Saturday, November 21, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಡಾ.ಶಶಾಂಕ್ ಗೆ ಪಿ.ಹೆಚ್.ಡಿ ಪದವಿ

ನಿತ್ಯ ಸಚಿವ ಕೆ ವಿ ಶಂಕರೇಗೌಡರ ಮೊಮ್ಮಗ ಡಾ.ಶಶಾಂಕ್ ಕೆ ಎಸ್ ಅವರು ಮಂಡಿಸಿದ ”ಸಮಾಜೋ- ರಾಜಕೀಯ ನಾಯಕತ್ವ ಕೆ ವಿ ಶಂಕರೇಗೌಡ ಮತ್ತು ಜಿ ಮಾದೇಗೌಡ ಒಂದು ಅಧ್ಯಯನ” ಕುರಿತ ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯವು ಪಿ.ಹೆಚ್.ಡಿ ಪದವಿಗೆ ಅಂಗೀಕರಿಸಿದೆ.

ಇತ್ತೀಚೇಗೆ ನಡೆದ ಮೈಸೂರು ವಿಶ್ವ ವಿದ್ಯಾನಿಲಯದಿಂದ 103ನೇ ವಾರ್ಷಿಕ ಘಟಕೋತ್ಸವದಲ್ಲಿ ರಾಜ್ಯಪಾಲರಾದ ತಾವರ್ ಚಂದ್ ಗೇಲ್ಹೋಟ್ ಅವರು ಶಶಾಂಕ್ ಅವರಿಗೆ ಪಿ ಎಚ್ ಡಿ ಪದವಿ ಪ್ರಮಾಣ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಉಪಸ್ಥಿತರಿದ್ದರು. ಡಾ.ಎಚ್ ಎಂ ವರದರಾಜು ಅವರ ಮಾರ್ಗದರ್ಶನದಲ್ಲಿ ಶಶಾಂಕ್ ಅವರು ಮಹಾಪ್ರಬಂಧ ಮಂಡಿಸಿದ್ದರು.

ಡಾ.ಶಶಾಂಕ್ ಅವರು ಮೈಸೂರಿನ ಮಂಡ್ಯ ರಮೇಶ್ ಅವರ ನಟನ ರಂಗಭೂಮಿಯಲ್ಲಿ ಕಳೆದ 15 ವರ್ಷಗಳಿಂದ ರಗಭೂಮಿ ಕಲಾವಿದರಾಗಿ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಕರ್ನಾಟಕದ್ಯಂತ ಹಾಗೂ ಹೊರ ರಾಜ್ಯಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜು ಹಾಗೂ ಮಂಡ್ಯದ ತೂಬಿನಕೆರೆ ಸ್ನಾತಕೋತ್ತರ ಕೇಂದ್ರದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