Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ರತ್ಯೇಕ ”ದ್ರಾವಿಡ ನಾಡು” ಕೇಳಿದ್ದ ಸ್ವಾಭಿಮಾನಿ ನಾಯಕ ಯಾರು ಗೊತ್ತೇ ?


  • ಪೆರಿಯಾರ್ ಅಂದ್ರೆ ‘ಗೌರವಾನ್ವಿತ’ ಅಥವಾ ‘ದೊಡ್ಡವರು’ ಎಂಬ ಅರ್ಥವಿದೆ 

  • ಇಂದು ಸ್ವಾಭಿಮಾನಿ ಚಳವಳಿಯ ಹರಿಕಾರ ಪೆರಿಯಾರ್ ಪುಣ್ಯಸ್ಮರಣೆ

ಪೆರಿಯಾರ್ ರಾಮಸ್ವಾಮಿ ಸೆಪ್ಟೆಂಬರ್ 17, 1879ರಂದು ಮೇಲ್ಜಾತಿಯಲ್ಲಿಯೇ ಜನಿಸಿ, ಅಲ್ಲಿನ ಕಂದಾಚಾರ, ಮೂಢನಂಬಿಕೆಗಳನ್ನು ಧಿಕ್ಕರಿಸಿ, ತಮಿಳುನಾಡಿನಲ್ಲಿ ಸ್ವಾಭಿಮಾನಿ ಚಳವಳಿಯನ್ನು ಕಟ್ಟಿದ ಮಹಾನ್ ವ್ಯಕ್ತಿ. ಹಲವು ದಶಕಗಳ ಕಾಲ ಮೇಲ್ಜಾತಿಯ ತಾರತಮ್ಯಗಳ, ಶೋಷಣೆಯ ವಿರುದ್ಧ ಸಿಡಿದೆದ್ದು, ತಮಿಳುನಾಡಿನಲ್ಲಿ DMK ಪಕ್ಷವನ್ನು ಸ್ಥಾಪಿಸಿದರು.

ಇಂತಹ ಮಹಾನಾಯಕ ಇ.ವಿ.ಆರ್ ಹಾಗೂ ಇ.ವಿ. ರಾಮಸ್ವಾಮಿ ನಾಯ್ಕರ್ ಅಥವಾ ತಂತೈ ಪೆರಿಯಾರ್ ಪುಣ್ಯ ಸ್ಮರಣೆಯ ದಿನ ಈ ಡಿಸೆಂಬರ್ 24. ಅವರು 94 ವರ್ಷಗಳ ಕಾಲ ಜೀವಿಸಿ, ದಕ್ಷಿಣ ಭಾರತದಲ್ಲಿ ಸ್ವಾಭಿಮಾನಿ ಚಳವಳಿಯನ್ನು ಭಿತ್ತಿ ಬೆಳೆದು, ಯಶಸ್ವಿಯೂ ಆದರು. ಅವರು ಡಿ.24,1973ರಲ್ಲಿ ನಿಧರಾದರು. ಅವರ ಪುಣ್ಯಸ್ಮರಣೆಯ ಅಂಗವಾಗಿ ನುಡಿಕರ್ನಾಟಕ.ಕಾಂ ವಿಶೇಷ ವರದಿಯನ್ನು ನಿಮ್ಮ ಮುಂದಿಟ್ಟಿದೆ.

ತಮಿಳು ಸ್ವಾಭಿಮಾನ ಚಳವಳಿಯ ನಾಯಕ 

ಪೆರಿಯಾರ್ ಅವರು ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ(DMK)ನ ಸ್ಥಾಪಕ. “ತಮಿಳು ಸ್ವಾಭಿಮಾನಿ ಚಳುವಳಿ” ಯ ನಾಯಕರಾಗಿದ್ದರು. ಅವರು ಸ್ವಾತಂತ್ರ ಹೋರಾಟಗಾರರಾಗಿದ್ದರು. ತಮಿಳು ಭಾಷೆಯಲ್ಲಿ ‘ಪೆರಿಯಾರ್’ ಅಂದ್ರೆ ಗೌರವಾನ್ವಿತ, ಅಥವಾ ‘ದೊಡ್ಡವರು’ ಎಂಬ ಅರ್ಥವಿದೆ. ಈ ಮಾತಿನ ಮೂರ್ತ ರೂಪವೇ ಆಗುವ ಮೂಲಕ ಪೆರಿಯಾರ್, ತಮ್ಮ ಪ್ರಗತಿಪರ ವಿಚಾರಧಾರೆಯಿಂದಲೇ ಲಕ್ಷಾಂತರ ಜನರಿಂದ ದೊಡ್ಡ ವ್ಯಕ್ತಿ ಎಂದೇ ಕರೆಸಿಕೊಳ್ಳುತ್ತಿದ್ದರು.

1939ರಲ್ಲಿ ದ್ರಾವಿಡನಾಡು ಸಮ್ಮೇಳನ ಸಂಘಟಿಸಿದ ಪೆರಿಯಾರ್, ತಮಿಳು, ತೆಲುಗು, ಕನ್ನಡ, ಮಲಯಾಳಿ ಭಾಷೆಗಳನ್ನಾಡುವ ಜನರನ್ನು ಸೇರಿಸಿ, ದ್ರಾವಿಡ ರಾಜ್ಯ ನಿರ‍್ಮಾಣ ಮಾಡಬೇಕೆನ್ನುವ ಆಶಯ ಹೊಂದಿದ್ದರು. ಭಾರತ ಸ್ವಾತಂತ್ರ‍್ಯ ಪಡೆಯುವ ಸಂದರ್ಭದಲ್ಲಿ ಪ್ರತ್ಯೇಕ ದ್ರಾವಿಡನಾಡು ಅಸ್ತಿತ್ವಕ್ಕೆ ಬರಬೇಕೆಂದು ಪೆರಿಯಾರ್ ಒತ್ತಾಯಿಸಿದ್ದರು.

