Tuesday, November 24, 2026

ಪ್ರಾಯೋಗಿಕ ಆವೃತ್ತಿ

ಪ್ರಸಿದ್ದ ನಾಲ್ಕು ಸಿನಿಮಾ ಸಂಸ್ಥೆಗಳನ್ನು ಎನ್.ಎಫ್.ಡಿ.ಸಿ ಜೊತೆಗೆ ಕರಗಿಸುವ ಹುನ್ನಾರವೇಕೆ?

✍ ರಜನಿಕಾಂತ್ ಚಟ್ಟೇನಹಳ್ಳಿ


  • ಸಿನಿಮಾ ಸಂಸ್ಥೆಗಳ ವಿಲೀನಕ್ಕೆ ಬಿಮಲ್‌ ಜುಲ್ಕ ನೇತೃತ್ವದಲ್ಲಿ ಹೈ ಪವರ್ಡ್‌ ಕಮಿಟಿ ರಚನೆ

  • ಸಾರ್ವಜನಿಕ ಚರ್ಚೆ ಹುಟ್ಟು ಹಾಕಿದ ನಾಲ್ಕು ಸಂಸ್ಥೆಗಳ ವಿಲೀನ ಪ್ರಸ್ತಾಪ 
  • ಶಿಫಾರಸ್ಸು ಹಿಂಪಡೆಯಲು 800ಕ್ಕೂ ಹೆಚ್ಚು ಮಂದಿಯಿಂದ ಬಹಿರಂಗ ಹೇಳಿಕೆ

ಕಾರ್ಪೋರೇಟ್ ಹಿತಾಶಕ್ತಿಗಳ ಮೂಲಕ ವಿಲೀನ ಕಾರ್ಯಗಳೇ ನಮ್ಮ ಆದ್ಯ ಕರ್ತವ್ಯವೆಂದಾದರು ಹೇಳಿ ಸಾರ್ವಜನಿಕ ಭಿನ್ನತೆಗೆ ತೆರೆ ಎಳುದುಬಿಡಿ.

ಬಹುಶಃ ಈ ಸಾಹಿತ್ಯಾತ್ಮಕ ರಂಗಭೂಮಿ ಮತ್ತು ಸಾಂಸ್ಕೃತಿಕ ಘಟಕಗಳು ಯಾವ ಕಾಲದಲ್ಲಿ ಹುಟ್ಟಿಕೊಂಡವು ಎಂಬುದಕ್ಕೆ ಯಾವುದೇ ನಿಖರ ದಾಖಲೆಗಳು ನಮಗೆ ಸಿಗುವುದಿಲ್ಲ. ಆದರೆ ತೆರೆಯ ಮೇಲೆ ಸಿನಿಮಾಗಳು ಸಾರ್ವಜನಿಕ ಗೊಂಡು ನೂರಮೂವತ್ತು ವರ್ಷಗಳಾಗಿವೆ ಎನ್ನುವುದನ್ನು ಕರಾರುವಕ್ಕಾಗಿ ಹೇಳಬಹುದು.

ಸಿನಿಮಾ ರಂಗಗಳು ಒಂದು ಉದ್ಯಮವಾಗಿ ಬೆಳೆಯಲು ಶುರುವಾಗುವುದಕ್ಕೆ ಅನೇಕರ ಶ್ರಮ ಮತ್ತು ತಂತ್ರಜ್ಙಾನದ ಪ್ರಯೋಗಗಳು ಪ್ರಮುಖವಾಗಿವೆ. ಅದರ ಫಲವಾಗಿಯೇ ಅನೇಕ ವೇದಿಕೆಗಳು ಬೆಳೆದುಕೊಂಡು ಅವುಗಳು ಆರ್ಥಿಕವಾಗಿಯೂ ನೆಲೆ ನಿಂತವು. ಆದರೆ ಈಗ ಅವುಗಳು ಧೂಳೀಪಟವಾಗುವ ಎಲ್ಲಾ ನೋಟಗಳನ್ನು ಕೇಂದ್ರ ಸರ್ಕಾರ ಮಾಡಿಟ್ಟಿರುವುದು ಅಕ್ಷಮ್ಯ.

