Tuesday, April 23, 2024

ಪ್ರಾಯೋಗಿಕ ಆವೃತ್ತಿ

ಮಾನವೀಯ ಗುಣಗಳ ಅನುಭವ ಕಥನ ; ನಾಗೇಗೌಡರ ಕಾದಂಬರಿ ”ಸಾವಿನ ಮಂಚದ ಮೇಲೆ”

✍️ ಸಿ.ಎಸ್.ಮಂಜುನಾಥ ಚಿನಕುರಳಿ
 ಮೊ.9964396353
 E [email protected]

ನಾಗೆೇಗೌಡರಿಗೆ ಮೈಸೂರಿನ ಅಪೋಲೋ ಆಸ್ಪತ್ರೆಗೆ ಅಡ್ಮಿಟ್ ಆಗುವ ಸಂದರ್ಭ ಒದಗಿ ಬಂತು ಕಾರಣ ಅವರಿಗೇ ಬ್ಲಾಕ್ ಫಂಗಸ್ ಖಾಯಿಲೆಗೆ ತುತ್ತಾಗಿದ್ದರು. ಮಂಡ್ಯಕ್ಕೆ ಎರಡನೇ ವ್ಯಕ್ತಿಗೆ ಬ್ಲಾಕ್ ಫಂಗಸ್ ಬಂದದ್ದು ನಾಗೇಗೌಡರಿಗೆ ಉಣ್ಣಲಾರದ ತುತ್ತಾಗಿತ್ತು. ನಾಗೇಗೌಡರ ಮಗಳು ಸಾವಿತ್ರಿ ಮತ್ತು ಅಳಿಯ ಕುಮಾರ್ ಅಮೆರಿಕದಿಂದ ಮೊಮ್ಮಗಳ ಬಾಣಂತನಕೆ ಬಂದಂತ ಸಂದರ್ಭದಲ್ಲಿ ನಾಗೇಗೌಡರ ಪಾಲಿಗೆ ಮಗಳು ಮತ್ತು ಅಳಿಮಯ್ಯ ದೇವರಾಗಿದ್ದರು.

ಕೊರೋನ ಹೊಸದಾಗಿ ಬಂದಂತಹ ಸಂದರ್ಭದಲ್ಲಿ ಮೈಸೂರಿನ ಆಸ್ಪತ್ರೆಯಲ್ಲಿ ಬೆಡ್ ಇಲ್ಲದೆ ಮಾನ್ಯ ಶಾಸಕರ ಶಿಫಾರಸ್ಸಿನ ಮೇರೆಗೆ ಅವರಿಗೆ ಬೆಡ್ ನೀಡಲಾಗಿತ್ತು ಮತ್ತು ಅವರ ಹೆಂಡತಿಗೂ ಕೊರೋನ ಬರಲಾಗಿ ಅವರನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿತ್ತು. ಕೋರೋನ ವಾಸಿಯಾದ ನಂತರ ಬ್ಲಾಕ್ ಫಂಗಸ್ ಕಾಯಿಲೆ ಬಂದಿತ್ತು.

