Wednesday, September 18, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| 18ನೇ ರಾಜ್ಯ ಮಟ್ಟದ ಕಿವುಡರ ಚೆಸ್ ಸ್ಪರ್ಧೆಗೆ ಚಾಲನೆ

ವಿಶೇಷ ಚೇತನರಲ್ಲಿ ಕಿವುಡತನವಿರುವ ಪ್ರತಿಭಾಂತ ಚೆಸ್‌ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ ಎಂದು ಎಸ್.ಬಿ.ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಹೇಳಿದರು.

ಮಂಡ್ಯ ನಗರದಲ್ಲಿರುವ ಎಸ್ ಬಿ.ಸಮುದಾಯ ಸಭಾಂಗಣದಲ್ಲಿ ಜಿಲ್ಲಾ ಕಿವುಡರ ಸಂಘ ಹಾಗೂ ಸಿಟಿ ಲಯನ್ಸ್ ಸಂಸ್ಥೆ, ಪಿಡಿಎಫ್ ಲಯನ್ಸ್ ಸಂಸ್ಥೆ, ಲಯನ್ಸ್ ಸಂಸ್ಥೆ ಮಂಡ್ಯ, ಮಧುರ ಲಯನ್ಸ್ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 2 ದಿನಗಳ ಕಾಲ ನಡೆಯುವ 18ನೇ ರಾಜ್ಯ ಮಟ್ಟದ ಕಿವುಡರ ಚೆಸ್ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚೆಸ್ ಪಂದ್ಯ ಮನಸ್ಸಿನ ಶಕ್ತಿ ಮತ್ತು ಬುದ್ದಿ ಕೌಶಲ್ಯತೆಯನ್ನ ಪ್ರಚೋದಿಸುತ್ತದೆ, ವಿಶೇಷ ಚೇತನರು ಅಭ್ಯಾಸದಿಂದ ಸ್ಪರ್ಧೆಯಲ್ಲಿ ತಲೀನತೆಯಿಂದ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ. ವಿಶೇಷ ಚೇತನರು ತಮ್ಮ ಬುದ್ದಿಯನ್ನು ಚುರುಕಾಗಿಸಿಕೊಂಡು, ಚೆಸ್ ಪಂದ್ಯದಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ವಿಚಾರ, ಇಲ್ಲಿರುವವರು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಚಸ್ ಪಂದ್ಯವನ್ನು ಆಡಿ ಗೆದ್ದಿರುವವರು ಇರುವುದು ಸಂತಕರ ಎಂದು ಹೇಳಿದರು.

ಜಾಹೀರಾತು

ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲಾ ಮಾಜಿ ರಾಜ್ಯಪಾಲ ಡಾ.ರಮೇಶ್ ಮಾತನಾಡಿ, ರಾಜ್ಯಮಟ್ಟದ ಕಿವುಡರ ಚೆಸ್ ಪಂದ್ಯಾವಳಿಗೆ ಎಲ್ಲಾ ಸಹಕಾರವನ್ನು ಲಯನ್ಸ್ ಸಂಸ್ಥೆಗಳು ನೀಡಿವೆ, 150 ಕ್ಕೂ ಹೆಚ್ಚು ಮಂದಿಗೆ 3 ದಿನಗಳ ಊಟದ ವ್ಯವಸ್ಥೆ, ಬಹುಮಾನಗಳ ವ್ಯವಸ್ಥೆಯನ್ನು ಮಾಡಿದ್ದೇವೆ, ಸೇವಾ ಮನೋಭಾವದಿಂದ ಈ ಕಾರ್ಯ ಸಾಗುತ್ತಿದೆ ಎಂದು ನುಡಿದರು. ವಿವಿಧ ಜಿಲ್ಲೆಗಳಿಂದ ಸುಮಾರು 170ಕ್ಕೂ ಹೆಚ್ಚು ಕಿರಿಯ-ಹಿರಿಯ ಮತ್ತು ಹಿರಿಯ ನಾಗರಿಕರು ಚಸ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ  ಮೈಸೂರಿನ ಕೆ. ಎಸ್. ಎಫ್. ಡಿ ಸಂಸ್ಥೆಯ ಜಿ ವಿ ಮಹೇಶ್ ವರ್ಮ, ಕೋಲಾರ ಕೆ ಎಸ್ ಎಫ್ ಡಿ ಕಾರ್ಯದರ್ಶಿ ಜಿ.ಎಸ್. ನವೀನ್ ಕುಮಾರ್, ತುಮಕೂರಿನ ಸಿ ಇ ಓ ವಿ. ಕುಮಾರ್, ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷ ಮದ್ದೂರು ಆರ್ ಯೋಗೇಶ್, ಉಪಾಧ್ಯಕ್ಷ ಕೆ ಆರ್ ಪೇಟೆ ರಘು, ಕಾರ್ಯದರ್ಶಿ ಎಂ ಎಸ್ ಕುಮಾರ್, ಜಂಟಿ ಕಾರ್ಯದರ್ಶಿ ಕೆ ಆರ್ ಪೇಟೆ ಎಂ.ಚರಣ್, ಖಜಾಂಚಿ ಶಿವಳ್ಳಿ ನಂದೀಶ್, ಕ್ರೀಡಾ ಕಾರ್ಯದರ್ಶಿ ವೆಂಕಟೇಶ್ ಪ್ರಸಾದ್, ಸದಸ್ಯರ ವೈ ಎಂ ಮಹೇಶ್, ಎಸ್ ಗೌತಮ್, ಕೆಎನ್ ಅರವಿಂದ್, ಸಿ ದಯಾನಂದ್ ಕೆ.ಬಿ. ಚೇತನ್ ಮತ್ತಿತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!