ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಹೋರಾಟ ನಡೆಸುತ್ತಿದ್ದ ಹೋರಾಟಗಾರರ ಮೇಲಿನ ಲಾಠಿಚಾರ್ಜ್ ಖಂಡಿಸಿ ಮಳವಳ್ಳಿ ತಾಲ್ಲೂಕು ಆದಿ ಜಾಂಬವ ವಿಚಾರ ವೇದಿಕೆ ವತಿಯಿಂದ ಗುರುವಾರ ಮಳವಳ್ಳಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಳವಳ್ಳಿ ಪಟ್ಟಣದ ಮೈಸೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ಸಾಗಿದ ಪ್ರತಿಭಟನಕಾರರು ಪೋಸ್ಟ್ ಆಫೀಸ್ ವೃತ್ತದಲ್ಲಿ ಮಾನವರ ಸರಪಳಿ ನಿರ್ಮಿಸಿ, ಬಿಜೆಪಿ ಸರ್ಕಾರದ ವಿರುದ್ದ ಪೊರಕೆ ಚಳವಳಿ ನೆಡೆಸಿದರು. ನಂತರ ತಾಲ್ಲೂಕು ಕಚೇರಿಗೆ ತೆರಳಿ ತಹಶಿಲ್ದಾರ್ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತಾನಾಡಿದ ಹೋರಾಟಗಾರರು, ಕಳೆದ 30 ವರ್ಷಗಳಿಂದಲೂ ಮಾದಿಗ ಸಮಾಜ ಒಳಮೀಸಲಾತಿಗಾಗಿ ಹೋರಾಟ ಮಾಡುತ್ತ ಬರುತ್ತಿದ್ದು, ಇಲ್ಲಿಯ ತನಕ ಯಾವುದೇ ಸರ್ಕಾರಗಳು ನಮ್ಮ ನ್ಯಾಯಯುತ ಬೇಡಿಕೆಯನ್ನು ಈಡೇರಿಸಿಲ್ಲ, ಪ್ರಸ್ತುತ ಬಿಜೆಪಿ ಸರ್ಕಾರ ಹೋರಾಟಗಾರರ ಮೇಲೆ ಲಾಠಿಚಾರ್ಜ್ ಮಾಡುವ ಮೂಲಕ ಸಂವಿಧಾನಬದ್ದ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿರುವುದು ಖಂಡನೀಯ. ಮುಂಬರುವ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿಯನ್ನು ಮಂಡಿಸಿ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಶಿಪಾರಸ್ಸು ಮಾಡಬೇಕು, ಈ ಮೂಲಕ ಒಳಮೀಸಲಾತಿ ಹೋರಾಟಕ್ಕೆ ನ್ಯಾಯ ಒದಗಿಸಬೇಕೆಂದು ಅಗ್ರಹಿಸಿದರು
ಪ್ರತಿಭಟನೆಯಲ್ಲಿ ಆದಿ ಜಾಂಬವ ವಿಚಾರ ವೇದಿಕೆ ತಾಲೂಕು ಅಧ್ಯಕ್ಷ ನಡಕಲಪುರ ಮಂಜುನಾಥ್, ಟೌನ್ ಅಧ್ಯಕ್ಷ ಪ್ರಮೋದ್, ಪ್ರಧಾನ ಕಾರ್ಯದರ್ಶಿ ಹೂವಿನ ಕೊಪ್ಪಲು ಪ್ರಶಾಂತ್, ಉಪಾಧ್ಯಕ್ಷರಾದ ಮಂಟೇಲಿಂಗಯ್ಯ, ಬಿ.ಜಿ.ಪುರ ಶಾಂತಕುಮಾರ್, ಪ್ರಸನ್ನ, ಬಾಳೆಹೊನ್ನಿಗ ಬಸವರಾಜು, ಭೂವಯ್ಯ, ಹಿಟ್ಟನಹಳ್ಳಿ ರಂಗಸ್ವಾಮಿ, ಅಣ್ಣೆಕೊಪ್ಪಲು ಸತೀಶ್, ಕುಲಮೆದೊಡ್ಡಿ ನಾಗೇಂದ್ರ, KK ದೊಡ್ಡಿ ಕೃಷ್ಣ, ಮುಖಂಡರಾದ ಎಂ.ಎಸ್ ರಮೇಶ್, ಶಿವಾನಂದ್, ಅರುಣ್, ಎಂ.ಕೃಷ್ಣಮೂರ್ತಿ, ಮಹೇಶ್, ಶಿವಕುಮಾರ್, ಸರಸ್ವತಿ ಸೇರಿದಂತೆ ಹಲವು ಮುಖಂಡರು, ಮಹಿಳೆಯರು ಹಾಜರಿದ್ದರು.