ಬ್ಲಾಕ್ ಫಂಗಸ್ ಅಂದರೆ ಇದು ಮೂಗಿನಲ್ಲೇ ಇರುವ ಕೆಟ್ಟ ಸಿಂಬಳ ಕಟ್ಟಿಕೊಂಡು ಉಸಿರಾಟಕ್ಕೆ ತೊಂದರೆ ಕೊಡುವುದು ಕಾಯಿಲೆಯ ಲಕ್ಷಣ ನಂತರ ಕಣ್ಣಿನ ಡಾಕ್ಟರ್ ಮನೀಂದ್ರ ಆಸ್ಪತ್ರೆ ವೈದ್ಯರು ಅದನ್ನು ಪತ್ತೆ ಹಚ್ಚಿ ಆಪರೇಷನ್ ಮಾಡಬೇಕಾಗುತ್ತದೆ ಎಂದು ಹೇಳಿದಾಗ ನಾಗೇಗೌಡರಿಗೇ ಎದೆ ಧಸಕ್ಕೆಂದಿತು. ಇನ್ನೆನ್ನು ಮಾಡುವುದಕ್ಕಾಗಿಲ್ಲ ಇದಕ್ಕೆ ದಿನಕ್ಕೆ ಆರು ಲಿಪೋಸ್ ಒಮಲ್ ಅಂಪೋಟೆರಿಸಿನ್ ಬೀ ಇoಜೆಕ್ಷನ್ ನಂತೆ 10 ದಿನ ಕೊಡಬೇಕು ಈ ಇಂಜೆಕ್ಷನ್ ಇಲ್ಲಿಲ್ಲ ಬೇರೆ ಕಡೆಯಿಂದ ತರಬೇಕು ಅಳಿಯ ಕುಮಾರ್ ಶಾಸಕರ ಮತ್ತು ಸಂಸದರ ನೆರವಿನಿಂದ ತರಿಸಿ ನಾಗೇಗೌಡರಿಗೆ ಕೊಟ್ಟರು. ಅನಂತರ ರಕ್ತ ಪರೀಕ್ಷೆಯ ನಂತರ ಅಪರೇಶನ್ ಗೆ ಸಿದ್ಧಗೊಳಿಸಿದರು. ಅಷ್ಟೊತ್ತಿಗಾಗಲೇ ಅವರ ಬಲ ಗಣ್ಣು ಇಲ್ಲವಾಗಿತ್ತು ಡಿಸ್ಚಾರ್ಜ್ ಮಾಡಲಾಗಿ ಮನೆಗೆ ಹೋಗಿ ಒಂದು ವಾರದ ನಂತರ ಅವರಿಗೆ ಮತ್ತೊಮ್ಮೆ ನೋವು ಕಾಣಿಸಿಕೊಂಡಿತು.

ಸಾವಿನ ಮಂಚದ ಮೇಲೆ (ಕಾದಂಬರಿ)
ಲೇಖಕ ಪ್ರೊ. ಬಿ ನಾರಾಯಣಗೌಡ ಕಟ್ಟೇರಿ
ವಿಭ ಪ್ರಕಾಶನ ಮೈಸೂರು
ಬೆಲೆ: 115

ನಂತರ ಈ ಬ್ಲಾಕ್ ಫಂಗಸ್ ರೋಗ ಇನ್ನೂ ಸರಿಯಾಗಿ ವಾಸಿಯಾಗದೆ ಇರುವುದನ್ನು ಡಾಕ್ಟರ್ ಮನೀಂದ್ರರವರು ಮತ್ತೊಮ್ಮೆ ಅವರ ಮೂಗನ್ನು ಪರೀಕ್ಷಿಸಿ ಬ್ಲಾಕ್ ಫಂಗಸ್ ರೋಗ ಇನ್ನೂ ವಾಸಿಯಾಗಿಲ್ಲ ಮತ್ತೊಮ್ಮೆ ಆಪರೇಷನ್ ಆಗಬೇಕು. ನೀವು ತಿರುಚನಪಲ್ಲಿಗೆ ಹೋಗಿ ಅಲ್ಲಿ ಡಾಕ್ಟರ್ ರಾಮಚಂದ್ರನ್ ಇದ್ದರೆ ಅವರು ಮತ್ತೊಮ್ಮೆ ಅಪರೇಷನ್ ಮಾಡುತ್ತಾರೆ ನಾನು ಅವರಿಗೆ ಕರೆ ಮಾಡಿ ವಿಷಯ ತಿಳಿಸುತ್ತೇನೆ ಅವರ ದೂರವಾಣಿ ನಂಬರ್ ಕೊಡುತ್ತೇನೆ ಮಾತಾಡಿ ದಿನಾಂಕ ನಿಗದಿಗೊಳಿಸಿಕೊಳ್ಳಿ ನಾಗೇ ಗೌಡರಿಗೆ ಭಯವಾಯಿತು, ಮತ್ತೆ ಇನ್ನೊಂದು ಆಪರೇಷನ್ ಅಂದರೆ ಏನು ಮಾಡುವುದು. ಅಳಿಯ ಡಾಕ್ಟರಿಗೆ ಕರೆ ಮಾಡಿ ಮಾತನಾಡಿ ಅವರು ಬನ್ನಿ ಎಂದಾಗ ನಂತರ ನಾಗೇಗೌಡರ ಅಳಿಯ ಮಗಳು ರೈಲಿನಲ್ಲಿ ತಿರುಚನಪಲ್ಲಿಗೆ ಹೋದರು.

