ಮಂಡ್ಯ ತಾಲ್ಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳ ಮುಖಾಂತರ ಅಳವಡಿಸಿರುವ ಡಿಶ್ ಕೇಬಲ್ ಹಾಗೂ ಇಂಟರ್‌ನೆಟ್ ಕೇಬಲ್‌ಗಳಿಗೆ ಸೆಸ್ಕಾಂ ವಾರ್ಷಿಕ ಶುಲ್ಕವನ್ನು ನಿಗದಿ ಮಾಡಿದ್ದು, ಮಂಡ್ಯ ತಾಲ್ಲೂಕಿನ ನಗರ ವ್ಯಾಪ್ತಿಯಲ್ಲಿ ಅಳವಡಿಸಿರುವ ಪ್ರತಿ ಕಂಬಕ್ಕೆ ರೂ. 150/- ಮತ್ತು ಗ್ರಾಮೀಣ ಭಾಗಕ್ಕೆ ಪ್ರತಿ ಕಂಬಕ್ಕೆ 100/- ಗಳನ್ನು ತಕ್ಷಣವೇ ಆಯಾ ಉಪ ವಿಭಾಗ ವ್ಯಾಪ್ತಿಯಲ್ಲಿನ ಸೆಸ್ಕ್ ಕಚೇರಿಯಲ್ಲಿ ಪಾವತಿಸಬೇಕಿರುತ್ತದೆ.
ಇಲ್ಲದಿದ್ದರೆ ಯಾವುದೇ ಮುನ್ಸೂಚನೆ ನೀಡದೇ ಡಿಶ್ ಕೇಬಲ್ ಹಾಗೂ ಇಂಟರ್‌ನೆಟ್ ಕೇಬಲ್‌ಗಳನ್ನು ವಿದ್ಯುತ್ ಕಂಬಗಳಿಂದ ತೆರವುಗೊಳಿಸಲಾಗುವುದು ಎಂದು ಮಂಡ್ಯ ಸೆಸ್ಕ್ಕಾಂ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.