ಇಂದು ಮಂಡ್ಯ ಕಲಾಮಂದಿರದಲ್ಲಿ ಪ್ರತಿಷ್ಠಿತ ಅಮೇಜಿಂಗ್ ಡಾನ್ಸ್ ಸಂಸ್ಥೆಯ 10ನೇ ವರ್ಷದ ದಶಮನೋತ್ಸವ ಕಾರ್ಯಕ್ರಮಕ್ಕೆ ಮಾನ್ಯ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚೆಲುರಾಯಸ್ವಾಮಿ ಅವರು ಉದ್ಘಾಟಿಸಿ ಮಾತನಾಡಿ ಮಂಡ್ಯ ಜಿಲ್ಲೆ ಕಲೆ ಸಾಮಾಜಿಕ ಸಾಂಸ್ಕೃತಿಕವಾಗಿ ಸಾಧನೆ ಮಾಡಿಕೊಂಡು ಬಂದಿದೆ ಇಂತಹ ಸಂಸ್ಥೆಗಳು ದಶಕಗಳನ್ನು ಮೀರಿ ಕೆಲಸ ನಿರ್ವಹಿಸಿರುವ ಸಂಸ್ಥೆಗೆ ನನ್ನ ಸಹಕಾರವಿರುತ್ತದೆ.
ಇಂದಿನ ದಿನಮಾನಗಳಲ್ಲಿ ಯುವಕ ಯುವತಿಯರು ಹೆಚ್ಚು ಸಾಧನೆ ಮಾಡುತ್ತಿದ್ದಾರೆ. ಟಿವಿಯಲ್ಲಿ ನಡೆಯುವ ಟಿಕೆಡಿ ಇಂತಹ ಕಾರ್ಯಕ್ರಮಗಳಲ್ಲಿ ನಮ್ಮ ಜಿಲ್ಲೆಯ ಮಕ್ಕಳು ಹೆಚ್ಚಿನ ಭಾಗವಹಿಸಿ ಜಿಲ್ಲೆಗೆ ಮತ್ತು ರಾಜಕೀರ್ತಿ ತರಬೇಕೆಂದು ಕರೆ ನೀಡಿದರು.ಮಂಡ್ಯ ಜಿಲ್ಲೆಯ ತನ್ನದೇ ಆದಂತ ಗತವೈಭವನ ಹೊಂದಿದೆ.ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಚಿಂತನೆ ಮಾಡಲಾಗುತ್ತಿದೆ. ಅದ್ದೂರಿಯಾಗಿ ಕನ್ನಡ ಸಾಹಿತ್ಯ ಸಮ್ಮೇಳನ ಜೊತೆಗೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮಂಡ್ಯದಲ್ಲಿ ಹೆಚ್ಚು ನಡೆಯಬೇಕು. ಅಮೇಜಿಂಗ್ ಡಾನ್ಸ್ ಸಂಸ್ಥೆ ಇನ್ನು ಹೆಚ್ಚು ಹೆಚ್ಚು ಸಾಧನೆ ಮಾಡಲೆಂದು ಹಾರೈಸಿದರು.
ಕನ್ನಡ ಸೇನೆ ಮಂಡ್ಯ ಜಿಲ್ಲಾಧ್ಯಕ್ಷರು ಮಂಜುನಾಥ್ ಮಾತನಾಡಿ ಮಂಡ್ಯ ಜಿಲ್ಲೆಗೆ ಕಲಾಮಂದಿರ ನವೀಕರಣ ಮಾಡಿ. ಸಾಂಸ್ಕೃತಿಕ ಹಾಗೂ ನಾಟಕ ಸಾಮಾಜಿಕ ಕಾರ್ಯಕ್ರಮಗಳ ನೆಲಗಟ್ಟಿನಲ್ಲಿ ಕಾರ್ಯಕ್ರಮಕ್ಕೆ ಹನು ಮಾಡಿರುವುದು ಬಹಳ ಸಂತೋಷದ ವಿಷಯ ನಮ್ಮ ಸಂಸ್ಥೆ ಕಳೆದ 15 ವರ್ಷಗಳಿಗೆ ಹೆಚ್ಚು ಸಾಂಸ್ಥಿಕ ಕಾರ್ಯಕ್ರಮವನ್ನು ಮಾಡಿಕೊಂಡು ಬಂದು ಸಾವಿರಾರು ಮಕ್ಕಳನ್ನ ಡ್ಯಾನ್ಸ್ ಪ್ರತಿಭೆಗಳಾಗಿ ಮಾಡಿದ್ದೇವೆ . ಮಂಡ್ಯ ಅಲ್ಲದೆ ನಮ್ಮ ಸಂಸ್ಥೆ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ನಮ್ಮ ಕಾರ್ಯಕ್ರಮವನ್ನು ನೀಡಿದ್ದೇವೆ ನಮ್ಮ ಕಾರ್ಯಕ್ರಮಕ್ಕೆ ನಿಮ್ಮ ಸಹಕಾರವಿರಲಿ ಎಂದು ಮಂಜುನಾಥ್ ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರು. ನಾಯಕರು ರವಿಕುಮಾರ್. ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷರು ತ್ಯಾಗರಾಜ್. ಮೈ ಶುಗರ್ ಕಾರ್ಖಾನೆ ಅಧ್ಯಕ್ಷರಾದ ಸಿಡಿ ಗಂಗಾಧರ್. ಮಂಡ್ಯ ನಗರ ಅಭಿವೃದ್ಧಿ ಅಧಿಕಾರದ ಅಧ್ಯಕ್ಷರಾದ ನಹಿಮ್ . ಸಂಸ್ಥೆಯ ಅಧ್ಯಕ್ಷರಾದ ಹೊಸಳ್ಳಿ ಶೇಖರ್.ಇದ್ದರು