ಡಾಕ್ಟರ್ ರಾಮಚಂದ್ರನ ಹತ್ತಿರ ನಾಗೇಗೌಡರ ಹಿಂದಿನ ರೋಗದ ಮಾಹಿತಿಯನ್ನು ಮಗಳು ತಿಳಿಸಿ ಅವರು ನೋಡಿ ಪರೀಕ್ಷಿಸಿ, ಆಪರೇಷನ್ ಮಾಡುತ್ತೇವೆ ಎಂದು ಹೇಳಿ ಡಾಕ್ಟರ್ ಇದಕ್ಕೆ ಎಷ್ಟು ಖರ್ಚಾಗುತ್ತೆ ಆಪರೇಷನ್ಗೆ ಎಂದಾಗ 12 ಲಕ್ಷ ಎಂದು ತಿಳಿಸಿದಾಗ ನಾಗೇಗೌಡರು ಇದನ್ನು ಕೇಳಿ ಬೇಡ ನಡೆಯಿರಿ ಅಪರೇಷನ್, ನನ್ನಲ್ಲಿ ಈಗ ಏನು ಉಳಿದ್ದಿಲ್ಲ ನಾನು ಈಗ ತೊಗಲು ಮೂಳೆ ಅಷ್ಟೇ ಎಂದು ‘ನಾನು ಇದ್ದು ಯಾವ ರಾಜ್ಯ ಆಳಬೇಕು’ ನಡೆಯಿರಿ ಊರಿಗೆ ಹೋಗುವ ಎಂದಾಗ ಮಗಳು ಸುಮ್ನಿರಪ್ಪ ನನ್ನ ಓದಿಸಿ ಮದುವೆ ಮಾಡಿ ನಾನು ಈಗ ದುಡಿಯುತ್ತಿರುವುದು ನಿನ್ನಿಂದಲೇ ಎಂದು ನಾವು ಉಳಿಸ್ಕೊತ್ತೀವಿ ಎಂದಾಗ ಅಪ್ಪನಿಗೆ ಹೃದಯ ಹಗುರವಾಯಿತು. ಮಗಳು ಅಳಿಯ ಅಡ್ವಾನ್ಸ್ ಕಟ್ಟಿ ಡಾಕ್ಟರ್ ಆಪರೇಷನ್ ಮುಗಿಸಿ ಯಶಸ್ವಿಯಾಗಿದೆ. ಎಂದು ತಿಳಿಸಿದಾಗ ಆಪರೇಷನ್ ಇದು ಕೊನೆ ಎಂದಾಗ ನಾಗೇಗೌಡರಿಗೆ ಖುಷಿಯಾಯಿತು.

ಮತ್ತೆ ಎರಡು ಮೂರು ದಿನ ಇಲ್ಲೇ ಇದ್ದು. ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ ಎಂದು ಹೇಳಿ ಕಳಿಸಲಾಯಿತು. ಮತ್ತೆ ಅವರು ಮೈಸೂರಿಗೆ ಪಯಣ ಬೆಳೆಸಿ ಅಲ್ಲಿ ಮತ್ತೆ ಚಿಕಿತ್ಸೆ ಪಡೆದುಕೊಂಡು ಎರಡು ಮೂರು ದಿನ ಇದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ನಂತರ ಒಂದು ವಾರ ಬಿಟ್ಟು ಬನ್ನಿ ಎಂದು ಹೇಳಿ ಮನೆಯಲ್ಲಿ ನೀವು ಆ ಮೂಗಿನ ಸಿಂಬಳವನ್ನು ಶುಚಿ ಮಾಡಬೇಕು ಹೇಗೆ ಶುಚಿ ಮಾಡಬೇಕೆಂದು ತೋರಿಸಿಕೊಡುತ್ತೇವೆ ಎಂದು ಹೇಳಿ ಹಾಗೆ ನೀವು ಮನೆಯಲ್ಲಿ ಶುಚಿಗೊಳಿಸಿ ಎಂದು ಡಿಸ್ಚಾರ್ಜ್ ಮಾಡಿ ಮನೆಗೆ ಕಳಿಸಿಕೊಟ್ಟರು. ಒಂದು ವಾರದ ನಂತರ ಆಸ್ಪತ್ರೆಗೆ ಹೋದರು ಅಲ್ಲಿ ಮನೀoದ್ರ ರವರು ಎಲ್ಲವನ್ನು ಪರೀಕ್ಷಿಸಿ ರೋಗ ಕ್ಲಿಯರ್ ಆಗಿದೆ ಈಗ ಮತ್ತೆ ಕಣ್ಣಿನ ಗುಡ್ಡೆಯನ್ನು ತೆಗೆಯಬೇಕು ಇಲ್ಲದಿದ್ದರೆ ಎಡಗಣ್ಣಿಗೆ ತೊಂದರೆ ಆಗುತ್ತದೆ ಎಂದರು.

