Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ಜನರ ಋಣ ತೀರಿಸಲು ಆಗಲ್ಲ : ನಿಖಿಲ್ ಕುಮಾರಸ್ವಾಮಿ

2019ರಲ್ಲಿ ರಾಜಕೀಯ ಅನುಭವ ಇರಲಿಲ್ಲ, ಚುನಾವಣೆಗೆ ಸ್ಪರ್ಧೆ ಮಾಡಿದೆ. ಆ ಚುನಾವಣೆಯಲ್ಲಿ 5.75 ಲಕ್ಷ ಜನ ಆಶೀರ್ವಾದ ಮಾಡಿದರು. ಎಂದಿಗೂ ಸಹ ಋಣ ತೀರಿಸಲು ಆಗಲ್ಲ. ವೀಲ್‌ಚೇರ್‌ನಲ್ಲಿ ಹೋಗಿ ಕಾವೇರಿ ಹೋರಾಟ ಮಾಡಿದ ನಮ್ಮ ನಾಯಕರು ಎಚ್.ಡಿ. ದೇವೇಗೌಡರು. ಕಾವೇರಿ ಸಮಸ್ಯೆಯನ್ನು ಬಗೆಹರಿಸುವಂತೆ ಜನರು ಕೇಳಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಬಗೆಹರಿಸಲಿದ್ದಾರೆ ಎಂಬ ನಂಬಿಕೆ ನನಗಿದೆ ಜಾ.ದಳ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಮಂಡ್ಯ ನಗರದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಜಾ.ದಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಸರಿಯಾಗಿ ರೈತರ ಸಮಸ್ಯೆಗಳನ್ನು ಆಲಿಸದ ಹಾಗೂ ಬರಗಾಲ ನಿಭಾಯಿಸದ ಫಲವಾಗಿ ಪ್ರಸ್ತುತ ವರ್ಷ ಒಂದು ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬರಗಾಲ ಆವರಿಸಿದೆ. ಇದರಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ದಾರಿ ತುಳಿಯುವ ಸಂಭವವಿದೆ. ಇದಕ್ಕೆ ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷö್ಯವೇ ಕಾರಣ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಇವೆಲ್ಲವನ್ನೂ ತಿಳಿದೇ ಅಂದೇ ಕುಮಾರಸ್ವಾಮಿ ಅವರು ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಿದರು. ರೈತರ ಮಗ ಆಡಳಿತ ಮಾಡಬೇಕು ಎನ್ನುವ ದೃಷ್ಟಿಯಿಂದ ಜಿಲ್ಲೆಯ ಮತದಾರರು ಏಳಕ್ಕೆ ಏಳು ಸ್ಥಾನಗಳನ್ನು 2018ರಲ್ಲಿ ನೀಡಿರುವುದನ್ನು ಮರೆಯುವಂತಿಲ್ಲ ಎಂದರು.

ರಾಜ್ಯಾದ್ಯಂತ ಪ್ರತಿ ಹಳ್ಳಿಹಳ್ಳಿಗೂ ಹೋಗಿ ಜನರ ಕಾಲುಕಟ್ಟಿ ಜಾ.ದಳವನ್ನು ಉಳಿಸಿಕೊಳ್ಳಲು ಸಾಮಾನ್ಯ ಕಾರ್ಯಕರ್ತನಂತೆ ಪ್ರಚಾರ ಮಾಡುತ್ತೇನೆ, ಕುಮಾರಸ್ವಾಮಿ ಅವರ ಆಡಳಿತದಲ್ಲಿ ಜನತಾ ದರ್ಶನ, ಲಾಟರಿ ನಿಷೇಧ, ಸಾರಾಯಿ ನಿಷೇಧ ಮಾಡಿರುವುದರಿಂದ ಪ್ರತಿ ಹಳ್ಳಿಯಲ್ಲಿಯೂ ಜನರು ಕುಮಾರಣ್ಣರ ಆಡಳಿತವನ್ನು ಅವರ ಹೃದಯದಲ್ಲಿಟ್ಟುಕೊಂಡಿದ್ದಾರೆ ಎಂದು ತಿಳಿಸಿದರು.

