Thursday, September 19, 2024

ಪ್ರಾಯೋಗಿಕ ಆವೃತ್ತಿ

ಕುಂಭಮೇಳದಲ್ಲಿ ಭಾಗವಹಿಸುವುದು ಪುಣ್ಯದ ಕೆಲಸ: ಸಿ.ಪಿ ಉಮೇಶ್

ಕೆ.ಆರ್.ಪೇಟೆ ತಾಲೂಕಿನ ಸಂಗಾಪುರ ಮತ್ತು ಅಂಬಿಗರಹಳ್ಳಿ ತ್ರಿವೇಣಿ ಸಂಗಮದಲ್ಲಿ ನಡೆಯುವ ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳುವುದು ಪುಣ್ಯದ ಕೆಲಸ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಪಿ.ಉಮೇಶ್ ತಿಳಿಸಿದರು.

ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಇಂದು ಮಹದೇಶ್ವರ ಜ್ಯೋತಿಗೆ ಪೂಜೆ ಸಲ್ಲಿಸಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದೇಶ್ವರ ಬೆಟ್ಟದಿಂದ ಆಗಮಿಸಿರುವ ಮಹದೇಶ್ವರ ಜ್ಯೋತಿಯನ್ನು ಬಹಳ ವಿಜೃಂಭಣೆಯಿಂದ, ಭಕ್ತಿ ಪೂರ್ವಕವಾಗಿ ಕೆರಗೋಡಿನ ಜನರು ಬರಮಾಡಿಕೊಂಡಿದ್ದಾರೆ.

ಇಂದು ಮಹದೇಶ್ವರ ಜ್ಯೋತಿ ಯಾತ್ರೆಯು ಮಂಡ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಚರಿಸಿ ಕೆ.ಆರ್. ಪೇಟೆಯ ಅಂಬಿಗರ ಹಳ್ಳಿ ಬಳಿ ಇರುವ ತ್ರಿವೇಣಿ ಸಂಗಮದಲ್ಲಿ ಅಕ್ಟೋಬರ್ 13 ರಿಂದ ಆರಂಭವಾಗುವ ಮಹಾ ಕುಂಭಮೇಳದ ಬಗ್ಗೆ ಜನರಿಗೆ ತಿಳಿಸಲಿದೆ ಎಂದರು.

ಕುಂಭಮೇಳದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಆದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ, ಧರ್ಮಸ್ಥಳದ ವೀರೇಂದ್ರ ಹೆಗಡೆ ಸೇರಿದಂತೆ ಹಲವು ಸ್ವಾಮೀಜಿಗಳು ಭಾಗವಹಿಸಲಿದ್ದಾರೆ. ಜಿಲ್ಲೆಯ ಜನರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕುಂಭಮೇಳದಲ್ಲಿ ಭಾಗವಹಿಸಬೇಕೆಂದರು.

ಉತ್ತರ ಭಾರತದಲ್ಲಿ ಕುಂಭಮೇಳ ಬಹಳ ಪ್ರಸಿದ್ಧವಾದ ಯಾತ್ರಾಸ್ಥಳ ಆಗಿದೆ‌. ಅದರಂತೆ ಕೆ.ಆರ್. ಪೇಟೆ ಅಂಬಿಗರ ಹಳ್ಳಿಯ ತ್ರಿವೇಣಿ ಸಂಗಮ ಉತ್ತರ ಪ್ರದೇಶದಂತೆ ಪ್ರಸಿದ್ಧವಾಗಲಿದೆ ಎಂದರು.

ಸಕಲ ವ್ಯವಸ್ಥೆ
ಕುಂಭಮೇಳದಲ್ಲಿ ಸುಮಾರು ಐದರಿಂದ ಆರು ಲಕ್ಷ ಜನ ಭಾಗವಹಿಸಲಿದ್ದಾರೆ. ಕುಂಭಮೇಳಕ್ಕೆ ಜನಸಾಗರವೇ ಹರಿದು ಬರಲಿದ್ದು, ಬರುವ ಭಕ್ತಾದಿಗಳೆಲ್ಲರಿಗೂ ಸಾರಿಗೆ ಮತ್ತು ಊಟದ ವ್ಯವಸ್ಥೆಯನ್ನು ಸರ್ಕಾರ ಸಮರ್ಪಕವಾಗಿ ವ್ಯವಸ್ಥೆ ಮಾಡಿದೆ ಎಂದರು.

ಮಂಡ್ಯ ತಹಶೀಲ್ದಾರ್ ಮಹಮದ್ ಕುಂಇ ಮಾತನಾಡಿ, ಮಹಾ ಕುಂಭಮೇಳದಲ್ಲಿ ಪುಣ್ಯ ಸ್ಥಾನದ ಪ್ರಯುಕ್ತ ಮಂಡ್ಯ ತಾಲೂಕಿನ ಬಹುತೇಕ ಭಾಗದಲ್ಲಿ ಮಹದೇಶ್ವರ ಜ್ಯೋತಿ ಸಂಚರಿಸಲಿದೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಕ್ರೀಡಾ ಮತ್ತು ರೇಷ್ಮೆ ಸಚಿವ ಸಂಪೂರ್ಣವಾಗಿ ಯಾತ್ರೆ ಯಶಸ್ವಿಗೊಳಿಸಲು ನಿಂತಿದ್ದಾರೆ. ಜ್ಯೋತಿ ಯಾತ್ರೆಗೆ ಜನರು ಉತ್ತಮವಾಗಿ ಸಹನೀಡುತ್ತಿದ್ದು, ಎಲ್ಲಾ ಅಧಿಕಾರಿಗಳ ಸಹಕಾರ ಮನೋಭಾವದಲ್ಲಿ ಎಲ್ಲಾ ಕೆಲಸಗಳು ಪೂರ್ಣಗೊಂಡಿವೆ ಎಂದರು.

ಪುಷ್ಪಾರ್ಚನೆ
ಕೆರಗೋಡಿನ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ಮಹದೇಶ್ವರ ಜ್ಯೋತಿ ಸಂಚಾರಕ್ಕೆ ಚಾಲನೆ ನೀಡಲಾಯಿತು. ಜನರು ರಸ್ತೆಗೆ ಬಂದು‌ ಮಹದೇಶ್ವರ ಸ್ವಾಮಿಗೆ ಹಣ್ಣ,ಕಾಯಿ ಸಲ್ಲಿಸಿ ಪೂಜೆ ಮಾಡಿದರು.ನಾದಸ್ವರ,ಡೊಳ್ಳು ಕುಣಿತ,ಬ್ಯಾಂಡ್ ಮೆರವಣಿಗೆಯಲ್ಲಿದ್ದವು. ಭಕ್ತಾದಿಗಳು ಪುಷ್ಪಾರ್ಚನೆ ಮಾಡಿದರು. ಗ್ರಾಮದ ವಿವಿಧ ಭಾಗಗಳಲ್ಲಿ ರಥಯಾತ್ರೆ ಸಂಚರಿಸಿತು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಚಂದಗಾಲು ಶಿವಣ್ಣ, ಅಶೋಕ್ ಜಯರಾಂ,ಮಹೇಶ್,ವಸಂತ್ ಕುಮಾರ್,ಬಿಜೆಪಿ ನಗರ ಅಧ್ಯಕ್ಷ ವಿವೇಕ್,ವಿನೋಬ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!