Thursday, September 19, 2024

ಪ್ರಾಯೋಗಿಕ ಆವೃತ್ತಿ

ಪಂಚರತ್ನ ಯೋಜನೆಗಳಿಂದ ಅಭಿವೃದ್ಧಿ ಪರ್ವ ಆರಂಭ : ಎಚ್.ಡಿ.ಕುಮಾರಸ್ವಾಮಿ

ಮಂಡ್ಯ ಜನತೆ ಈ ಬಾರಿಯೂ ಏಳು ವಿಧಾಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರ ಆಯ್ಕೆ ಮಾಡಿ ಆಶೀರ್ವದಿಸಿದರೆ, ಪಂಚರತ್ನ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅಭಿವೃದ್ಧಿ ಪರ್ವ ಆರಂಭಿಸುತ್ತೇನೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಮಳವಳ್ಳಿ ತಾಲ್ಲೂಕಿನ ಹಲಗೂರು ಗ್ರಾಮಕ್ಕೆ ಪಂಚರತ್ನ ರಥಯಾತ್ರೆ ಆಗಮಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಕಳೆದ ಚುನಾವಣೆಯಲ್ಲಿ ಜಿಲ್ಲೆಯ ಜನರು ಜೆಡಿಎಸ್ ಪಕ್ಷದ ಪರವಾಗಿ ಮೊದಿನಿಂದಲೂ ಇದ್ದಾರೆ.ಈ ಬಾರಿ ಕೂಡ ಏಳು ಕ್ಷೇತ್ರಗಳಲ್ಲಿ ಜನರು ನಮ್ಮ ಪಕ್ಷವನ್ನು ಗೆಲ್ಲಿಸುತ್ತಾರೆಂಬ ವಿಶ್ವಾಸವಿದೆ. ಮಂಡ್ಯ ಜಿಲ್ಲೆಯ ಜನ ಮಣ್ಣಿನ ಮಕ್ಕಳ ಸರ್ಕಾರ ತರಲು ನಿರ್ಧಾರ ಮಾಡಿದ್ದಾರೆ ಎಂದರು.

ಅಭ್ಯರ್ಥಿಗಳ ಬದಲಾವಣೆಯಿಲ್ಲ
ಯಾವುದೇ ಅಭ್ಯರ್ಥಿಗಳು ಬದಲಾವಣೆ ಆಗಲ್ಲ. ಏಳೆಂಟು ಕ್ಷೇತ್ರದಲ್ಲಿ ಮಾತ್ರ ಬದಲಾವಣೆಯಾಗುತ್ತೆ ಅಷ್ಟೇ. ಗುರುಮಿಠ್ಕಲ್ ಕ್ಷೇತ್ರದ ನಾಗನಗೌಡ ಕಂದ್ಕೂರ್ ನನಗೆ ಬೇಡಾ ನನ್ನ ಮಗನಿಗೆ ಕೊಡಿ ಅಂತಾ ಹೇಳಿದ್ದಾರೆ. ಅಂತಹ ಕ್ಷೇತ್ರಗಳಲ್ಲಿ ಮಾತ್ರ ಬದಲಾವಣೆ ಆಗುತ್ತದೆ ಅಷ್ಟೇ ಎಂದರು.

ಚುಂಚಶ್ರೀ ಜೊತೆ ಮಾತಾಡಿದ್ದೇನೆ
ಒಕ್ಕಲಿಗ ಸಮುದಾಯದ ಸಭೆಗೆ ಜೆಡಿಎಸ್‌ ಗೈರು ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನಾನು ಚುಂಚಶ್ರೀಗಳೊಂದಿಗೆ ದೂರವಾಣಿ ಮುಖಾಂತರ ಮೀಸಲಾತಿ ಬಗ್ಗೆ ಮಾತನಾಡಿದ್ದೇನೆ.
ಕಾಂಗ್ರೆಸ್‌ನವರಿಗೆ ಅಭಿವೃದ್ಧಿ ವಿಚಾರ ಮಾತನಾಡಲು ಆಗಲ್ಲ.ಅವರು ಈ ರೀತಿ ಅಪಪ್ರಚಾರ ಮಾಡುತ್ತಾರಷ್ಟೇ. ಮುಂದೆ ಸರ್ಕಾರ ಕೊಟ್ಟರೆ ಏನು ಮಾಡುತ್ತೇವೆ ಎಂದು ಅವರಿಗೆ ತೋರಿಸುತ್ತೇನೆ ಎಂದರು.

