Saturday, September 21, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ‘ನಮ್ಮ ನಡೆ ಮಾನವೀಯತೆಯ ಕಡೆ’ ವಾಕಥಾನ್ ಜಾಥಾ

ವಿಶ್ವ ಶಾಂತಿ ದಿನಾಚರಣೆ ಅಂಗವಾಗಿ ಭಾರತೀಯ ರೆಡ್ ಕ್ರಾಸ್ ಮಂಡ್ಯ ಜಿಲ್ಲಾ ಶಾಖೆ ಹಾಗೂ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಅಂತರರಾಷ್ಟೀಯ ಶಾಂತಿ ದಿನದ ಅಂಗವಾಗಿ ನಮ್ಮ ನೆಡೆ ಮಾನವೀಯತೆಯ ಕಡೆ ವಾಕಥಾನ್ ಜಾಥಾ ಕಾರ್ಯಕ್ರಮಕ್ಕೆ ಎಡಿಸಿ ಡಾ.ಹೆಚ್.ಎಲ್.ನಾಗರಾಜು ಚಾಲನೆ ನೀಡಿದರು.

ಮಂಡ್ಯ ನಗರದ ಜಿಲ್ಲಾಧಿಕಾರಿಗಳ ಕಚೇರಿಯಿಂದ ಹೊರಟು ನಗರದ ಸರ್.ಎಂ.ವಿ.ಕ್ರೀಡಾಂಗಣದವರೆಗೆ
ನಗರದ‌ ವಿವಿಧ ಕಾಲೇಜುಗಳ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶನಿವಾರ ವಾಕಥಾನ್ ನಡೆಸಿದರು. ಜಾಥಾದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿ ರಕ್ತದಾನ ಜಾಗೃತಿ ಬಗ್ಗೆ ಘೋಷಣೆ ಕೂಗಿದರು.

ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಮಾತನಾಡಿ ಜನರಲ್ಲಿ ಜಾಗೃತಿ ಮೂಡಿಸಲು ಅದರಲ್ಲೂ ವಿಶೇಷವಾಗಿ ಯುವ ಮನಸುಗಳನ್ನು ಸರಿದಾರಿಗೆ ತರಲು ಜನ ಜಾಗೃತಿ ಮೂಡಿಸಲು ವಾಕ್ ಥಾನ್ ಅನ್ನು ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.

ಎಲ್ಲರೂ ಮಾನವೀಯತೆಯಿಂದ ಯೋಚನೆ ಮಾಡಬೇಕು ಮಾನವೀಯತೆಯ ಕಡೆ ನಮ್ಮ ನಡೆ ಇಟ್ಟುಕೊಂಡು ಜಿಲ್ಲೆಯಲ್ಲಿ ಶಾಂತಿ,ನೆಮ್ಮದಿ, ಸಮಾಧಾನದಿಂದ ಬದುಕುವ ಧ್ಯೇಯ ಇಟ್ಟುಕೊಳ್ಳಿ, ಯಾವುದೇ ಅಹಿತಕರ ಘಟನೆಗಳು ನಡೆಯಲಿಕ್ಕೆ ವಿಶೇಷವಾಗಿ ಯುವಕರು ಸಪೋರ್ಟ್ ಮಾಡಬಾರದು ಎಂದು ಹೇಳಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಡ್ಯ ಶಾಖೆಯ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ,
ವಿಶ್ವ ಶಾಂತಿಯ ದಿನದ ಅಂಗವಾಗಿ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ವಾಕ್ ಥಾನ್ ಕಾರ್ಯಕ್ರಮ ಮಾಡಲಾಗುತ್ತಿದೆ.ವಾಕ್ ಥಾನ್ ಎನ್ನುವುದು ಯಾವುದೇ ದಿನಾಚರಣೆ ಮಾಡುವುದರ ಬಗ್ಗೆ ಯೋಚನೆ ಮಾಡುತ್ತೇವೆ.

ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆ ನಿರ್ದೇಶಕ ಕೆ.ಟಿ.ಹನುಮಂತು, ಷಡಕ್ಷರಿ, ಜಂಟಿ ಕಾರ್ಯದರ್ಶಿ ರಂಗಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!