ಮೂರ್ನಾಲ್ಕು ವಾರಗಳ ಹಿಂದೆ ಮಂಡ್ಯಕ್ಕೆ ಬಂದತಹ ಅಮಿತ್‌ ಷಾ ಜನಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಅಮೂಲ್‌ ಮತ್ತು ರಾಜ್ಯದ ನಂದಿನಿಯನ್ನು ವಿಲೀನ ಮಾಡುವುದಾಗಿ ಹೇಳಿ ಹೋಗಿದ್ದಾರೆ. ಅದರ ಬೆನ್ನಲ್ಲಾಗಲೇ ಕಲೆ, ರಂಗಭೂಮಿ ಮತ್ತು ಸಾಂಸ್ಕೃತಿಕವಾಗಿ ತಮ್ಮದೇ ವೇದಿಕೆಗಳ ಮೂಲಕ ಬೆಳೆದು ಉದ್ಯಮವಾಗಿ ಮೆರೆಯುತ್ತಿರುವ ಎಫ್.ಡಿ, ಎನ್‌.ಎಫ್‌.ಎ.ಐ, ನ್ನು ಸೇರಿದಂತೆ ಪ್ರಮುಖ ನಾಲ್ಕು ಸಂಸ್ಥೆಗಳನ್ನೇ ಎನ್.ಎಫ್.ಡಿ.ಸಿ ಜೊತೆಗೆ ವಿಲೀನ ಮಾಡಿರುವುದು ದೇಶದಾದ್ಯಂತ ರಂಗಭೂಮಿ ಕಲಾವಿದರು ಮತ್ತು ಸಾರ್ವಜನಿಕರ ನಡುವೆ ತೀರ್ವವಾದ ಚರ್ಚೆಗೆ ಗುರಿಮಾಡಿಕೊಟ್ಟಿದೆ.

ಕಳೆದ ಡಿಸೆಂಬರ್‌ 31 2022 ರಂದು ನ್ಯಾಷಿನಲ್‌ ಫಿಲ್ಮ್ಸ್‌ ಡೆವೆಲಪ್ಮೆಂಟ್ ಕಾರ್ಪೋರೇಷನ್‌ ಜೊತೆಗೆ ಫಿಲ್ಮ್ಸ್ ಡಿವಿಶನ್‌(ಎಫ್‌ ಡಿ) ನ್ಯಾಷಿನಲ್‌ ಫಿಲ್ಮ್‌ ಆರ್ಕೈವ್ಸ್‌ ಆಫ್‌ ಇಂಡಿಯಾ (ಎನ್‌ ಎಫ್‌ ಎ ಐ) ಚಿಲ್ರನ್ಸ್‌ ಫಿಲ್ಮ್‌ ಸೊಸೈಟಿ ಆಫ್‌ ಇಂಡಿಯಾ( ಸಿ ಎಫ್‌ ಎಸ್‌ ಐ) ಹಾಗು ಡೈರೆಕ್ಟೋರೇಟ್‌ ಆಫ್‌ ಫಿಲ್ಮ್‌ ಫೆಸ್ಟಿವಲ್ಸ್(‌ಡಿ ಎಫ್‌ ಎಫ್)‌ ಗಳನ್ನು ವಿಲೀನ ಗೊಳಿಸಿದರು. ಕೇಂದ್ರ ಸರ್ಕಾರದ ಈ ನಿಲುವಿನ ಉದ್ದೇಶಗಳೇನು ಎಂಬುದನ್ನು ಅನೇಕ ಆಯಾಮಗಳಿಂದ ನೋಡದಿದ್ದರೆ ಇದರ ವಿಲೀನತೆಯ ಮರ್ಮವೂ ನಮಗೆ ತಿಳಿಯುವುದಿಲ್ಲ.

