ಮಂಡ್ಯ ನಗರದಲ್ಲಿ ವಿಷ್ಣು ಸೇನಾ ಸಮಿತಿ ವತಿಯಿಂದ ಭಾನುವಾರ ಚಿತ್ರನಟ ಡಾ.ವಿಷ್ಣುವರ್ಧನ್ ರವರ ಸಂಭ್ರಮಾಚರಣೆ ರಂಗೇರಿತ್ತು.
ಬೆಳಿಗ್ಗೆ 10.30 ಕ್ಕೆ ನಗರದ ಮಹಾವೀರ ಚಿತ್ರಮಂದಿರದಲ್ಲಿ ಡಾ.ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿ ಬಳಗದಿಂದ 38 ವರ್ಷಗಳ ನಂತರ ಬಿಡುಗಡೆಗೊಂಡ “ಕೃಷ್ಣ ನೀ ಬೇಗನೆ ಬಾರೋ” ಚಿತ್ರ ತೆರೆ ಕಂಡಿದ್ದು ಇದರ ಸಂಭ್ರಮ ಆಚರಣೆ ಅಂಗವಾಗಿ ಸಾಹಸಸಿಂಹ ವಿಷ್ಣುವರ್ಧನ್ ಕಟೌಟಿಗೆ ವಿಷ್ಣು ಅಭಿಮಾನಿಗಳ ಬಳಗದ ವತಿಯಿಂದ ಬೃಹತ್ ಹೂವಿನ ಹಾರ ಹಾಕಿ ಸಂಭ್ರಮಿಸಲಾಯಿತು.
ಬಳಿಕ ಬಂದಂತಹ ಎಲ್ಲಾ ವಿಷ್ಣು ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಹಾಗೂ ಸಿಹಿ ಹಂಚಿ ವಿಷ್ಣು ಅಭಿಮಾನಿಗಳು ಸಂಭ್ರಮಿಸಿದರು.
ವಿಷ್ಣು ಸೇನಾ ಸಮಿತಿ ಜಿಲ್ಲಾಧ್ಯಕ್ಷ ಎಚ್ ಪಿ ಸತೀಶ್, ಡಾ,ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಪ್ರತಾಪ್ ಸಿಂಹ, ಸಂಘದ ಸಹ ಕಾರ್ಯ ದರ್ಶಿ ಚೆನ್ನ ಉಪಸ್ಥಿತರಿದ್ದು ಸಂಭ್ರಮೋತ್ಸವದಲ್ಲಿ ಭಾಗಿಯಾದರು.




