ಮಂಡ್ಯ ಜಿಲ್ಲೆಯ ಹನಕೆರೆ ಗ್ರಾಮದ ಹೆಣ್ಣುಮಗಳು ಕಷ್ಟಪಟ್ಟು ಕಿರುತೆರೆಯಲ್ಲಿ ಸಾಧನೆ ಮಾಡಿ ಹೆಸರು ಮಾಡುವಷ್ಟರಲ್ಲಿ ವಿಧಿಯ ಕ್ರೂರತೆಗೆ ರಸ್ತೆ ಅಪಘಾತದಲ್ಲಿ ಮರಣ ಹೊಂದುತ್ತಾಳೆ.ಅವಳ ಕುಟುಂಬ ಆ ಶಾಕ್ ನಿಂದ ಹೊರ ಬರುವ ಮುಂಚಿತವಾಗಿಯೇ ಪವುತ್ರಳ ಸ್ನೇಹಿತ ಚಂದ್ರಕಾಂತ್ ಕೂಡ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಾನೆ.
ಅಪಘಾತಕ್ಕೊಳಗಾದ ಕಾರಿನಲ್ಲಿ ಪವಿತ್ರ ಜಯರಾಮ್ ಮತ್ತು ಚಂದ್ರಕಾಂತ್ ಇಬ್ಬರೂ ಇದ್ದರು.ಆದರೆ ಪವಿತ್ರ ಜಯರಾಂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗದೆ ಇದ್ದುದ್ದರಿಂದಲೇ ಆತ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗುತ್ತಿದೆ.
ಆದರೆ ತೆಲುಗಿನ ಮೀಡಿಯಾಗಳು ಪವಿತ್ರ ಮತ್ತು ಚಂದ್ರಕಾಂತ್ ನಡುವೆ ಸಂಬಂಧವಿತ್ತು ಎನ್ನುವ ರೀತಿಯ ವರದಿಗಳನ್ನು ಮಾಡುತ್ತಿವೆ. ಇಬ್ಬರ ತೀರಾ ಖಾಸಗಿ ಬದುಕಿನ ವಿಚಾರಗಳನ್ನು ಇಬ್ಬರೂ ಸತ್ತ ನಂತರ ಸಹ ಸಾರ್ವಜನಿಕವಾಗಿ ಚರ್ಚೆ ಮಾಡುತ್ತಿವೆ.
ಹಾಗಾದರೆ ಚಿತ್ರರಂಗ, ಧಾರಾವಾಹಿಗಳಲ್ಲಿ ಇರುವ ಪ್ರಸಿದ್ಧ ವ್ಯಕ್ತಿಗಳ ಎಲ್ಲಾ ಖಾಸಗಿ ವಿಚಾರಗಳನ್ನು ಇದೇ ರೀತಿ ಮೀಡಿಯಾಗಳು ಡಿಬೇಟ್ ಗೆ ಇಡುತ್ತವೆಯೇ? ಹಾಗೆ ಇಟ್ಟು ಅರಗಿಸಿ ಕೊಳ್ಳುತ್ತವೆಯೇ?
ಗ್ರಾಮೀಣ ಪ್ರದೇಶದ ತೀರಾ ಸಾಮಾನ್ಯ ಕುಟುಂಬಗಳಿಂದ ಬಂದು ಚಿತ್ರರಂಗ,ಧಾರಾವಾಹಿಗಳಲ್ಲಿ ನಟಿಸಿ ಅಲ್ಪ ಸ್ವಲ್ಪ ಹೆಸರು ಗಳಿಸಿದ ಪ್ರತಿಭೆಗಳ ಗೌರವವನ್ನು ಈ ರೀತಿ ಮೀಡಿಯಾಗಳು ದಿನ ನಿತ್ಯ ಅನಗತ್ಯವಾಗಿ ಹಾಳು ಮಾಡುವುದು ಎಷ್ಟು ಸರಿ?ಇದರಿಂದ ಅವರ ಕುಟುಂಬಗಳು,ಅವರ ಮಕ್ಕಳು ಸಮಾಜವನ್ನು ಯಾವ ರೀತಿ ಎದುರಿಸುತ್ತಾರೆ ಎನ್ನುವ ಸಾಮಾನ್ಯ ಜ್ಞಾನ ಈ ಮೀಡಿಯಾ ಮಂದಿಗೆ ಇಲ್ಲವಲ್ಲ ಎನ್ನುವ ಚರ್ಚೆ ತೆಲುಗಿನ ಸೋಷಿಯಲ್ ಮೀಡಿಯಾಗಳಲ್ಲಿ ತೀವ್ರಗೊಂಡಿದೆ.