ಜಾತಿ-ಧರ್ಮದ ಕಾರ್ಡ್
ಕಾಂಗ್ರೆಸ್ ಜಾತಿಯ ಕಾರ್ಡ್ ಪ್ಲೇ ಮಾಡುತ್ತಿದ್ದರೆ, ಬಿಜೆಪಿ ಧರ್ಮದ ಕಾರ್ಡ್ ಪ್ಲೇ ಮಾಡ್ತಿದೆ.ಆದರೆ ಜೆಡಿಎಸ್ ಪಕ್ಷಕ್ಕೆ ಈ ರಾಜ್ಯದ ಎಲ್ಲಾ ಸಮುದಾಯದ ಅಭಿವೃದ್ಧಿ ಆಗಬೇಕೆಂದರು.

ಪಾರದರ್ಶಕತೆ ಇದ್ರೆ ಏನೂ ಆಗಲ್ಲ
ಡಿಕೆಶಿ ಮೇಲೆ ಸಿಬಿಐ ದಾಳಿ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಈ ದೇಶದಲ್ಲಿ ಇರುವ ತನಿಖೆ ಸಂಸ್ಥೆಗಳಿಗೆ ಅರ್ಜಿ ಹೋದಾಗ ಅವರು ವಿಚಾರಣೆ ಮಾಡ್ತಾರೆ. ಡಿಕೆಶಿ ಅವರು ಪಾರದರ್ಶಕರಾಗಿದ್ದರೆ ಸಮುದಾಯ ಅವರ ಪರ ನಿಲ್ಲುವ ಅವಶ್ಯಕತೆ ಇಲ್ಲ. ಅವರ ಉದ್ಯಮ, ವ್ಯವಹಾರದ ಎಲ್ಲಾ ದಾಖಲಾತಿಗಳನ್ನು ಅವರಿಗೆ ನೀಡಿದ್ರೆ ಸಾಕು.ಅದಕ್ಕಾಗಿ ಸಮುದಾಯವನ್ನು ಎಳೆಯುವುದು ತಪ್ಪು. ಅದರಿಂದ ಸಮೂದಾಯಕ್ಕೆ ಆಗುವ ಪ್ರಯೋಜನವೇನು? ವ್ಯವಹಾರದಲ್ಲಿ ಪಾರದರ್ಶಕತೆ ಇದ್ದು, ಯಾವ ಸಮಸ್ಯೆ ಇಲ್ಲದ್ದಿದ್ದರೆ ಏನು ಆಗಲ್ಲ ಎಂದರು.

nudikarnataka.com

ಸಾವರ್ಕರ್ ಫೋಟೋಗೆ ಮಾನ್ಯತೆ ಕೊಡಲ್ಲ
ಬಿಜೆಪಿ ಅವರು ಸಾವರ್ಕರ್ ಪೋಟೋ ವಿಚಾರವನ್ನು ಇಟ್ಟುಕೊಂಡು ಬಂದಿದ್ದಾರೆ. ನಾನು ಸಾವರ್ಕರ್ ಫೋಟೋಗೆ ಪ್ರಾಮುಖ್ಯತೆ ಕೊಡಲ್ಲ.ದೇಶದ ಪ್ರಜೆಗಳ ಬದುಕನ್ನು ಸರಿಪಡಿಸುವ ಚಿಂತನೆ ನನ್ನದು ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ಸಿ.ಎಸ್.ಪುಟ್ಟರಾಜು,ಕೆ.ಅನ್ನದಾನಿ,ಮುಖಂಡರಾದ ಕಂಸಾಗರ ರವಿ,ವಿಶ್ವನಾಥ್ ಮತ್ತಿತರರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!