ಅಯ್ಯೋ ವಿಧಿಯೇ ಎಂದು ನಾಗೇಗೌಡರು ಉದ್ಘಾರ ತೆಗೆದರು ಇನ್ನೂ ಎಷ್ಟು ಅಪರೇಷನ್ ಮಾಡಿಸಿಕೊಳ್ಳಬೇಕು. ಡಾಕ್ಟರ್ ಆಪರೇಷನ್ ಗೆ ಸಿದ್ದಪಡಿಸಿದರು. ಆಪರೇಷನ್ ಯಶಸ್ವಿಯಾಯಿತು. ಮನೆಗೆ ಬಂದು ವಿಶ್ರಾಂತಿ ಪಡೆದುಕೊಂಡು ನಾಗೇಗೌಡರು ನಿಟ್ಟುಸಿರುಬಿಟ್ಟರು. ನಾಗೇಗೌಡರು ಸುಂದರವಾಗಿದ್ದರು ಇವರಿಗೆ ಇಂಥ ಕಷ್ಟ ಬಂದಿತ್ತಲ್ಲ ಎಂದು ಜನ ನೊಂದುಕೊಂಡರು. ಮೂವತ್ತು ವರ್ಷ ಕನ್ನಡದ ಪಾಠ ಮಾಡಿ ಪ್ರಾಂಶುಪಾಲರಾಗಿ ಕೆಲಸ ನಿರ್ವಹಿಸಿ ವಿದ್ಯಾರ್ಥಿಗಳ ನೆಚ್ಚಿನ ಪ್ರಾಧ್ಯಾಪಕರಾಗಿದ್ದರು. ಬಹಳ ಸಂಪ್ರದಾಯದ ಕುಟುಂಬದಿಂದ ಬಂದವರು. ನಾಲ್ಕು ತಿಂಗಳುಗಳ ಕಾಲ ಅವರು ಆಸ್ಪತ್ರೆಯಲ್ಲಿ ನೋವನ್ನು ಅನುಭವಿಸಿದ್ದು, ಎಲ್ಲರೂ ಅವರನ್ನು ನೋಡುವುದಕ್ಕೆ ಮನೆಗೆ ಬರುತ್ತಿದ್ದರು. ಮಗಳು ಅಳಿಯ ಮಗಳ ಬಾಣಂತನಕೆ ಕೊರೋನದ ಸಂದರ್ಭದಲ್ಲಿ ಬಂದವರು ನಾಲ್ಕು ವರ್ಷಗಳ ಕಾಲ ಇಲ್ಲಿ ಇದ್ದು ತಂದೆಯ ಸೇವೆಯನ್ನು ಮಾಡಿದರು. ಸಾವಿತ್ರಿ ಅಳಿಯ ಕುಮಾರ್ ಮತ್ತು ಮಗ ವಿಜಯ ಅವರಿಗೆ ಚೆನ್ನಾಗಿ ಸ್ಪಂದಿಸಿದ್ದು ಮಗ ವಿಜಯ ‘ನನ್ನಪ್ಪನಿಗೆ ಬಂದಿರುವ ಈ ರೋಗ ನನಗಾದರು ಬರಬಾರದಿತ್ತ’ ಎಂದು ಆಲವತ್ತುಕೊಂಡನು.