ಈಗಾಗಲೇ ಹೃದಯ ಚಿಕಿತ್ಸೆಗೆ ಒಳಗಾಗಿರುವ ಕುಮಾರಸ್ವಾಮಿ ಅವರು, ನಿಮ್ಮಂತಹ ನಿಷ್ಠಾವಂತ ನಾಯಕರ ಜೊತೆ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಶ್ರೀ ಮಂಜುನಾಥಸ್ವಾಮಿಯ ಅವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುವುದೇನೆಂದರೆ ನನ್ನ ಆಯಸ್ಸನ್ನು ಅವರಿಗೆ ಕೊಟ್ಟು ರಾಜ್ಯದ ಜನರ ಸೇವೆ ಮಾಡಲಿ ಎಂದು ಕೇಳಿಕೊಳ್ಳುತ್ತೇನೆ ಎಂಬ ಮಾತಿಗೆ ಕುಮಾರಸ್ವಾಮಿ ಸಮೇತ ಭಾವುಕಾರಾದರು.

ಯಾವುದು ಸತ್ಯ ತಿಳಿಸಿ?

2019 ರಲ್ಲಿ ಎದುರಾಳಿಯಾಗಿದ್ದ ಆ ತಾಯಿಯ ಜೊತೆ ಸೇರಿಕೊಂಡು, ಬಿಜೆಪಿಯವರ ಜೊತೆ ಸಂಚು ರೂಪಿಸಿ ಮಂಡ್ಯ ಜಿಲ್ಲೆಯಲ್ಲಿ ನನ್ನನ್ನು ಸೋಲಿಸಲಾಯಿತು. ಆ ತಾಯಿ ಗೆಲ್ಲಲು ಕಾಂಗ್ರೆಸ್ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರೆ, ಜೋಡೆತ್ತುಗಳ ರೀತಿ ಕೆಲಸ ಮಾಡಿ ಕುಮಾರಣ್ಣನವರ ಕೈ ಬಲಪಡಿಸಿದ್ದೋ ಎಂದು ಡಿಕೆಶಿ ಹೇಳುತ್ತಾರೆ, ಇದರಲ್ಲಿ ಯಾವುದು ಸತ್ಯ? ನೀವು ಗೊಂದಲದ ಮಾತುಗಳನ್ನಾಡದೇ ಸರಿಯಾಗಿ ಮಾತನಾಡಬೇಕು ಎಂದು ಕಾಂಗ್ರೆಸ್ ನಾಯಕರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು.

ಮಂಡ್ಯ ಜಿಲ್ಲೆಯಲ್ಲಿ ಭಾವನಾತ್ಮಕವಾಗಿ ಚುನಾವಣೆ ನಡೆಯುತ್ತದೆ ಎಂಬುದನ್ನು ಹತ್ತಿರದಿಂದ ನೋಡಿದ್ದೇನೆ. ಜಾ.ದಳದವರು ಏನು ಪ್ರತಿಕ್ರಿಯೆ ನೀಡುತ್ತಿಲ್ಲವಲ್ಲ ಎಂದು ಬಹುತೇಕರಲ್ಲಿ ಇದೆ. ಇದು ಯಾರೂ ಕೂಡ ಉಪದೇಶ ಕೊಟ್ಟಿಲ್ಲ, ಎಲ್ಲ ಮುಖಂಡರಿಗೂ ಅರಿವಿದೆ, ನಾವು ಶಾಂತಿಯುತವಾಗಿ ಆರೋಗ್ಯಕರವಾಗಿ ಚುನಾವಣೆಯನ್ನು ಮಾಡುತ್ತೇವೆ ಎಂದು ತಿಳಿಸಿದರು.

