Saturday, October 26, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ಲೋಕಸಭೆ| 8 ಜನ ಉಮೇದುವಾರರ ನಾಮಪತ್ರ ತಿರಸ್ಕೃತ….ಇಲ್ಲಿದೆ ಸಂಪೂರ್ಣ ವಿವರ….

ಮಂಡ್ಯ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿದ್ದ ಒಟ್ಟು 37 ನಾಮಪತ್ರಗಳ ಪೈಕಿ 28 ನಾಮಪತ್ರಗಳು ಅಂಗೀಕೃತವಾಗಿವೆ. ಉಳಿದ 8 ಉಮೇದುವಾರರ ಒಟ್ಟು 9 ನಾಮಪತ್ರಗಳು ತಿರಸ್ಕೃತವಾಗಿವೆ ಎಂದು ಚುನಾವಣಾಧಿಕಾರಿ ಡಾ.ಕುಮಾರ ತಿಳಿಸಿದ್ಧಾರೆ.

ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಅರುಣ್ ಕುಮಾರ್. ಟಿ.ವಿ, ಇಂದುಕುಮಾರ್. ಎಂ, ಕೃಷ್ಣ. ಜಿ, ಚಿಕ್ಕಯ್ಯ, ಹೆಚ್. ನಾರಾಯಣ, ಎಲ್. ಡಿ. ನಂದೀಶ(02 – ನಾಮಪತ್ರ ), ಶಂಭುಲಿಂಗೇಗೌಡ, ಸತೀಶ್ ಕುಮಾರ್. ಟಿ. ಎನ್ ಅವರುಗಳ ನಾಮಪತ್ರ ತಿರಸ್ಕೃತವಾಗಿರುತ್ತವೆ.

ಕ್ರಮಬದ್ದವಾಗಿ ನಾಮ ನಿರ್ದೇಶಿತರಾದ 19 ಉಮೇದುವಾರರ ಪಟ್ಟಿ

ಹೆಚ್. ಡಿ. ಕುಮಾರಸ್ವಾಮಿ – ಜನತಾ ದಳ (ಜಾತ್ಯತೀತ), ವೆಂಕಟರಮಣೇಗೌಡ – ಭಾರತೀಯ ರಾಷ್ಟೀಯ ಕಾಂಗ್ರೆಸ್, ಶಿವಶಂಕರ್ ಎಸ್ – ಬಹುಜನ ಸಮಾಜ ಪಾರ್ಟಿ, ಚಂದ್ರಶೇಖರ ಕೆ. ಆರ್ – ಕರ್ನಾಟಕ ರಾಷ್ಟ್ರ ಸಮಿತಿ, ಬೂದಯ್ಯ – ಕರುನಾಡು ಪಾರ್ಟಿ, ಹೆಚ್. ಡಿ. ರೇವಣ್ಣ – ಪೂರ್ವಾಂಚಲ್ ಮಹಾ ಪಂಚಾಯತ್ ಪಾರ್ಟಿ, ಲೋಕೇಶ ಎಸ್ – ಉತ್ತಮ ಪ್ರಜಾಕೀಯ ಪಕ್ಷ, ಎಸ್. ಅರವಿಂದ್ – ಪಕ್ಷೇತರ, ಚನ್ನಮಾಯಿಗೌಡ – ಪಕ್ಷೇತರ, ಚಿಕ್ಕನಂಜಾಚಾರಿ – ಪಕ್ಷೇತರ, ಚಂದನ್ ಗೌಡ. ಕೆ – ಪಕ್ಷೇತರ, ಎನ್. ಬಸವರಾಜು – ಪಕ್ಷೇತರ, ಬೀರೇಶ್. ಸಿ. ಟಿ – ಪಕ್ಷೇತರ, ಯೋಗೇಶ್ – ಪಕ್ಷೇತರ, ರಾಮಯ್ಯ. ಡಿ – ಪಕ್ಷೇತರ, ರಂಜಿತ. ಎನ್ – ಪಕ್ಷೇತರ, ಲೋಲ – ಪಕ್ಷೇತರ, ಶಿವನಂಜಪ್ಪ – ಪಕ್ಷೇತರ, ಕೆ. ಶಿವಾನಂದ – ಪಕ್ಷೇತರ ಒಟ್ಟು 19 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ದವಾಗಿರುತ್ತದೆ.


Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!