Wednesday, November 18, 2026

ಪ್ರಾಯೋಗಿಕ ಆವೃತ್ತಿ

ಕ್ಯಾತನಳ್ಳಿ ಚಂದ್ರಣ್ಣನವರ We Can Write ಕೃತಿ ಬಿಡುಗಡೆ

ಪ್ರೌಢಶಾಲಾ ಹಾಗೂ ಪದವಿ ಪೂರ್ವ ಕಾಲೇಜಿನ ಮಕ್ಕಳಿಗಾಗಿ ಪಾಂಡವಪುರದ ಕ್ಯಾತನಹಳ್ಳಿಯ ಬಿಆರ್‌ಸಿ ಯ ಎನ್.ಎಸ್. ಚಂದ್ರಣ್ಣ ಅವರು ಬರೆದಿರುವ,ಬಹಳ ಸರಳವಾಗಿ ಇಂಗ್ಲಿಷ್‌ನಲ್ಲಿ ಪ್ರಬಂಧ ಬರೆಯಲು ಮಾರ್ಗದರ್ಶನ ನೀಡುವ We Can write ಕೃತಿಯನ್ನು ಕೃಷ್ಣರಾಜಪೇಟೆ ಪಟ್ಟಣದ ಅಜೀಂ ಪ್ರೇಮಜೀ ಪೌಂಡೇಶನ್‌ನ ಕಚೇರಿಯಲ್ಲಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ತಿಮ್ಮೇಗೌಡರು ಬಿಡುಗಡೆ ಮಾಡಿದರು.

ಈ ಪುಸ್ತಕ ಕುರಿತು ಪರಿಸರವಾದಿ ಮೈಸೂರಿನ ಮ್ಯಾನ್ ಮನು ಮಾತನಾಡಿದರು. ಬಿಆರ್‌ಸಿ ಸಂಯೋಜನಾಧಿಕಾರಿಗಳಾದ ಹೆಚ್ ಕೆ ಮಂಜುನಾಥ, ತಾಕಸಪ ಅಧ್ಯಕ್ಷರಾದ ಪೂರ್ಣಚಂದ್ರ ತೇಜಸ್ವಿ, ಶಿಕ್ಷಕರಾದ ಪದ್ಮೇಶ್ ಮಾತನಾಡಿ ಚಂದ್ರಣ್ಣನವರ ಪ್ರಯತ್ನವನ್ನು ಶ್ಲಾಘಿಸಿದರು.

ಇಂತಹ ಪುಸ್ತಕವನ್ನು ಹೊರತಂದು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿ ಕೊಟ್ಟಿರು ಅತ್ತಿಗುಪ್ಪೆ ಸಾಹಿತ್ಯ ಬಳಗದ ಅಧ್ಯಕ್ಷರಾದ ಮಾರೇನಹಳ್ಳಿ ಲೋಕೇಶ್‌ ರವರ ಕಾರ್ಯವನ್ನು ಶ್ಲಾಘಿಸಿದರು. ಈ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಇಂಗ್ಲೀಷ್ ಶಿಕ್ಷಕರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