ಮಂಡ್ಯ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಎಲೆಕೊಪ್ಪ ದಿನೇಶ್ ನೇತೃತ್ವದಲ್ಲಿ ಇತ್ತೀಚಿಗಷ್ಟೇ ನೆಲ್ಲಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ 12 ನಿರ್ದೇಶಕರ ಸ್ಥಾನಗಳನ್ನು ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಪ್ರಚಂಡ ಗೆಲುವಿನೊಂದಿಗೆ ಪಡೆಯುವ ಮೂಲಕ ಎದುರಾಳಿ ಜೆ.ಡಿ.ಎಸ್ ಪಕ್ಷದ ಒಬ್ಬ ಸದಸ್ಯರು ಕೂಡ ಆಯ್ಕೆಯಾಗದ ರೀತಿ ಧೂಳಿಪಟ ಮಾಡಿದರು.
ನೆಲ್ಲಿಗೆರೆ ಸಹಕಾರ ಪತ್ತಿನ ಸಹಕಾರ ಸಂಘಕ್ಕೆ ಇಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಕಾಂಗ್ರೆಸ್ ಪಕ್ಷದ ಕೃಷಿ ಸಚಿವ ಚೆಲುವರಾಯಸ್ವಾಮಿ ಬೆಂಬಲಿತ ಹಂಪಾಪುರ ಗ್ರಾಮದ ನರಸಿಂಹಯ್ಯ ಅಧ್ಯಕ್ಷರಾಗಿ ಜಿ ನಾಗತಿಹಳ್ಳಿ ಗ್ರಾಮದ ಶಾಂತಕುಮಾರ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ವಿಜಯದ ಸಂಭ್ರಮವನ್ನು ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸುವುದರ ಮೂಲಕ ಸಚಿವ ಎನ್ ಚೆಲುವರಾಯಸ್ವಾಮಿ ಮತ್ತು ಕಾಂಗ್ರೆಸ್ ನಾಯಕರಿಗೆ, ಮುಖಂಡರಿಗೆ ಜೈಕಾರ ಕೂಗಿದರು.
ರಾಜ್ಯ ಫೆಡ್ರೇಷನ್ ಸದಸ್ಯ ತಿಮ್ಮರಾಯಿಗೌಡ ಮಾತನಾಡಿ, ನಾಗಮಂಗಲ ತಾಲೂಕಿನ ವ್ಯಾಪ್ತಿಯಲ್ಲಿ ಇರುವ ಸಹಕಾರ ಸಂಘಗಳು ಚೆಲುವರಾಯಸ್ವಾಮಿ ಚಿಕ್ಕಾಣೆ ಹಿಡಿತದಲ್ಲಿವೆ ಅವರ ಆಶೀರ್ವಾದದಂತೆ ಎಲ್ಲಾ ಸಂಘಗಳು ಕೂಡ ಉತ್ತಮ ರೀತಿ ನಡೆದುಕೊಂಡು ಹೋಗುತ್ತಿವೆ ಎಂದರು.
ಮಾಜಿ ತಾಲೂಕು ಪಂಚಾಯತಿ ಅಧ್ಯಕ್ಷ ನೆಲ್ಲಿಗೆರೆ ಮೂಡ್ಲಪ್ಪ ಮಾತನಾಡಿ, ನಮ್ಮ ಸಹಕಾರ ಸಂಘದಲ್ಲಿ ನಡೆದ ಚುನಾವಣೆಗೆ ಜೆಡಿಎಸ್ ಪಕ್ಷ ಧೂಳಿಪಟವಾಗಿದೆ ನೂತನವಾಗಿ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ನೀವುಗಳು ಉತ್ತಮ ರೀತಿ ಸಂಘವನ್ನು ನಡೆಸಿಕೊಂಡು ಹೋಗಬೇಕೆಂದು ತಿಳಿಸಿದರು
ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ನೆಲ್ಲಿಗೆರೆ ಸಹಕಾರ ಸಂಘದ ನೂತನ ನಿರ್ದೇಶಕರಾದ ಎಲೆಕೊಪ್ಪ ದಿನೇಶ್ ಮಾತನಾಡಿ, ಈ ಸೊಸೈಟಿಗೆ 12 ಜನ ನಿರ್ದೇಶಕರ ಆಯ್ಕೆ ಮಾಡಿರುವ ವಿಜಯಕ್ಕೆ ಕಾಂಗ್ರೆಸ್ ಕಾರ್ಯಕರ್ತರು, ಸಂಘದ ಷೇರುದಾರರು, ಕಾಂಗ್ರೆಸ್ ಮುಖಂಡರು, ನಮ್ಮ ನಾಯಕರಾದ ಚೆಲುವರಾಯಸ್ವಾಮಿ ಅವರಿಗೆ ಧನ್ಯವಾದಗಳು ತಾಲೂಕಿನ ವ್ಯಾಪ್ತಿಯಲ್ಲಿರುವ 17 ಸಹಕಾರ ಸಂಘದಲ್ಲಿ 16 ಸಂಘಗಳು ಕಾಂಗ್ರೆಸ್ ಹಿಡಿತದಲ್ಲಿವೆ. ಜನರ ದೃಷ್ಟಿ ಅಭಿವೃದ್ಧಿಯತ್ತ ಎಂದು ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರಿಗೆ ಧನ್ಯವಾದಗಳು ಎಂದರು.
ಇದೇ ಸಂದರ್ಭದಲ್ಲಿ ನೂತನ ನಿರ್ದೇಶಕರಾದ ಕೆವಿ ದಿನೇಶ್, ಯಶವಂತಗೌಡ, ಗಾಯಿತ್ರಿ, ಕಾರ್ತಿಕ್, ರಮೇಶ್, ಲಕ್ಷ್ಮೀದೇವಿ, ಸುಬ್ರಮಣಿ, ಹೊಂಬಾಳಯ್ಯ, ಮಹಾಲಕ್ಷ್ಮಿ, ಸುನಿಲ್, ಕುಮಾರ್, ಕಾಂಗ್ರೆಸ್ ಮುಖಂಡರಾದ . ಬಸವರಾಜು, ಜಯರಾಮ, ಕೃಷ್ಣಮೂರ್ತಿ, ಜಗದೀಶ್, ರಂಗಣ್ಣ, ಶಿವಪ್ಪ, ದೇವೇಗೌಡ, ಗೋವಿಂದರಾಜು ಮತ್ತಿತರರಿದ್ದರು.




