ಕೆ.ಆರ್.ಎಸ್ ಬಳಿ ಕಾವೇರಿ ಆರತಿ, ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣ ಮಾಡುವುದು ಬೇಡ, ವಾಟರ್ ಅಮ್ಯೂಸ್ಮೆಂಟ್ ಪಾರ್ಕ್ ಅನ್ನು ಮಳವಳ್ಳಿಯ ಗಗನಚುಕ್ಕಿ ಬಳಿ ಹಾಗೂ ಕಾವೇರಿ ಆರತಿಯನ್ನು ಶ್ರೀರಂಗಪಟ್ಟಣದ ಬಳಿ ನಡೆಸಬೇಕೆಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು.
ಮಂಡ್ಯ ಅಪರ ಜಿಲ್ಲಾಧಿಕಾರಿ ಡಾ.ಶಿವಾನಂದಮೂರ್ತಿ ಅವರಿಗೆ ಮನವಿ ಸಲ್ಲಿಸಿದ ಅವರು, ಕನ್ನಂಬಾಡಿ ಅಣೆಕಟ್ಟೆಯ ಪ್ರದೇಶದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ಹಾಗು ಡ್ಯಾಮ್ ಆವರಣದಲ್ಲಿ ಕಾವೇರಿ ಆರತಿ ಹೆಸರಿನಲ್ಲಿ ಡ್ಯಾಮ್ ಮೂಲ ಸ್ವರೂಪಕ್ಕೆ ಧಕ್ಕೆ ತರ ಹೊರಟಿರುವ ಕ್ರಮ ಆಣೆಕಟ್ಟು ಅಸ್ಥಿವಕ್ಕೆ ಅಪಾಯ ತಂದೊಡ್ಡಲಿದೆ ಎಂದು ದೂರಿದರು.
ಕಾವೇರಿ ಆರತಿ ಮಾಡ ಹೊರಟಿರುವ ನಿರ್ಧಾರಕ್ಕೆ ನಮ್ಮ ವಿರೋಧವಿಲ್ಲ , ಆದರೆ ಕನ್ನಂಬಾಡಿ ಕಟ್ಟೆ ಅವರಣಲ್ಲಿ ಸಲ್ಲದು, ಕಾವೇರಿ ಆರತಿಯನ್ನು ಶ್ರೀರಂಗಪಟ್ಟಣದ ದೇವಾಲಯಗಳಿರುವ ಸ್ನಾನಘಟ್ಟದಲ್ಲಿ ನಡೆಸಲಿ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಿ.ಟಿ.ಮಂಜುನಾಥ್, ಭೀಮೇಶ್, ಪ್ರಸನ್ನಕುಮಾರ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.