1948 ರಲ್ಲಿ ಶುರುವಾದ ಫಿಲ್ಮ್‌ ಡಿವಿಶನ್‌(ಎಫ್‌ ಡಿ) ಸಿನಿಮಾ ಮಾಡುವವರಿಗೆ ಬೆಂಬಲ ನೀಡುವುದಕ್ಕೆ ಮತ್ತು ಅದರಲ್ಲೂ ಮುಖ್ಯವಾಗಿ ಸಾಹಿತ್ಯದ ಕಲ್ಪನೆಯನ್ನು ನಟನೆಯ ಮೂಲಕ ಗುರುತಿಸಲು, ಮತ್ತು ಸಾಕ್ಷಿ ಚಿತ್ರಗಳಿಗೆ ಒಂದು ವೇದಿಕೆಯಾಗಿ ಸೃಷ್ಟಿತವಾದ ಸಂಸ್ಥೆ ಎನ್ನಬಹುದು. 1964 ರಲ್ಲಿ ಸ್ಥಾಪಿತವಾದ ನ್ಯಾಷಿನಲ್‌ ಫಿಲ್ಮ್‌ ಆರ್ಕೈವ್ಸ್ ಆಫ್‌ ಇಂಡಿಯಾ (ಎನ್‌ ಎಫ್‌ ಎ ಐ) ವು ಸಿನಿಮಾಗಳಲ್ಲಿ ಕಂಡುಬರುವ ಅನೇಕ ತೊಂದರೆ, ತಾಂತ್ರಿಕ ದೋಷಗಳು ಹಾಗು ಸಿನಿಮಾ ಪರಂಪರೆಯನ್ನು ಮತ್ತೊಂದು ಆಯಾಮಕ್ಕೆ ಒಗ್ಗಿಸಿಕೊಳ್ಳಲು ನೆಲೆನಿಂತಿತು. ಹೀಗೆ ಇನ್ನೂ ಅನೇಕ ವಿವಿಧ ಉದ್ದೇಶಗಳ ಈಡೇರಿಕೆಗೆ ಚಿಲ್ರನ್ಸ್‌ ಫಿಲ್ಮ್‌ ಸೊಸೈಟಿ ಆಫ್‌ ಇಂಡಿಯಾ( ಸಿ ಎಫ್‌ ಎಸ್‌ ಐ) -1955. ಹಾಗು ಡೈರೆಕ್ಟೋರೇಟ್‌ ಆಫ್‌ ಫಿಲ್ಮ್‌ ಫೆಸ್ಟಿವಲ್ಸ್ -1973 (‌ಡಿ ಎಫ್‌ ಎಫ್)‌ ಗಳು ಮುನ್ನೆಲೆಗೆ ಬಂದವು.

ಇನ್ನು 1975 ರಲ್ಲಿ ಹುಟ್ಟಿಕೊಂಡ ನ್ಯಾಷಿನಲ್‌ ಫಿಲ್ಮ್ ಡೆವೆಲಪ್ಮೆಂಟ್‌ ಕಾರ್ಪೋರೇಷನ್‌ (‌ ಎನ್‌ ಎಫ್‌ ಡಿ ಸಿ) ಮುಖ್ಯವಾಗಿ ವಿಶ್ವಮಟ್ಟದಲ್ಲಿ ಗುರುತಿಸಲ್ಪಡುವ ಸಿನಿಮಾಗಳನ್ನು ಮಾಡುವುದು, ವಿತರಿಸುವುದು ಮಾತ್ರವಲ್ಲದೆ, ಜಗವೇ ಗುರುತಿಸಲ್ಪಡುವ ಸಿನಿಮಾ ನಟ ನಟಿಯರನ್ನು, ನಿರ್ದೇಶಕರನ್ನು ಬೆಳೆಸಿಯೂ ಈ ಸಂಸ್ಥೆ ಅತ್ಯಧಿಕವಾದ ಸಂಪತ್ತನ್ನೂ ಹೊಂದಿದೆ.

ಆದರೆ ಕೇಂದ್ರ ಸರ್ಕಾರವು ಬಿಮಲ್‌ ಜುಲ್ಕ ರ ನೇತೃತ್ವದಲ್ಲಿ ಒಂದು ಹೈ ಪವರ್ಡ್‌ ಕಮಿಟಿಯೊಂದನ್ನು ರಚಿಸಿ ಫಿಲ್ಮ್‌ ಸಂಸ್ಥೆಗಳನ್ನು ಪರಿಶೀಲನೆ ಮಾಡುವುದರ ನೆಪದಲ್ಲಿ ವರದಿ ಕೊಡಬೇಕೆಂದು ಕೇಳಿತ್ತು. ವಿಚಿತ್ರವೇನೆಂದರೆ ಈ ಕಮಿಟಿಯಲ್ಲಿ ನಮ್ಮ ಕನ್ನಡ ಚಿತ್ರರಂಗದ ನಿರ್ದೇಶಕರಾದ ಟಿ ಎಸ್‌ ನಾಗಾಭರಣ್ ಸಹ ಇದರ ನಿರ್ದೇಶಕರಾಗಿದ್ದರು. ಈ ಕಮಿಟಿಯು ಪರಿಶೀಲಿಸಿ ಅನೇಕ ಸೂಚನೆಗಳನ್ನಿಟ್ಟು ನಾಲ್ಕು ಫಿಲ್ಮ್‌ ಸಂಸ್ಥೆಗಳನ್ನು ಎನ್.ಎಫ್.‌ಡಿ.ಸಿ ಜೊತೆ ವಿಲೀನಮಾಡಬೇಕೆಂದು ಶಿಫಾರಸ್ಸು ಮಾಡಿತು.

