ನಾಗಮಂಗಲ ತಾಲೂಕಿನ ದೇವಲಾಪುರ ಹೋಬಳಿ ದೇವರ ಮಲ್ಲನಾಯಕನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಬೆಂಬಲಿಗರಾದ ಅಧ್ಯಕ್ಷರಾಗಿ ಡಿ.ಸಿ.ರಾಜೇಶ್, ಉಪಾಧ್ಯಕ್ಷರಾಗಿ ಶಂಕರಚಾರಿ ಹಾಗೂ 10 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷ ಡಿಸಿ ರಾಜೇಶ್ ಅಧಿಕಾರ ಸ್ವೀಕರಿಸಿ ಮಾತನಾಡಿ, ಅಧ್ಯಕ್ಷರಾಗಿ ಆಯ್ಕೆ ಮಾಡಿದ ಎಲ್ಲ ನಿರ್ದೇಶಕರುಗಳಿಗೆ ನನ್ನ ಅನಂತ ಧನ್ಯವಾದಗಳು, ಹಾಲು ಉತ್ಪಾದಕರ ಸಂಘದ ವತಿಯಿಂದ ರೈತಾಪಿ ವರ್ಗದ ಜನರಿಗೆ ದೊರೆಯುವ ಸವಲತ್ತುಗಳನ್ನು ತಲುಪಿಸುವಲ್ಲಿ ಕಾರ್ಯ ನಿರ್ವಹಿಸುವೆ. ಬಹು ಮುಖ್ಯವಾಗಿ ಹಾಲು ಉತ್ಪಾದಕರ ಸಂಘಕ್ಕೆ ಒಂದು ನೂತನ ಕಟ್ಟಡವನ್ನು ಕಟ್ಟಲು ಸಂಘದ ನಿರ್ದೇಶಕರಗಳ ಜೊತೆ ಕೈಜೋಡಿಸಿ ಶ್ರಮಿಸುವೆ ಎಂದರು.
ಈ ಸಂದರ್ಭದಲ್ಲಿ ಡಿ.ವಿ.ಚೇತನಗೌಡ, ಡಿ.ಎನ್.ವೆಂಕಟೇಶ್ ನೇತೃತ್ವದಲ್ಲಿ ನಡೆದ ಹಾಲು ಉತ್ಪಾದಕರ ಸಂಘದ ನೂತನ ನಿರ್ದೇಶಕರಾದ ನರಸಿಂಹೇಗೌಡ, ಜಯಮ್ಮ, ಸಿಂಗಯ್ಯ, ವೆಂಕಟ, ನರಸಿಂಹಯ್ಯ, ಗಿರೀಶ್, ನಾಗರಾಜ್, ಲಕ್ಷ್ಮಮ್ಮ, ವೆಂಕಟೇಶ್, ಸಂಘದ ಕಾರ್ಯದರ್ಶಿ ಸುರೇಶ್ ಚಂದ್ರ ಉಪಸ್ಥಿತರಿದ್ದರು




