Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಪಿ.ಸಿ.ಪಿ.ಡಿ.ಎನ್ ಟಿ ಕಾಯ್ದೆ: ಜಿಲ್ಲಾ ಪರಿಶೀಲನಾ ಸಮಿತಿ ಸಭೆ

ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ತಡೆ ಕಾಯ್ದೆ ಜಿಲ್ಲಾ ಸಲಹ ಸಮಿತಿ ಸಭೆ ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಇತ್ತೀಚೆಗೆ ತಪಾಸಣಾ ತಂಡ ಜಿಲ್ಲೆಯಲ್ಲಿ ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಗ್ಗೆ ಚರ್ಚಿಸಲಾಯಿತು. ಸ್ಕ್ಯಾನಿಂಗ್ ಸೆಂಟರ್ ಗಳು ಕಾಯ್ದೆಯಲ್ಲಿ ತಿಳಿಸಿರುವ ರೀತಿ ದಾಖಲೆಗಳನ್ನು ಕನಿಷ್ಠ ಎರಡು ವರ್ಷ ಸಂಗ್ರಹಿಸಿಡಬೇಕು. ಮೂರು ತಿಂಗಳ ಮೇಲ್ಪಟ್ಟು ಹಾಗೂ 6 ತಿಂಗಳವರಗಿನ ಗಭೀರ್ಣಿಯರು ಸ್ಕ್ಯಾನಿಂಗ್ ಒಳಪಟ್ಟಿರುವವರ ದಾಖಲೆಗಳನ್ನು ತಪಸಣಾ ತಂಡ ಆದ್ಯತೆಯ ಮೇಲೆ ಪರಿಶೀಲಿಸಬೇಕು ಎಂದು ಡಿ.ಹೆಚ್.ಒ ಡಾ.ಮೋಹನ್ ತಿಳಿಸಿದರು.

ಸ್ಕ್ಯಾನಿಂಗ್ ಸೆಂಟರ್ ಗಳನ್ನು ಉಪವಿಭಾಗಾಧಿಕಾರಿ ಗಳ ಅಧ್ಯಕ್ಷತೆಯಲ್ಲಿ ಪರಿಶೀಲನೆ ನಡೆಸಿದಾಗ, ಮಾಹಿತಿ ಬೋಡ್೯ ಗಳ ಅನಾವರಣವನ್ನು ಸಾರ್ವಜನಿಕರಿಗೆ ಗೋಚರಿಸುವಂತೆ ಹಾಕಲು ತಿಳಿಸಿ, ಒಪ್ಪಿಕೊಳ್ಳಲು ಸಾಧ್ಯವಿಲ್ಲದ ಕಾರಣಗಳು ನೀಡಿ ನೇರವಾಗಿ ಮೂರು ಅಥವಾ ನಾಲ್ಕು ತಿಂಗಳ ನಂತರ ಗರ್ಭೀಣಿಯರು ವೈದ್ಯರ ಬಳಿ ತಪಾಸಣೆಗೆ ಒಳಪಡುವವರ ಬಗ್ಗೆ ಮಾಹಿತಿ ನೀಡಿದರೆ ವಿಶೇಷ ನಿಗಾ ವಹಿಸಿ ಪರಿಶೀಲನೆ ನಡೆಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ, ವಿನಾಯಕ ನರ್ಸಿಂಗ್ ಹೋಂ ನ ಡಾ. ವಸುಮತಿ ರಾವ್ , ಮಕ್ಕಳ ತಜ್ಞ ಡಾ.ಗೋಪಾಲಕೃಷ್ಣ ಗುಪ್ತ, ರೆಡಿಯೋಲಾಜಿಸ್ಟ್ ಡಾ.ನಿತೇಶ್ ಶ್ರೀನಿವಾಸ್, ಡಾ. ಮನೋಹರ್, ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!