Thursday, September 19, 2024

ಪ್ರಾಯೋಗಿಕ ಆವೃತ್ತಿ

ಒಂದೇ ವಿಮಾನದಲ್ಲಿ ನಿತೀಶ್ ಕುಮಾರ್ – ತೇಜಸ್ವಿ ಯಾದವ್; ಕಾದು ನೋಡಿ ಎಂದ ಆರ್’ಜೆಡಿ ನಾಯಕ

ಒಂದೇ ವಿಮಾನದಲ್ಲಿ ಪ್ರತಿಸ್ಪರ್ಧಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಪಾಟ್ನಾದಿಂದ ದೆಹಲಿಗೆ ಪ್ರಯಾಣಿಸಿದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್, ಜೆಡಿ-ಯು ಮುಖ್ಯಸ್ಥರೊಂದಿಗಿನ ಮಾತುಕತೆಗೆ ಸಂಬಂಧಿಸಿದ ಪ್ರಶ್ನೆಗೆ ‘ಸ್ವಲ್ಪ ತಾಳ್ಮೆಯಿಂದಿರಿ’ ಎಂದು ಸುದ್ದಿಗಾರರಿಗೆ ತಿಳಿಸಿದರು. ನಂತರ, ಅವರು ಇಂಡಿಯಾ ಬ್ಲಾಕ್‌ ನಾಯಕರನ್ನು ಭೇಟಿಯಾಗಲು ತೆರಳಿದರು.

“ಸ್ವಲ್ಪ ತಾಳ್ಮೆಯಿಂದಿರಿ; ನಿರೀಕ್ಷಿಸಿ,ವೀಕ್ಷಿಸಿ” ಎಂದು ಅವರು ಸುದ್ದಿಗಾರರಿಗೆ ಹೇಳಿದರು, “ನಾವು ಪರಸ್ಪರ ಶುಭಾಶಯ ಕೋರಿದ್ದೇವೆ. ಬಾಕಿ ಕ್ಯಾ ಹೋತಾ ಹೈ, ಆಗೇ ದೇಖ್ತೇ ದೇಖ್ತೆ ರಹಿಯೇ” ಎಂದರು.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಮಾತುಕತೆ ನಡೆಸುವ ಪ್ರಶ್ನೆಗೆ ತೇಜಸ್ವಿ ಯಾದವ್, “ಸ್ವಲ್ಪ ತಾಳ್ಮೆಯಿಂದಿರಿ, ಏನಾಗುತ್ತದೆ ಕಾದು ನೋಡಿ…” ಎಂದು ಹೇಳಿದರು.

ಒಂದೆ ವಿಮಾನದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ದೆಹಲಿ ತಲುಪಿದಾಗ, ನಾನು ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸಲು ಬಂದಿದ್ದೇನೆ, ಸಂಜೆ 6 ಗಂಟೆಗೆ ಸಭೆ ಇದೆ, ಸಭೆಯಲ್ಲಿ ಎಲ್ಲರ ಅಭಿಪ್ರಾಯ ಏನು ಎಂದು ನೋಡೋಣ ಎಂದು ಹೇಳಿದರು.

“ದೇಶದಲ್ಲಿ ದೌರ್ಜನ್ಯದ ವಿರುದ್ಧ ಮತದಾನ ಮಾಡಲಾಗಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡಲು ಮತದಾನ ಮಾಡಲಾಗಿದೆ. ‘ಜನತಾ ಮಾಲಿಕ್’ ಎಂದು ನಾನು ಭಾವಿಸುತ್ತೇನೆ. ಇಂದು ಸಂಜೆ ಸಭೆಯ ನಂತರ ಏನು ನಿರ್ಧರಿಸುತ್ತದೆ ಎಂದು ನೋಡೋಣ” ಎಂದು ಅವರು ಹೇಳಿದರು.

ನಿತೀಶ್ ಕುಮಾರ್ ನಡೆಯತ್ತ ಎಲ್ಲರ ಚಿತ್ತ

ಪಕ್ಷಗಳನ್ನು ಬದಲಾಯಿಸುವ ಕುಮಾರ್ ಅವರ ದಾಖಲೆಯನ್ನು ಪರಿಗಣಿಸಿ, ಅವರು ಇಂಡಿಯಾ ಬ್ಲಾಕ್‌ಗೆ ಸೇರಬಹುದು ಎಂಬ ಊಹಾಪೋಹ ಹೆಚ್ಚಾಗಿದೆ. ಇಂದು ಬೆಳಗ್ಗೆ ಪಟ್ನಾದಿಂದ ದೆಹಲಿಗೆ ಒಂದೆ ವಿಮಾನದಲ್ಲಿ ನಿತೀಶ್ ಕುಮಾರ್ ಅವರು ತೇಜಸ್ವಿ ಯಾದವ್ ಅವರೊಂದಿಗೆ ಪ್ರಯಾಣಿಸಿದ ನಂತರ ಊಹಾಪೋಹಗಳು ಮತ್ತಷ್ಟು ಬಲಗೊಂಡವು.

ಈ ಮಧ್ಯೆ, ಲೋಕಸಭಾ ಚುನಾವಣಾ ಫಲಿತಾಂಶಗಳು ಪ್ರಕಟವಾದ ಒಂದು ದಿನದ ನಂತರ ಎನ್‌ಡಿಎ ಮತ್ತು ಇಂಡಿಯಾ ಬ್ಲಾಕ್ ಸಭೆಗಳು ನವದೆಹಲಿಯಲ್ಲಿ ನಡೆಯಲಿವೆ. ಇದರಲ್ಲಿ ಭಾರತೀಯ ಜನತಾ ಪಕ್ಷವು ತನ್ನದೇ ಆದ ಬಹುಮತವನ್ನು ಸಾಧಿಸಲು ವಿಫಲವಾಗಿದೆ. 543 ಸ್ಥಾನಗಳ ಪೈಕಿ 240ರಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿದ್ದು, 2019ಕ್ಕೆ ಹೋಲಿಸಿದರೆ 60ಕ್ಕೂ ಹೆಚ್ಚು ಸ್ಥಾನಗಳನ್ನು ಕಳೆದುಕೊಂಡಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!