ನಾಲ್ಕು ಫಿಲ್ಮ್‌ ಸಂಸ್ಥೆಗಳು ಒಂದೇ ಬಗೆಯ ಕೆಲಸ ಮಾಡುತ್ತವೆ. ಹಾಗಾಗಿ ಇವಕ್ಕೆ ಬೇರೆ ಬೇರೆ ವೇದಿಕೆಗಳು ಅವಶ್ಯಕವಿಲ್ಲ. ಅವುಗಳು ಒಂದೇ ಸಂಸ್ಥೆಯ ಕೆಳಗೆ ಬುರುವುದಾದರೆ ಇನ್ನೂ ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು. ಆಗಮಾತ್ರ ಒಂದೇ ತರದ ಆರ್ಥಿಕ ವಿನಿಯೋಗವೂ ಸಾಧ್ಯವಾಗುತ್ತದೆ. ಹಾಗೂ ಸಂಪನ್ಮೂಲಗಳನ್ನು ಸೂಕ್ತ ರೀತಿಯಲ್ಲಿ ಕೊಡಬಹುದು ಎಂಬ ಇತ್ಯಾದಿ ಅಂಶಗಳನ್ನ ಸರ್ಕಾರಕ್ಕೆ ಪೂರಕವಾಗುವ ರೀತಿಯಲ್ಲಿಯೇ ವರದಿಯನ್ನು ನೀಡುತ್ತದೆ.

ಇಂದು ಈ ಸಮಿತಿಯು ಚಲನ ಚಿತ್ರೋದ್ಯಮದಲ್ಲಿರುವ ಅಥವಾ ನಾಲ್ಕು ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಯಾವೊಬ್ಬ ಉದ್ಯೋಗಿಯ ಅಭಿಪ್ರಾಯಗಳನ್ನು ತೆಗೆದುಕೊಳ್ಳದೆ, ಏಕ್ತಮ್‌ ಏಕಪಕ್ಷೀಯವಾಗಿ ಜಾರಿ ಮಾಡುವುದನ್ನು ಸಂಸ್ಥೆಗಳ ಮುಖ್ಯಸ್ಥರು ಹಾಗು ಸಿನಿ ಪ್ರಿಯರು ಇಲಾಖೆಗೆ ಪತ್ರಗಳನ್ನು ಬರೆಯುತ್ತಲೆ ಪ್ರತಿಭಟಿಸುತ್ತಿದ್ದಾರೆ. ಸುಮಾರು 800ಕ್ಕೂ ಹೆಚ್ಚು ಮಂದಿ ಬಹಿರಂಗವಾಗಿ ಹೇಳಿಕೆ ಕೊಟ್ಟು ಈ ಶಿಫಾರಸ್ಸು ಹಿಂಪಡೆಯಬೇಕೆಂಬ ಹೇಳಿಕೆ ನೀಡಿದ್ದಾರೆ.

ದೇಶದ ಪ್ರಮುಖ ಹೆಸರಾಂತ ನಿರ್ದೇಶಕರಾದ ಅಡೂರು ಗೋಪಾಲಕೃಷ್ಣನ್‌ ಸೇರಿದಂತೆ ನಸೀರುದ್ದೀನ್‌ ಶಾ, ಆನಂದ್‌ ಪಟವರ್ಧನ್‌, ನಂದಿತಾ ದಾಸ್‌ ಮುಂತಾದವರು ತೀರ್ವವಾಗಿ ಈ ವಿಲೀನವನ್ನು ವಿರೋಧಿಸಿದ್ದಾರೆ. ಪ್ರಸಿದ್ದ ನಿರ್ದೇಶಕರಾದ ಶ್ಯಾಮ್‌ ಬೆನಗಲ್‌ ರ ವಿವಿಧ ರೀತಿಯ ಪ್ರಶ್ನೆಗಳಿಗೆ ಸಮಿತಿಯಾಗಲಿ ಅಥವಾ ಸರ್ಕಾರವಾಗಲಿ ಒಂದು ಚಕಾರವನ್ನು ಎತ್ತಿಲ್ಲ. ಸರ್ಕಾರದ ಈ ನಿಲುವುಗಳು ನಮ್ಮ ಶ್ರಮಗಳನ್ನು ಹಾಗು ಸಿನಿಮಾ ಪರಂಪರೆಯನ್ನೇ ಅಡಮಾನವಾಗಿ ಇಡುತ್ತದೆ ಎನ್ನುವುದರಲ್ಲಿ ನಮಗ್ಯಾವ ಅನುಮಾವೂ ಉಳಿದಿಲ್ಲ. ಕಾರ್ಪೋರೇಟ್ ಹಿತಾಶಕ್ತಿಗಳ ಮೂಲಕ ವಿಲೀನ ಕಾರ್ಯಗಳೇ ನಮ್ಮ ಆದ್ಯ ಕರ್ತವ್ಯವೆಂದಾದರು ಹೇಳಿ ಸಾರ್ವಜನಿಕ ಭಿನ್ನತೆಗೆ ತೆರೆ ಎಳುದುಬಿಡಿ. ಎನ್ನುವುದನ್ನು ಮೇಲಿನ ಅಷ್ಟೂ ಮಹನೀಯರು ವ್ಯಕ್ತಪಡಿಸಿದ್ದಾರೆ.

