲ್ಲದ ಮೋದಿ ಮಂತ್ರಿ ಮಂಡಲ ಎಲ್ಲಿ? ಇದೇನಾ ನಿಮ್ಮ ಸಬ್ ಕಾ ಸಾಥ್ ಸಬ್ ಕಾ ವಿಶ್ವಾಸ್ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

ನೆಹರೂ ಅವರ ಅಭಿವೃದ್ಧಿ, ಸಾಧನೆ ಇಂದಿಗೂ ಮಾತನಾಡುತ್ತಿವೆ. ನಿಮ್ಮ ಸಾಧನೆ ಏನೆಂಬ ಬಗ್ಗೆ ಮಾತನಾಡಿ, ಮೂರನೇ ಬಾರಿ ಅಧಿಕಾರಕ್ಕೆ ಏರಿದ್ದು ಮುಖ್ಯವಲ್ಲ, ಕಳೆದ ಹತ್ತು ವರ್ಷಗಳಲ್ಲಿ ನೀವೇನು ಮಾಡಿದ್ದೀರಿ ಎನ್ನುವುದು ಮುಖ್ಯ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನಸಾಮಾನ್ಯರು ಮೋದಿಯವರಿಗೆ ಪ್ರಶ್ನೆ ಮಾಡುತ್ತಾ, ಗೋದಿ ಮೀಡಿಯಾಗಳೇ ನೆಹರೂ ಸಿಂಡ್ರೋಮ್ ನಿಂದ ಹೊರ ಬನ್ನಿ ಎಂದು ವಾಗ್ದಾಳಿ ನಡೆಸುತ್ತಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!