Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾಟಾಚಾರಕ್ಕೆ ವಿಶ್ವಕರ್ಮ ಜಯಂತಿ ಆಚರಣೆ- ಮುಖಂಡರ ಆಕ್ರೋಶ

ಸರ್ಕಾರ ವಿಶ್ವಕರ್ಮ ಜಯಂತಿಯನ್ನು ಕೇವಲ ಕಾಟಾಚಾರಕ್ಕೆ ಮಾಡುತ್ತಿರುವುದು ವಿಶ್ವಕರ್ಮ ಸಮಾಜದವರಿಗೆ ಮಾಡುತ್ತಿರುವ ಅವಮಾನವಾಗಿದೆ ಎಂದು ತಾಲೂಕು ವಿಶ್ವಕರ್ಮ ಸಮಾಜದ ಮಾಜಿ ಉಪಾಧ್ಯಕ್ಷ ಈರಾಚಾರಿ, ಎಸ್ ಎಸ್ ಕೆ ವಿಶ್ವಕರ್ಮ ಸಂಘದ ಅಧ್ಯಕ್ಷ ಕೃಷ್ಣಾಚಾರಿ ಹಾಗೂ ಕಾಳಿಕಾಂಬ ದೇವಸ್ಥಾನದ ಅಧ್ಯಕ್ಷಸಂತೋಷ್ ಆಕ್ರೋಶವನ್ನು ವ್ಯಕ್ತಪಡಿಸಿದರು

ನಾಗಮಂಗಲ ಪಟ್ಟಣದ ಮಿನಿ ವಿಧಾನಸೌಧದ ನ್ಯಾಯಾಲಯದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತಾಲೂಕು ಆಡಳಿತ ವತಿಯಿಂದ ಆಯೋಜಿಸಲಾಗಿದ್ದ ವಿಶ್ವಕರ್ಮ ಜಯಂತಿಯಲ್ಲಿ ಯಾವುದೇ ಸರ್ಕಾರಿ ಅಧಿಕಾರಿಗಳಿಲ್ಲದೆ ಕೇವಲ ಕಾಟಾಚಾರಕ್ಕೆ ಜಯಂತಿಯನ್ನು ನಡೆಸಲಾಗುತ್ತಿದೆ, ಇಂದು ದೇಶಾದ್ಯಂತ ವಿಶ್ವಕರ್ಮ ಜಯಂತಿಯನ್ನು ಪಿಎಂ ಕಚೇರಿ ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ವ್ಯವಸ್ಥಿತವಾಗಿ ಆಚರಿಸುತ್ತಿರುವಾಗ ಇಲ್ಲಿ ಕೇವಲ ಒಂದು ಫ್ಲೆಕ್ಸ್ ನೇತು ಹಾಕಿ ವಿಶ್ವಕರ್ಮ ಫೋಟೋಗೆ ಒಂದು ಹಾರ ಹಾಕಿರುವುದನ್ನು ಬಿಟ್ಟರೆ ಬೇರಾವುದೇ ವ್ಯವಸ್ಥೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನಿಂದ ನೂರಾರು ಸಂಖ್ಯೆಯಲ್ಲಿ ಇರುವಾಗ ವಿಶ್ವಕರ್ಮ ಬಂಧುಗಳನ್ನು ಕೇವಲ ಐವತ್ತರಿಂದ ಅರವತ್ತು ಜನ ಕುಳಿತುಕೊಳ್ಳುವ ಸಭಾಂಗಣದಲ್ಲಿ ಆಯೋಜನೆ ಮಾಡಿರುವುದು ಬೇಸರ ತಂದಿದೆ, ಅಲ್ಲದೆ ಕೇವಲ ಇಬ್ಬರು ಅಧಿಕಾರಿಗಳನ್ನು ಬಿಟ್ಟರೆ ಸಂಬಂಧಪಟ್ಟ ಯಾವ ಅಧಿಕಾರಿಗಳು ಇರಲಿಲ್ಲ, ಜಯಂತಿಗಳನ್ನು ಮಾಡುವ ಉದ್ದೇಶವನ್ನು ಸರ್ಕಾರಿ ಅಧಿಕಾರಿಗಳಿಗೆ ತರಬೇತಿ ನೀಡುವ ಜೊತೆ ಎಲ್ಲಾ ಜಯಂತಿಗಳಿಗೆ ಕಡ್ಡಾಯವಾಗಿ ಹಾಜರಿರಬೇಕೆಂದು ಸರ್ಕಾರ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಮಲ್ಲಿಕಾರ್ಜುನ, ಕೃಷಿ ಇಲಾಖೆಯ ಶಿವಾನಂದ, ಭಾಗ್ಯಮ್ಮ,ರೆವಿನ್ಯೂ ಇನ್ಸ್ಪೆಕ್ಟರ್ ಗಣೇಶ್ ಹಾಜರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!