Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಮಾಜ ಅಭ್ಯುದಯಕ್ಕಾಗಿ ಸಂಘಟನೆಗಳು ಅತ್ಯವಶ್ಯಕ: ಪ್ರೊ. ಜಯಪ್ರಕಾಶಗೌಡ

ಮನುಷ್ಯ ಸಂಘಜೀವಿ, ಸಮಾಜ ಅಭ್ಯುದಯಕ್ಕಾಗಿ ಸಂಘಟನೆಗಳು ಅತ್ಯವಶ್ಯಕ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶಗೌಡ ಹೇಳಿದರು.

ಮಂಡ್ಯ ನಗರದ ಕರ್ನಾಟಕ ಸಂಘದ ಕೆ.ವಿ.ಎಸ್‌ಭವನದಲ್ಲಿ ಜೈ ಕರ್ನಾಟಕ ಪರಿಷತ್ತು ಆಯೋಜಿಸಿದ್ದ ನೂತನ ಶಾಖಾ ಅಧ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾಗರೀಕತೆ ಬೆಳೆದಂತೆಲ್ಲಾ ಭಾಷೆ-ಗಡಿ ಪ್ರದೇಶಗಳು ವಿಸ್ತಾರಗೊಳುತ್ತಿವೆ, ಸಂಘಟನಾತ್ಮಕ ಬದುಕಿನಲ್ಲಿ ಎಲ್ಲವೂ ಘಟಿಸುತ್ತವೆ, ಉಳಿಸಿ-ಬೆಳೆಸುವುದಾಕ್ಕಾಗಿ ಸಂಘಟನೆಗಳು ಅಗತ್ಯವಿವೆ ಎಂದು ನುಡಿದರು.

ಇಂದಿನ ದಿನಗಳಲ್ಲಿ ನಾಡು-ನುಡಿ-ನೆಲ ಜಲ ರಕ್ಷಣೆಗಾಗಿ ಹತ್ತಾರು ಸಂಘಟನೆಗಳು ಹುಟ್ಟಿಕೊಂಡಿವೆ, ಜಾಗೃತಿ ಮನೋಭಾವ ಹೆಚ್ಚಿಸುತ್ತಿವೆ, ಭಾಷೆ-ಭಾವನೆಗಳ ವೃದ್ದಿಗಾಗಿ ಹೋರಾಟುತ್ತಲೆ ಇದ್ದೇವೆ ಎಂದರು.

ಜೈ ಕರ್ನಾಟಕ ಪರಿಷತ್ತು ರಾಜ್ಯಾಧ್ಯಕ್ಷ ಡಾ.ಎಸ್.ನಾರಾಯಣ್, ಜೈ ಕರ್ನಾಟಕ ಪರಿಷತ್ತಿ ಮೂಲಧ್ಯೇಯ ನಾಡು, ನುಡಿ, ಕಲೆ, ಸಾಹಿತ್ಯ, ಕ್ರೀಡೆ, ಸಂಸ್ಕೃತಿ, ಶಿಕ್ಷಣ ಆರೋಗ್ಯ ಪರಿಸರ ಕಾಳಜಿ ಹೆಚ್ಚಿಸುವುದಾಗಿದೆ ಎಂದರು.

ದೇಶದಲ್ಲಿ ಏಕರೂಪ ಶಿಕ್ಷಣ ಜಾರಿಗಾಗಿ ಹೋರಾಟ ಹಳ್ಳಿಯಿಂದ ದಿಲ್ಲಿಯವರೆಗೂ ನಡೆದಿದೆ, ಏಕರೂಪ ಶಿಕ್ಷಣದಿಂದ ಬಡವ, ಬಲ್ಲಿದ, ಅಧಿಕಾರಿಗಳ ಮಕ್ಕಳಿಗೆ ಒಂದೆ ರೀತಿಯ ಶಿಕ್ಷಣ ಲಭ್ಯವಾಗಿತ್ತದೆ, ಇಂದು ರಾಜ್ಯ-ಕೇಂದ್ರ ಸರ್ಕಾರಗಳ ಶಿಕ್ಷಣ ವ್ಯವಸ್ಥೆಯಿದೆ ಎಂದು ನುಡಿದರು.

ಮನುಷ್ಯ ಆರೋಗ್ಯಕ್ಕಾಗಿ ತಾನೇ ತನ್ನ ಅಗತ್ಯ ವಸ್ತುಗಳನ್ನು ಬೆಳೆದುಕೊಳ್ಳುವುದನ್ನು ರೂಡಿಸಿಕೊಳ್ಳಬೇಕು, ಪ್ಲಾಸ್ಟಿಕ್ ಮುಕ್ತ ಮಣ್ಣು-ಜೀವನ ಮಾಡಿಕೊಳ್ಳಬೇಕಿದೆ, ಪರಿಸರ, ಆರೋಗ್ಯ ಕಾಳಜಿ ಇಲ್ಲದಿದ್ದರೆ ಎಲ್ಲರೂ ವಿಫಲವಾಗುತ್ತದೆ ಎಂದು ಎಚ್ಚರಿಸಿದರು.

ಬಳಿಕ ಪರಿಷತ್ತಿನ ನೂತನ ಶಾಖಾ ಅಧ್ಯಕ್ಷರುಗಳ ಪದಗ್ರಹಣ ನಡೆದು ಪ್ರಮಾಣ ವಚನ ಸ್ವೀಕರಿಸಲಾಯಿತು. ಅಭಿನಂನೆ ನಡೆಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ರೈತಹಿತ ರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ ರಂಗನಾಯಕಿ ಸ್ತ್ರೀ ಸಮಾಜ ಅಧ್ಯಕ್ಷೆ ಆಶಾಲತಾ, ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಬಸವರಾಜ್ ಜೆ., ಸತ್ಯಮೂರ್ತಿ ರಾಜ್ಯ ಸಂ.ಕಾರ್ಯದರ್ಶಿ ಪ್ರಸಾದ್, ರಾಜ್ಯ ಖಜಾಂಚಿ ಕೆಂಪೇಗೌಡ, ಸತೀಶ್ ಕುಮಾರ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!