1916ರಲ್ಲಿ ಸ್ಥಾಪನೆಯಾಗಿದ್ದ ಸೌತ್ ಇಂಡಿಯನ್ ಲಿಬರೇಷನ್ ಪಕ್ಷ, ಜಸ್ಟಿಸ್ ಪಾರ್ಟಿ ಎಂದು ಹೆಸರಾಗಿತ್ತು. 1938 ರಿಂದ 1944ರವರೆಗೆ ಪೆರಿಯಾರ್, ಜಸ್ಟಿಸ್ ಪಾರ್ಟಿ ಮುನ್ನಡೆಸಿದ್ದರು. ಇದೇ ಜಸ್ಟಿಸ್ ಪಾರ್ಟಿ, 1944ರಲ್ಲಿ ದ್ರಾವಿಡ ಕಳಗಂ ಎಂದು ಬದಲಾಯಿತು. ನಗರವಾಸಿಗಳು, ಹಳ್ಳಿಗರು ಮತ್ತು ವಿದ್ಯಾರ್ಥಿಗಳು ದ್ರಾವಿಡ ಕಳಗಂ ಪಕ್ಷದ ತತ್ವಗಳಿಂದ ಆಕರ್ಷಿತರಾಗಿದ್ದರು. ದ್ರಾವಿಡ ಕಳಗಂ ಪಕ್ಷ, ಸಾಮಾಜಿಕ ಸುಧಾರಣೆಯನ್ನು ತೀವ್ರಗೊಳಿಸಿತು. ಅಸ್ಪೃಶ್ಯತೆ ನಿವಾರಣೆಗೆ ತೀವ್ರ ತರವಾದ ಹೋರಾಟ ಆರಂಭವಾಯಿತು.

9ನೇ ಜುಲೈ 1948ರಲ್ಲಿ ಪೆರಿಯಾರ್ ಅವರು ಮಣಿಯಮ್ಮಾಯಿಯವರನ್ನು ಎರಡನೇ ಪತ್ನಿಯಾಗಿ ಸ್ವೀಕರಿಸಿದರು. ತಮಗಿಂತ ಅತ್ಯಂತ ಚಿಕ್ಕ ವಯಸ್ಸಿನ ಹೆಣ್ಣುಮಗಳನ್ನು ವಿವಾಹವಾದರು. ಇದರಿಂದ ಪೆರಿಯಾರ್ ತಪ್ಪು ಸಂದೇಶ ನೀಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಆದರೆ ಅದಕ್ಕೆ ಹೆದರದೇ, ವಿಧವಾ ಮಹಿಳೆಯರಿಗೆ ಮತ್ತೇ ಜೀವನ ಕಲ್ಪಿಸುವತ್ತ ಪೆರಿಯಾರ್ ಅವರು ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟ ನಡೆಸಿದರು. ಇಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡುವ ವ್ಯಕ್ತಿಗಳು ಹಾಗೂ ಚಳವಳಿಗಳು ತಮ್ಮ ದಾರಿಯಿಂದ ಹಿಂದೆ ಸರಿಯಬಾರದು ಎಂಬುದು ಅವರ ಸ್ಪಷ್ಟ ನಿಲುವಾಗಿತ್ತು.

ಈ ಮಧ್ಯೆ, ದ್ರಾವಿಡನಾಡು ಪರಿಕಲ್ಪನೆಯು ನಂತರ ತಮಿಳುನಾಡು ಎಂಬ ಹೆಸರಿಗೆ ಬದಲಾಯಿತು. ಇದು ದಕ್ಷಿಣ ಭಾರತದ ಮಾತ್ರವಲ್ಲದೆ ಶ್ರೀಲಂಕಾವನ್ನು ಒಳಗೊಂಡಂತೆ ತಮಿಳು ಜನರ ಒಕ್ಕೂಟದ ಪ್ರಸ್ತಾಪಕ್ಕೆ ಕಾರಣವಾಯಿತು. 1953ರಲ್ಲಿ, ಪೆರಿಯಾರ್ ಮದ್ರಾಸ್ ಅನ್ನು ತಮಿಳುನಾಡಿನ ರಾಜಧಾನಿಯಾಗಿ ಮಾಡಲು ಶ್ರಮಿಸಿದರು. ಹಿಂದಿ ಹೇರಿಕೆಯ ವಿರುದ್ಧ ಆಗಲೇ ಹೋರಾಟ ಪ್ರಾರಂಭಿಸಿದ್ದರು. ಆಗ ಹಿಂದಿಯನ್ನು ಕಡ್ಡಾಯಗೊಳಿಸುವುದಿಲ್ಲ ಎಂಬ ಅಂದಿನ ಮುಖ್ಯಮಂತ್ರಿ ಕಾಮರಾಜ್ ಅವರ ಪ್ರತಿಜ್ಞೆಯ ಮೇರೆಗೆ ತಮ್ಮ ಹೋರಾಟವನ್ನು ಮುಂದೂಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!