ನೀರವ್ ಮೋದಿ ಒಡೆತನದ ಫೈರ್‌ಸ್ಟಾರ್ ಡೈಮಂಡ್ ಇಂಟರ್‌ನ್ಯಾಷನಲ್ ಪ್ರೈವೆಟ್ ಲಿಮಿಟೆಡ್ ನ ವಜ್ರಗಳು,ಆಭರಣಗಳು ಇನ್ಹು ಕೆಲವೇ ದಿನಗಳಲ್ಲಿ ಹರಾಜಾಗಲಿದೆ.
ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಒಡೆತನದ ಫೈರ್‌ಸ್ಟಾರ್ ಡೈಮಂಡ್ ಇಂಟರ್‌ನ್ಯಾಷನಲ್ ಪ್ರೈವೆಟ್ ಲಿಮಿಟೆಡ್ ನ ಚಿನ್ನ, ಪ್ಲಾಟಿನಂ, ವಜ್ರ ಮತ್ತು ಆಭರಣಗಳು ಮಾರ್ಚ್ 25 ರಂದು ಕೋರ್ಟಿನ ಸೂಚನೆಯಂತೆ ಇ-ಹರಾಜು ಮೂಲಕ ಮಾರಾಟ ಮಾಡಲಾಗುವುದು.
ಫೆಬ್ರವರಿ 2020 ರಲ್ಲಿ ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ (NCLT) ನ ಮುಂಬೈ ಬೆಂಚ್‌ನಿಂದ ಫೈರ್‌ಸ್ಟಾರ್ ಡೈಮಂಡ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್‌ನ ಫೈಸಲುಗಾರನಾಗಿ (ಲಿಕ್ವಿಡೇಟರ್) ಆಗಿ ನೇಮಕಗೊಂಡಿರುವ ಸಂತಾನು ಟಿ ರೇ ಅವರು ಹರಾಜು ಮಾರಾಟದ ಸೂಚನೆಯನ್ನು ಹೊರಡಿಸಿದ್ದಾರೆ. ಈ ಕಂಪನಿಗೆ ಸಂಬಂಧಿಸಿದ ವ್ಯವಹಾರಗಳನ್ನು ರೇ ಅವರೇ ನಿರ್ವಹಿಸುತ್ತಾರೆ.
ಹರಾಜಾಗುವ ವಸ್ತುಗಳ ಮೀಸಲು ಬೆಲೆಯನ್ನು ಹರಾಜಿನ ದಿನಾಂಕದಂದು ಘೋಷಿಸಲಾಗುತ್ತದೆ.
ಇ-ಹರಾಜು ದಾಖಲೆಯ ಪ್ರಕಾರ, ಈಗಾಗಲೇ ಸಿದ್ಧಪಡಿಸಿದ ಆಭರಣಗಳು, ಸಡಿಲವಾದ ವಜ್ರಗಳು ಮತ್ತು ಬಣ್ಣದ ಸ್ಟೊನ್ ಗಳು, ಅರೆ-ಸಿದ್ಧಪಡಿಸಿದ ಆಭರಣಗಳು, ಚಿನ್ನ, ಪ್ಲಾಟಿನಂ ಮತ್ತು ಬೆಳ್ಳಿ ಹರಾಜಾಗಲಿದೆ.
ಹರಾಜು ಮಾಡುವ ಮೊದಲು ಅಮೂಲ್ಯ ವಸ್ತುಗಳ ಮೌಲ್ಯವನ್ನು ನಿರ್ಧಾರ ಮಾಡಲು ಜೆಮೊಲಾಜಿಕಲ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ವನ್ನು ತೊಡಗಿಸಿಕೊಳ್ಳಾಗಿದೆ
ದಿವಾಳಿ ಪ್ರಾರಂಭದ ದಿನಾಂಕದಂದು,ಇ-ಹರಾಜು ದಾಖಲೆಯ ಪ್ರಕಾರ ಮತ್ತು ಕಂಪನಿ ವ್ಯವಹಾರಗಳ ಸಚಿವಾಲಯ (MCA)ದಾಖಲೆಗಳ ಪ್ರಕಾರ ಕಾರ್ಪೊರೇಟ್ ಸಾಲಗಾರನ ಏಕೈಕ ನಿರ್ದೇಶಕರು/ಸಹಿದಾರರು ನೀರವ್ ದೀಪಕ್ ಮೋದಿ ಮತ್ತು ಹರೇಶ್ ವ್ರಜಾಲ್ ಷಾ ಮಾತ್ರ.
ನೀರವ್ ಮೋದಿ 2018 ರಲ್ಲೇ ದೇಶದಿಂದ ತಲೆಮರೆಸಿ
ಕೊಂಡಿದ್ದನು ಮತ್ತು ಆತನ ಇತರ ಎಲ್ಲಾ ಪ್ರಮುಖ ಆಸ್ತಿಗಳನ್ನು ಜಾರಿ ನಿರ್ದೇಶನಾಲಯವು ಜಪ್ತಿ ಮಾಡಿಕೊಂಡಿತ್ತು
ನೀರವ್ ಮೋದಿ ಮತ್ತು ಆತನ ಚಿಕ್ಕಪ್ಪ ಮೆಹುಲ್ ಚೋಕ್ಸಿ ಒಪ್ಪಂದ ಪತ್ರದ (LoUs) ಮೂಲಕ ಕೆಲ ಬ್ಯಾಂಕ್ ಅಧಿಕಾರಿಗಳೊಂದಿಗೆ ಶಾಮೀಲಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ 14,000 ಕೋಟಿ ರೂ. ಸಾಲ ಪಡೆದು ವಂಚಿಸಿ, ದೇಶದಿಂದ ಪರಾರಿಯಾಗಿದ್ದನು.ಇದು ದೇಶದ ಅತಿದೊಡ್ಡ ಬ್ಯಾಂಕ್ ವಂಚನೆಯಾಗಿತ್ತು.