ಮಾ.21ರಂದು ಎಚ್‌ಡಿಕೆಗೆ ಸರ್ಜರಿ

ಮಾ.21 ರಂದು ಕುಮಾರಸ್ವಾಮಿ ಅವರಿಗೆ ಹೃದಯಕ್ಕೆ ಸಂಬAಧಿಸಿದAತೆ ಶಸ್ತç ಚಿಕಿತ್ಸೆಗೆ ಸಮಯ ನಿಗದಿಯಾಗಿದೆ. ಶಸ್ತç ಚಿಕಿತ್ಸೆ ನಂತರ ಕುಮಾರಣ್ಣ ಅವರು ಓಡಾಡಲು ಸಾಧ್ಯವಿಲ್ಲ, ಅತಿಹೆಚ್ಚು ಜವಾಬ್ದಾರಿಯನ್ನು ತೆಗೆದುಕೊಂಡು ಪ್ರತಿ ಹಳ್ಳಿ ಹಳ್ಳಿಗೂ ಹೋಗುತ್ತೇನೆ. ಕುಮಾರಸ್ವಾಮಿ ಅವರು ಈ ಜಿಲ್ಲೆಗೆ ಬರಬೇಕು ಬಂದರೆ ಅಭಿವೃದ್ಧಿಯಾಗುತ್ತದೆ ಎಂದು ಕರೆಯುತ್ತಿದ್ದೀರಿ, ಕಳೆದ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದಕ್ಕೆ ತಕ್ಕಂತಹ ಉತ್ತರ ಕೊಡಬೇಕು ಎನ್ನುವುದು ಕೂಡ ನನ್ನಲ್ಲಿದೆ. ಈ ಪ್ರಾದೇಶೀಕ ಪಕ್ಷವನ್ನು ಉಳಿಸಿಕೊಳ್ಳಲು ಹಳ್ಳಿಹಳ್ಳಿಯಲ್ಲಿಯೂ ಜನರ ಕಾಲನ್ನು ಕಟ್ಟಿ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ವಾಭಿಮಾನದ ಹೇಸರೇಳಿ ರಾಜಕೀಯ ಮಾಡಲ್ಲ

ಮಂಡ್ಯ ಜಿಲ್ಲೆಯ ಜನರು ಬಹಳ ನಾಯಕರನ್ನು ಹುಟ್ಟುಹಾಕಿದ್ದೀರಿ, ಸಂಸದ, ಶಾಸಕನಾಗಬೇಕು ಎನ್ನುವುದು ನಮ್ಮ ಹಣೆಬರಹದಲ್ಲಿದ್ದಂತೆ ನಡೆಯುತ್ತದೆ. ಯೋಗ ಯೋಗ್ಯತೆಯನ್ನು ಪಡೆದುಕೊಳ್ಳಲು ನಿಮ್ಮ ಆಶೀರ್ವಾದಬೇಕು. ಪ್ರತಿ ಹಳ್ಳಿ ಹಳ್ಳಿಯಲ್ಲಿಯೂ ಸ್ವಾಭಿಮಾನದ ಹೆಸರು ಹೇಳಿಕೊಂಡು ರಾಜಕೀಯ ಮಾಡಲ್ಲ, ಒಂದಲ್ಲಾ ಒಂದು ದಿನ ನೀವೆ ನನ್ನನ್ನು ಬೆಂಬಲಿಸುತ್ತೀರಾ ಎಂದು ಹೇಳಿದರು.

ಪಕ್ಷದ ಕೋರ್ ಕಮಿಟಿ ಅಧ್ಯಕ್ಷರಾದ ಜಿ.ಟಿ.ದೇವೇಗೌಡರು, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಶಾಸಕ ಹೆಚ್.ಟಿ.ಮಂಜುನಾಥ್, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸುರೇಶಗೌಡ, ಡಾ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಪಕ್ಷದ ಜಿಲ್ಲಾಧ್ಯಕ್ಷ ರಮೇಶ್, ರಾಮಚಂದ್ರು, ಗುರುಚರಣ್, ಶಿವಕುಮಾರ್ ಸೇರಿ ಅನೇಕ ನಾಯಕರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