Thursday, September 19, 2024

ಪ್ರಾಯೋಗಿಕ ಆವೃತ್ತಿ

ಮನುಷ್ಯನ ಕ್ರಿಯಾಶೀಲತೆಗೆ ರಂಗಭೂಮಿ ಚಟುವಟಿಕೆ ಅತ್ಯಗತ್ಯ- ಪರಮೇಶ್ ಗೌಡ

ಮನುಷ್ಯ ಕ್ರಿಯಾಶೀಲರಾಗಿ ಇರಬೇಕಾದರೆ ರಂಗಭೂಮಿ ಪ್ರಮುಖ ಪಾತ್ರವಹಿಸುತ್ತದೆ, ಇದು ಮನರಂಜನೆಯ ಜೊತೆಗೆ ಉತ್ತಮ ಸಂದೇಶವನ್ನು ಸಮಾಜಕ್ಕೆ ನೀಡುತ್ತದೆ ಎಂದು ಸಮಾಜ ಸೇವಕ ಕೆ.ಸಿ.ಪರಮೇಶ್ ಗೌಡ ಹೇಳಿದರು.

ಪಾಂಡವಪುರ ತಾಲ್ಲೂಕಿನ ಜಕ್ಕನಹಳ್ಳಿ ವೃತ್ತದಲ್ಲಿ ಶ್ರೀದೇವಿರಮ್ಮ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ನಡೆದ “ರತ್ನ ಮಾಂಗಲ್ಯ”  ಸಾಮಾಜಿಕ ನಾಟಕ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ನಡೆಯುವ ಘಟನೆಗಳೇ ನಾಟಕ ರೂಪದಲ್ಲಿ ಸಂದೇಶ ನೀಡುತ್ತವೆ, ಇಂದಿನ ದಿನಗಳಲ್ಲಿ ರಂಗಭೂಮಿ ಕಲೆ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ, ರಂಗಭೂಮಿ ಕಲೆಯನ್ನು ಉಳಿಸುವ ಸಲುವಾಗಿ ಸರ್ಕಾರ ಹಲವು ಯೋಜನೆಗಳನ್ನು ತಂದಿದೆ. ಆದರೂ ಇತ್ತೀಚಿನ ದಿನಗಳಲ್ಲಿ ಯುವ ಜನತೆ ಆಸಕ್ತಿ ತೋರುತ್ತಿಲ್ಲ, ಟಿವಿ, ಸೋಶಿಯಲ್ ಮೀಡಿಯಾದಲ್ಲಿ ತಲ್ಲೀನರಾಗಿ ಕಾಲಹರಣ ಮಾಡುತ್ತಿರುವುದು ವಿಪರ್ಯಾಸವಾಗಿದೆ ಎಂದರು.

ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಲೋಕೇಶ್ ಮಾತನಾಡಿ, ನಾಟಕದಲ್ಲಿ ಬರುವ ಒಳ್ಳೆಯ ಸಂದೇಶಗಳನ್ನು ಜೀವನದಲ್ಲಿ ಮೈಗುಡಿಸಿಕೊಳ್ಳಬೇಕು ಎಂದರು.

ಪರಿವರ್ತನ ಟ್ರಸ್ಟ್ ಅಧ್ಯಕ್ಷ ಡಾ. ಎನ್ ಎಸ್ ಇಂದ್ರೇಶ್ ಮಾತನಾಡಿ, ದೇವನಹಳ್ಳಿ ಗ್ರಾಮಸ್ಥರು ತಮ್ಮ ಊರಿನಲ್ಲಿ ಬಿಟ್ಟು ಜಕ್ಕನಹಳ್ಳಿ ವೃತ್ತದಲ್ಲಿ ನಾಟಕವನ್ನು ಆಯೋಜಿಸಿ ಕಲಾಭಿಮಾನಿಗಳಿಗೆ ಮುಟ್ಟಿಸುವ ಕೆಲಸ ಮಾಡಿದ್ದಾರೆ. ಇಂದಿನ ಕಾಲಘಟ್ಟದಲ್ಲಿ ನಾಟಕಗಳನ್ನು ಆಯೋಜಿಸಿ ಅಭಿನಯಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ, ಇಂತಹ ಸಮಯದಲ್ಲಿ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಶ್ರೀದೇವಿರಮ್ಮ ಕೃಪಾಪೋಷಿತ ನಾಟಕ ಮಂಡಳಿಯವರು ಮಾಡುತ್ತಿರುವುದು ವಿಶೇಷವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ರಂಗಭೂಮಿಯಲ್ಲಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿ ಜನಪ್ರಿಯ ನಿಧನರಾದ ಗಾಯಕ ರಾಜೇಂದ್ರ ಪ್ರಸಾದ್ ಅವರಿಗೆ ಗಣ್ಯರೆಲ್ಲರೂ ಸೇರಿ ಕ್ಯಾಂಡಲ್ ಹಚ್ಚಿ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಿಸಿದರು

ಚಂದ್ರು ಡಿಕೆ, ಡಿಎಸ್ ಪುಟ್ಟೇಗೌಡ , ಶೇಖರ್, ಕಾರ್ತಿಕ್, ಅಭಿಷೇಕ್, ಶಿವು, ದರ್ಶನ್, ವೆಂಕಟೇಶ್, ಮನೋಜ್, ವಾಸು, ಅರುಣ್, ಕೆಂಚೇಗೌಡ, ಹರ್ಷ, ರೇಣು, ಚರಣ್, ಪವನ್ ಅವರು ಉತ್ತಮವಾಗಿ ಅಭಿನಯಿಸಿದರು, ಕೆವಿ ಬಾಲಕೃಷ್ಣ ಅವರ ನಿರ್ದೇಶನದಲ್ಲಿ ನಾಟಕ ಉತ್ತಮವಾಗಿ ಮೂಡಿಬಂದಿತು.

ಕೃಷ್ಣೆಗೌಡ, ಸುರೇಂದ್ರ, ತಮ್ಮಣ್ಣ, ನಾಟಕ ಯಶಸ್ವಿಯಾಗಿ ನಡೆಯಲು ಕೆಲಸ ನಿರ್ವಹಿಸಿದರು. ನಾಗೇಶ್, ನರಸಿಂಹ, ಚೇತನ್ ಅವರು ಸಹಕಾರ ನೀಡಿದರು. ಕಾರ್ಯಕ್ರಮವನ್ನು ಶಿಕ್ಷಕರಾದ ಡಿ.ಸಿ.ಶಿವಣ್ಣ, ಎಸ್. ವೆಂಕಟೇಶ್ ಉತ್ತಮವಾಗಿ ನಡೆಸಿಕೊಟ್ಟರು

ಕಾರ್ಯಕ್ರಮದಲ್ಲಿ ಜಕ್ಕನಹಳ್ಳಿ ಗ್ರಾ.ಪಂ. ಅಧ್ಯಕ್ಷರಾದ ಮಂಜುಳಾ, ರೈತಸಂಘದ ಮುಖಂಡರಾದ ವಿಜಯಕುಮಾರ್, ಬಿಜೆಪಿ ಮುಖಂಡರಾದ ಸೋಮಶೇಖರ್, ಪ್ರಜಾವಾರ್ತೆ ಪತ್ರಿಕೆಯ ಸಂಪಾದಕ ನವೀನ್ ಕುಮಾರ್, ಕೆಇಬಿ ಚೆಲುವರಾಜ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!