Thursday, September 19, 2024

ಪ್ರಾಯೋಗಿಕ ಆವೃತ್ತಿ

ನ.1 ರಂದು ಮನೆಗಳ ಮೇಲೆ ಕನ್ನಡ ಬಾವುಟ ಹಾರಾಟಕ್ಕೆ ಶಾಸಕರ ಮನವಿ

ಜೆಡಿಎಸ್ ಪಕ್ಷ ಈ ನಾಡಿನ ನೆಲ-ಜಲ ಮತ್ತು ನಾಡು-ನುಡಿಯ ಪರವಾಗಿ ಹೋರಾಟ ಮಾಡುತ್ತಿದ್ದು,ನ.1ರ ಕನ್ನಡ ರಾಜೋತ್ಸವ
ದಿನದಂದು ಪ್ರತಿಯೊಂದು ಮನೆಗಳಲ್ಲಿ ಕನ್ನಡದ ಬಾವುಟ ಹಾರಿಸಬೇಕೆಂದು ಎಚ್.ಡಿ.ಕುಮಾರಸ್ವಾಮಿ ಸೂಚಿಸಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಹತ್ತು ಸಾವಿರ ಕನ್ನಡ ಬಾವುಟ ವಿತರಿಸಲಾಗುತ್ತಿದೆ ಎಂದು ಶಾಸಕ ಕೆ,ಅನ್ನದಾನಿ ತಿಳಿಸಿದರು.

ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕನ್ನಡದ ಬಾವುಟಗಳನ್ನು ವಿತರಿಸಿ ಮಾತನಾಡಿದ ಅವರು, ಕನ್ನಡದ ನಾಡು-ನುಡಿಯ ಹೋರಾಟದಲ್ಲಿ ಜೆಡಿಎಸ್ ಪಕ್ಷ ಪ್ರಾಮಾಣಿಕ ಹೋರಾಟ ರೂಪಿಸಿದೆ.ಕನ್ನಡದ ಅಸ್ಮಿತೆ ಉಳಿದರೆ ಕರ್ನಾಟಕದ ಜೊತೆಗೆ ನಾವೆಲ್ಲರೂ ಉಳಿಯುತ್ತೇವೆ ಎಂದರು.

ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕುರುಡುಮಲೆಯಲ್ಲಿ ನ.1ರಂದು ಪಂಚರತ್ನ ಯಾತ್ರೆಗೆ ಚಾಲನೆ ನೀಡಲಿದ್ದಾರೆ.ಜೊತೆಗೆ 2023ರ ವಿಧಾನ ಸಭಾ
ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವ ಸಂಭಾವನೀಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಿದ್ದಾರೆ ಎಂದರು.

ಕುಮಾರಸ್ವಾಮಿ ಅವರ ಸೂಚನೆಯಂತೆ ಕನ್ನಡ ಬಾವುಟ ವಿತರಿಸುತ್ತಿದ್ದು,ಜನರು ತಮ್ಮ ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸಬೇಕೆಂದು ಮನವಿ ಮಾಡಿದರು.

ಕನ್ನಡ ಬಾವುಟವನ್ನು ಜೆಡಿಎಸ್ ಮುಖಂಡರಿಗೆ,ಸಾರ್ವಜನಿಕರಿಗೆ ಶಾಸಕ ಅನ್ನದಾನಿ ವಿತರಣೆ ಮಾಡಿದರು.

ಜೆಡಿಎಸ್ ತಾಲ್ಲೂಕು ಅಧ್ಯಕ್ಷ ವಿಶ್ವನಾಥ್,ಪುರಸಭೆ ಉಪಾಧ್ಯಕ್ಷ ಪ್ರಶಾಂತ್‌ಕುಮಾರ್,ಪುರಸಭೆ ಸದಸ್ಯರಾದ ಸಿದ್ದರಾಜು, ನಾಗೇಶ್, ಮುಖಂಡರಾದ ತಮ್ಮಣ್ಣಗೌಡ,ಪೊತ್ತೆಂಡೆ ನಾಗರಾಜು,ಕಂಬರಾಜು ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!