ಮಂಡ್ಯ ಜಿಲ್ಲಾ ಸಮಾನ ಮನಸ್ಕರ ವೇದಿಕೆ ವತಿಯಿಂದ ಕೋಮುವಾದಿ ಬಿಜೆಪಿ ಸರ್ಕಾರ ಜಾರಿ ಮಾಡಿರುವ ಶಾಲಾ ಪಠ್ಯಕ್ರಮವನ್ನು ವಿರೋಧಿಸಿ ಮಂಡ್ಯದ ಸಂಜಯ ವೃತ್ತದಲ್ಲಿಂದು ಬಾರೀ ಪ್ರತಿಭಟನೆ ಮಾಡಲಾಯಿತು..
ಕೋಮುವಾದಿ ಬಿಜೆಪಿ ಸರ್ಕಾರದಿಂದ ಪರಿಷ್ಕರಣೆಗೊಂಡು ಮನುಸ್ಮೃತಿ ಕೈ ಪಿಡಿಯಂತಿರುವ ಪಠ್ಯಕ್ಕೆ ನಡು ರಸ್ತೆಯಲ್ಲಿ ಬೆಂಕಿ ಹಚ್ಚಿ ಬೇಯಿಸಲಾಯಿತು.
ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯ ಅದ್ಯಕ್ಷ ಚಕ್ರತೀರ್ಥ ವಿರುದ್ದ ಮತ್ತು ಕೋಮುವಾದಿ ಬಿಜೆಪಿ ಸರ್ಕಾರದ ವಿರುದ್ದ ಘೋಷಣೆ ಮೊಳಗಿಸಿದ ಪ್ರತಿಭಟನಾಕಾರರು ಆತನನ್ನು ಪರಿಷ್ಕರಣಾ ಸಮಿತಿಯಿಂದ ಕೂಡಲೇ ವಜಾಗೊಳಿಸಬೇಕೆಂದು ಬಿಜೆಪಿ ಸರಕಾರಕ್ಕೆ ಆಗ್ರಹಿಸಿದರು.
RSS ಮತ್ತು ಸಂಘಪರಿವಾರದ ನಿರ್ದೇಶನದಂತೆ ಶಾಲಾ ಪಠ್ಯಗಳಲ್ಲಿ ಕೋಮುದ್ವೇಶ ಹೆಚ್ಚಿಸುವ ವಿಷಯಗಳನ್ನು ತುಂಬಲಾಗಿದೆ. ಮೌಲಿಕ ಶಿಕ್ಷಣದ ಬದಲಿಗೆ ಸನಾತನಾವಾದಿ ಶಿಕ್ಷಣವನ್ನು ಮಕ್ಕಳಿಗೆ ಕಲಿಸುವ ಮೂಲಕ ಮಕ್ಕಳಲ್ಲಿ ಕೋಮುದ್ವೇಶ ಬೆಳೆಯುವ ಪ್ರಯತ್ನಗಳು ಪ್ರಜ್ಞಾಪೂರ್ವಕವಾಗಿ ನಡೆಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.
ನಾಡಿನ ಸಾಹಿತ್ಯ ಲೋಕದ ಸಾಕ್ಷಿ ಪ್ರಜ್ಞೆಗಳಾದ ಕುವೆಂಪು ದೇವನೂರು ಮಹದೇವ , ಬರಗೂರು ರಾಮಚಂದ್ರಪ್ಪರಂತ ಸಮತಾವಾದಿ ಜನರ ಪಠ್ಯಗಳನ್ನು ಹೊರಗಿಟ್ಟು ಬ್ರಿಟೀಷರ ಬೂಟು ನೆಕ್ಕಿದ ಸಂಘಪರಿವಾರದ ನಿಷ್ಪ್ರಯೋಜಕರ ಪಠ್ಯಗಳನ್ನು ತುರಕಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.