Saturday, November 21, 2026

ಪ್ರಾಯೋಗಿಕ ಆವೃತ್ತಿ

ನಿರ್ಮಲಾನಂದನಾಥ ಶ್ರೀಗಳ ಆರ್ಶೀವಾದ ಪಡೆದ ಡಿ.ಕೆ.ಶಿವಕುಮಾರ್ ದಂಪತಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಮ್ಮ ಧರ್ಮಪತ್ನಿ ಉ‍‍‍‍ಷಾ ಅವರೊಂದಿಗೆ ಮಂಗಳವಾರ ಮುಂಜಾನೆ ಆದಿಚುಂಚನಗಿರಿ ಶ್ರೀಮಠಕ್ಕೆ ಭೇಟಿ ನೀಡಿ ಅಮಾವಾಸ್ಯೆಯ ವಿಶೇಷ ಪೂಜೆ ನೆರವೇರಿಸಿ ನಿರ್ಮಲಾನಂದನಾಥ ಶ್ರೀಗಳ ಆರ್ಶೀವಾದ ಪಡೆದರು.

ಹಿಂದೂ ಪಂಚಾಂಗದ ಪ್ರಕಾರ ಯುಗಾದಿ ಹಬ್ಬ ಹೊಸ ವರ್ಷವಾಗಿದ್ದು, ಹಳೆ ಕಹಿ ದೂರವಾಗಿ ಸಿಹಿ ದೊರೆಯಲಿ ಎಂಬ ಆಶಯದೊಂದಿಗೆ ಆಚರಿಸಲ್ಪಡುವ ಯುಗಾದಿ ಹಬ್ಬದ ಅಮಾವಾಸೆ ಪೂಜೆಗೆ ಡಿಕೆಶಿ ದಂಪತಿ ಆಗಮಿಸಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಆದಿಚುಂಚನಗಿರಿಯ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳ ಉಪಸ್ಥಿತಿಯಲ್ಲಿ ಜರುಗಿದ ವಿಶೇಷ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡರು. ಪೂಜೆ ಬಳಿಕ ಡಿಕೆ ಶಿವಕುಮಾರ್ ದಂಪತಿಗೆ ಶ್ರೀಗಳು ಆಶೀರ್ವಚನ ನೀಡಿದರು. ಶಾಲು, ಹಾರ, ಫಲ-ತಾಂಬೂಲ ನೀಡಿ ಶ್ರೀಗಳು ಆಶೀರ್ವದಿಸಿದರು. ಮಾಜಿ ಶಾಸಕ ಮಾಗಡಿ ಬಾಲಕೃಷ್ಣರಿಂದಲೂ ವಿಶೇಷ ಪೂಜೆ ನೆರವೇರಿತು. ಕಾಲಭೈರವೇಶ್ವರನ ಪೂಜೆ ಬಳಿಕ ಕ್ಷೇತ್ರಾಧಿ ದೇವತೆಗಳ ದರ್ಶನ ಪಡೆದರು.

ಸುಧೀರ್ಘ ಚರ್ಚೆ

ನಿರ್ಮಲಾನಂದನಾಥ ಶ್ರೀಗಳು ಹಾಗೂ ಡಿಕೆ ಶಿವಕುಮಾರ್ ಅವರ ನಡುವೆ ಗೌಪ್ಯವಾಗಿ ಸುಮಾರು ಒಂದೂವರೆ ತಾಸುಗಳ ಕಾಲ ಸುದೀರ್ಘ ಮಾತುಕತೆ ನಡೆಯಿತು. ನಂತರ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಸಮಾಜದಲ್ಲಿ ಶಾಂತಿ-ಸಮೃದ್ಧತೆ ನೆಲೆಸಲಿ ಎಂದು ಸರ್ಕಾರ ಮಾಡಲಾಗದ ಕೆಲಸವನ್ನು ಧಾರ್ಮಿಕ ಮಠಗಳು ಮಾಡುತ್ತಿವೆ. ನಮ್ಮ ಮಠದ ಶ್ರೀಗಳನ್ನು ಆಶೀರ್ವಾದ ಮಾಡಿ ಎಂದು ಕೇಳಿಕೊಂಡಿದ್ದೇನೆ, ಬೇಡಿಕೊಂಡಿದ್ದೇನೆ. ನನಗೆ ಶ್ರೀಗಳು ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದರು.

ನಾಳೆ ಯುಗಾದಿ ಹಬ್ಬ ಮಾಡೋಣಾ. ಬೇವು-ಬೆಲ್ಲವನ್ನು ತಿನ್ನೋಣಾ. ರಾಜ್ಯಕ್ಕೆ ಒಳಿತು ಬಯಸಿ ಎಲ್ಲರ ಕಷ್ಟಗಳು ನಿವಾರಣೆಯಾಗಲಿ ಎಂದು ಪ್ರಾರ್ಥಿಸೋಣ ಎಂದರು.

ಪಟ್ಟಿ ಬಿಡುಗಡೆ ಸುಳಿವು

ಹಿಂದೂಗಳ ಪವಿತ್ರ ಹಬ್ಬವಾಗಿರುವ ಯುಗಾದಿ ಹಬ್ಬದಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುವುದೆಂದು ಇದೇ ಸಂದರ್ಭದಲ್ಲಿ ಸೂಚ್ಯವಾಗಿ ಸುಳಿವು ನೀಡಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