ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ನಾಗಮಂಗಲ ತಾಲ್ಲೂಕಿನ ಅಣೆಚೆನ್ನಾಪುರ ಗ್ರಾಮದ ಹೊಸಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ.
ಕಳೆದ 3 ದಶಕದಿಂದ ತುಂಬದ ಕೆರೆ ವರ್ಷದ ಮೊದಲ ಮಳೆಯಲ್ಲೇ ಭರ್ತಿಯಾಗಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.
ಅಣೆಚೆನ್ನಾಪುರ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರು ಕೆರೆಯಲ್ಲಿ ನೀರು ಕೋಡಿ ಬಿದ್ದು ಹರಿಯುತ್ತಿರುವುದನ್ನು ಕಂಡು ನೀರಿಗಿಳಿದು ಸಂಭ್ರಮಿಸಿದರು.
ಕೆರೆ ಕೋಡಿ ಬಿದ್ದ ಹಿನ್ನಲೆ ಗ್ರಾಮಸ್ಥರು ಬಾಗಿನ ಅರ್ಪಣೆ ಮಾಡಿದ್ದಾರೆ.
ಹಲವರು ಕೆರೆಗೆ ಬಾಗಿನ ಸಮರ್ಪಿಸಿ ಪೂಜೆ ಸಲ್ಲಿಸಿದರು.