‘ಜೀವ ನೀರ ಮೇಲೆ ಗುಳ್ಳೆ ಇದ್ದ ಹಾಗೆ’. ‘ಓದಿದರು ಉಪವಾಸ ಮಾಡಿದರು ದೇವಾಲಯ ಸುತ್ತಿದರು ಮರಣ ಬಿಡುವುದೇ ಎಂದು ಸರ್ವಜ್ಞನ ಮಾತುಗಳನ್ನು ನೆನಪಿಸಿಕೊಳ್ಳಬೇಕು.’ ಕಣ್ಣು ಕಾಣದ ಮುನ್ನ ಬೆನ್ನು ಭಾಗದ ಮುನ್ನ ಮರಣವು ಬರಲಿ’ ಎಂದು ಬಸವಣ್ಣ ನುಡಿಯುತ್ತಾರೆ. ಎಷ್ಟು ಹಣ, ಅಧಿಕಾರ ಇದ್ದರೇನು ಪ್ರಯೋಜನ ಆರೋಗ್ಯವಿಲ್ಲದಿದ್ದರೆ ‘ಆರೋಗ್ಯವೇ ಮಹಾಭಾಗ್ಯ’ಕಾಸಿನಿಂದ ಮಾತ್ರೆ ಕೊಳ್ಳಬಹುದು ಆರೋಗ್ಯ ಕೊಂಡುಕೊಳ್ಳುವುದಕ್ಕೆ ಆಗುತ್ತಾ. ನಾಲ್ಕು ತಿಂಗಳ ಅವರ ಆಸ್ಪತ್ರೆಯ ಸಹವಾಸ ನರಕಕ್ಕೆ ಹೋಗಿ ಬಂದ ಹಾಗಿದೆ, ಸಾವಿನ ಮನೆಯ ಕದವ ತಟ್ಟಿ ಬಂದ ಹಾಗಿದೆ. ಪುನರ್ಜನ್ಮದಂತೆ ಹೊಸ ಮರು ಜನ್ಮ ಪಡೆದಂತೆ. ತಾಯಿ ಜನ್ಮ ಕೊಟ್ಟಳು ಮಗಳು ಅವಳಿಗೆ ಪುನರ್ಜನ್ಮ ನೀಡಿದಳು ಸಾಯುತ್ತಿರುವ ಅಪ್ಪನನ್ನು ಉಳಿಸಿಕೊಂಡಳು.

ನಾಗೇಗೌಡರು ನನ್ನ ಮಗಳು ಇಲ್ಲದಿದ್ದರೆ ನನ್ನ ಸಾವು ಖಂಡಿತ. ಎಂದು ಅರಿತ್ತಿದ್ದರು. ನಾಗೇಗೌಡರು ನಾಲ್ಕು ತಿಂಗಳು ಯಾವುದೇ ಯಾರ ಸಂಪರ್ಕ ಇಲ್ಲದೆ ಒಬ್ಬರೇ ಏಕಾಂಗಿಯಾಗಿ ಮರಣದ ಮಂಚದ ಮೇಲೆ ಕಾಲ ಕಳೆದಿದ್ದರು ಈಗ ಅವರು ಎಲ್ಲರನ್ನು ನೋಡುವ ತನ್ನ ಹುಟ್ಟೂರನ್ನು ನೋಡುವ ಅವಕಾಶವನ್ನು ಮಗಳು ದೊರಕಿಸಿ ಕೊಡಬೇಕೆಂದು ಕೇಳಲಾಗಿ ಮಗಳು ಒಪ್ಪಿ ಈಗ ನಾಗೇಗೌಡರ ಊರದ ಕಟ್ಟೇರಿಗೇ ಬಂದು ತನ್ನ ಹುಟ್ಟಿದ ಮನೆ ಮತ್ತು ಮಾವನ ಮನೆ ನೋಡಬೇಕೆಂದು ಆಸೆಪಟ್ಟು ಬರುತ್ತಾ ಮೈಸೂರಿನ ಕೃಷ್ಣರಾಜಸಾಗರದ ಕಡೆಯಿಂದ ಪ್ರಯಾಣ ಬೆಳೆಸುತ್ತಾ ಮಾರ್ಗವಾಗಿ ಬರುತ್ತಿರುವ ಸಂದರ್ಭದಲ್ಲಿ ಕಾವೇರಿ ಮಾತೆ ಕೈ ಮುಗಿದು ಇದು ಕರ್ನಾಟಕ ಜನರಿಗೆ ಕಾವೇರಿ ನೀರು ದೇವರು ನಮ್ಮ ಮಂಡ್ಯ ಜನರ ಕಣ್ಮಣಿ, ಜೀವನಾಡಿ ಎಂದು ಹೊಗಳಿ ಇವತ್ತು ಮಂಡ್ಯದ ಜನರು ವ್ಯವಸಾಯವನ್ನು ಇವತ್ತು ಪ್ರತಿಯೊಂದು ಮನೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ ವಿಶ್ವೇಶ್ವರಯ್ಯ ನವರ ಫೋಟೋವನ್ನು ಮನೆಯಲ್ಲಿಟ್ಟು ಪೂಜಿಸುತ್ತಾರೆ, ರಾಣಿಯವರು ತಮ್ಮ ಒಡವೆಗಳನ್ನು ಅಡ ಇಟ್ಟು ಜಲಾಶಯ ಕಟ್ಟಿಸಿದರು ಕಣಮ್ಮ ಎಂದು ಮಗಳಿಗೆ ಹೇಳಿದರು. ಅನಂತರ ಅವರು ಊರಿಗೆ ಬಂದಾಗ ಅವರು ಅಣ್ಣಂದಿರು ಭಾವರವರನ್ನು ನೋಡಿ ಭಾವುಕರಾದರು. ಆತನನ್ನು ನೋಡುವುದಕ್ಕೆ ಅವರ ಮನೆಯ ದಲಿತ ಜನಾಂಗದ ಕೆಲಸದಾಳು ಬಂದಿದ್ದ ಆತಕೂಡ ಇವರ ಮನೆಯವನಾಗಿದ್ದ. ಜೊತೆಗೆ ಅವರ ಹಬ್ಬದಲ್ಲಿ ಪೂಜೆ ಮಾಡುವ ಆ ಊರಿನ ದಾಸಯನ್ನು ನಾಗೇಗೌಡರನ್ನು ನೋಡುವುದಕ್ಕೆ ಬಂದಿದ್ದ.

