Thursday, September 19, 2024

ಪ್ರಾಯೋಗಿಕ ಆವೃತ್ತಿ

ನಾಗಮಂಗಲ| ಅಂತಾರಾಷ್ಟ್ರೀಯ ಓಝೋನ್ ದಿನ ಆಚರಣೆ

ನಾಗಮಂಗಲ ತಾಲೂಕಿನ ಹೊಣೆಕೆರೆ ಹೋಬಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗ ಚೀಣ್ಯ ಶಾಲೆಯಲ್ಲಿ ಅಂತಾರಾಷ್ಟ್ರೀಯ ಓಝೋನ್ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಶಾಲೆಯ ವಿಜ್ಞಾನ ಶಿಕ್ಷಕರಾದ  ತೇಜಸ್ವಿನಿ ಅವರು ಅಂತಾರಾಷ್ಟ್ರೀಯ ಓಝೋನ್ ದಿನಾಚರಣೆಯ ಮಹತ್ವವನ್ನು ಕುರಿತು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿಮ ಓಝೋನ್ ಪದರದ ನಾಶಕ್ಕೆ ಕಾರಣಗಳು ಹಾಗೂ ಅದನ್ನು ಹೇಗೆ ರಕ್ಷಿಸಬೇಕು ಎಂಬುದನ್ನು ವಿದ್ಯಾರ್ಥಿ ಗಳಿಗೆ ತಿಳಿ ಹೇಳಿದರು.

ಓಜೋನ್ ಪದರದ ಹಾನಿಗೆ ಕಾರಣವಾದಂತಹ ಕ್ಲೋರೋ ಫ್ಲೋರೋ ಕಾರ್ಬನ್ ಅನಿಲವನ್ನು ಹೇಗೆ ತಡೆಗಟ್ಟಬೇಕು ಎಂದು ವಿವರಿಸಿದರು. ಅಧ್ಯಕ್ಷತೆಯನ್ನು ಉಪ ಪ್ರಾಂಶುಪಾಲರಾದ ಉಮಾಶಂಕರ್ ರವರು ಓಝೋನ್ ರಕ್ಷಣೆ ಕುರಿತು ಪ್ರಾಸ್ತಾವಿಕ ನುಡಿ ನುಡಿದರು.

ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಬಸವೇಗೌಡ, ಗಾಯತ್ರಿ, ಬಸವರಾಜು, ಶಶಿಧರ್, ಪ್ರಕಾಶ್, ಶೃತಿ, ರಿಯಾನ್, ರುದ್ರೇಶ್, ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು
ಭಾಗವಹಿಸುವುದರ ಮೂಲಕ ಕಾರ್ಯ ಕ್ರಮವನ್ನು ಯಶಸ್ವಿಗೊಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!