ನ್ಯಾಷನಲ್ ಫಿಲ್ಮ್ ಆರ್ಕೈವ್ಸ್ ಆಫ್ ಇಂಡಿಯಾದ ಕೆಲಸಗಳು ಅತ್ಯಂತ ಮಹತ್ವಪೂರ್ಣವಾದವು. ಇದು ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಫಿಲ್ಮ್ ಆರ್ಕೈವ್ಸ್ ನ ಒಂದು ಘಟಕ ಕೂಡ. ಬೆಂಗಳೂರು, ಕೊಲ್ಕತ್ತಾ, ದೆಹಲಿ, ಚೆನ್ನೈ, ತಿರುವನಂತಪುರ ಕಡೆಗಳಲ್ಲಿ ಈ ಸಂಸ್ಥೆಗಳು ಅನೇಕ ಆಸ್ತಿಪಾಸ್ತಿಗಳನ್ನು ಹೊಂದಿವೆ.ವಿದ್ವಾಂಶರಿಗೆ, ಸಂಶೋಧಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನೇಕ ಅಧ್ಯಯನಗಳನ್ನು ನಡೆಸಲು ಪೂರಕವಾಗಿ ಈ ನಾಲ್ಕು ಸಂಸ್ಥೆಗಳು ಇವೆ. ಎನ್.ಎಫ್.ಡಿ.ಸಿ ಅಂತಹ ದೊಡ್ಡ ಸಂಸ್ಥೆಯ ಕೆಳಗೆ ಇಂತಹ ಸಮಾಜಮುಖಿ ಕೆಲಸಗಳನ್ನು ಮಾಡಿರುವ ಸಂಸ್ಥೆಗಳು ವಿಲೀನವಾದರೆ ಇವುಗಳ ವರ್ಚ್ಚಸ್ಸು ಏನಾಗಬೇಕೆಂಬ ಆತಂಕವು ಕೆಲವರದು.

ಅಲ್ಲದೆ ಕೇಂದ್ರ ಸರ್ಕಾರವು ಸಾರ್ವಜನಿಕ ಕ್ಷೇತ್ರದ ಘಟಕಗಳನ್ನು ಒಂದು ಸಂಸ್ಥೆಯ ಕೆಳಗೆ ವಿಲೀನ ಮಾಡಿ ಎಲ್ಲಾ ಆಸ್ತಿಪಾಸ್ತಿಗಳನ್ನು ಖಾಸಗಿ ವ್ಯಕ್ತಿಗೆ ಕೊಟ್ಟುಬಿಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ ಇದನ್ನು ತಪ್ಪಿಸಲು ನಾಲ್ಕು ಸಂಸ್ಥೆಯ ಸಹದ್ಯೋಗಿಗಳು ಹಾಗೂ ಅದರಿಂದ ಬೆಳದು ನಿಂತ ಅನೇಕ ಮಹನೀಯರು ಪಡುವ ವ್ಯಥೆಯನ್ನು ಸರ್ಕಾರ ಸ್ವಲ್ಪವೂ ಪ್ರತಿಕ್ರಿಯೆ ನೀಡದೆ ತನ್ನ ಹದ್ದುಬಸ್ತಿಗೆ ತೆಗೆದುಕೊಳ್ಳುವುದು ಖಂಡನೀಯ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