ವಿಜ್ಞಾನ ತಂತ್ರಜ್ಞಾನ ನಮ್ಮ ನಂಬಿಕೆ ಆಚರಣೆ ಎಷ್ಟು ಬೆಳೆದರೂ ನಮ್ಮ ಧಾರ್ಮಿಕ ಹಬ್ಬ ಹರಿದಿನಗಳನ್ನು ನಾವು ಮರೆಯಬಾರದು. ‘ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ಬಂದು ಹೋಗುವ ನಡುವೆ ಬರಿ ಕತ್ತಲೆ.’ ನಾವು ಏನನ್ನು ಒತ್ತುಕೊಂಡು ಬಂದಿಲ್ಲ, ಒತ್ತುಕೊಂಡು ಹೋಗ್ತಿಲ್ಲ, ಇರುವ ನಾಲ್ಕು ದಿನ ಚೆನ್ನಾಗಿ ಬದುಕಿ ಬಾಳಿ ಹೋಗಬೇಕು. ‘ಒಳಿತು ಮಾಡು ಮನುಷ ನೀ ಇರೋದು ಮೂರು ದಿವಸ’ ಎನ್ನುವ ತತ್ವಗೀತೆಯನ್ನು ನೆನಪಿಸುತ್ತದೆ ಈ ಸಂದರ್ಭದಲ್ಲಿ ನೆನಪಿಸುತ್ತದೆ. ಮತ್ತೆ ಈ ಸಂದರ್ಭದಲ್ಲಿ ಭಗವದ್ಗೀತೆಯ ಸಾಲುಗಳನ್ನು ನೆನಪಿಸುತ್ತದೆ. ‘ನೀನು ಏನಾದರೂ ಪಡೆದಿದ್ದರೆ ಇಲ್ಲಿಂದಲೇ ಪಡೆದಿರುವೆ, ಇಲ್ಲೇ ಬಿಟ್ಟು ಹೋಗುವೆ. ಅಳಿದ ಮೇಲೆ ಉಳಿದ ಬದುಕು ಏನು ಎಂಬುದು ಗೊತ್ತಾಗುತ್ತೆ ಇದ್ದಾಗ ದಾನ ಧರ್ಮ ಮಾಡು ನೆರೆಯವರನ್ನು ಪ್ರೀತಿಸು ಜಾತಿಯನ್ನು ಸುಡು ಎನ್ನುವ ಮಾನವೀಯ ಗುಣಗಳನ್ನು ಈ ಅನುಭವ ಕಥನದಲ್ಲಿ ಕಾಣಬಹುದು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!