ಕೆ.ಆರ್.ಪೇಟೆ ತಾಲ್ಲೂಕಿನ ಚಿಕ್ಕಳಲೆ ಗ್ರಾಮದ ಪುರಾಣ ಪ್ರಸಿದ್ದ ಚಿಕ್ಕಾಳಮ್ಮ (ಚಿಕ್ಕಮ್ಮ ಮತ್ತು ದೊಡ್ಡಮ್ಮ) ದೇವಾಲಯಗಳು ಶಿಥಿಲವಾಗಿದ್ದ ಹಿನ್ನಲೆಯಲ್ಲಿ ಗ್ರಾಮಸ್ಥರ ಹಾಗೂ ದಾನಿಗಳ ಸಹಾಯದೊಂದಿಗೆ 80 ಲಕ್ಷ ರೂ. ವೆಚ್ಚದಲ್ಲಿ ದೇವಾಯದ ಪುನರ್ ನಿರ್ಮಾಣ ಕಾರ್ಯ ಭರದಿಂದ ನಡೆದಿದೆ.
ವಿನೂತನ ಮಾದರಿಯಲ್ಲಿ ನಿರ್ಮಾಣವಾಗುತ್ತಿರುವ ದೇವಾಲಯಕ್ಕೆ ಕೆ.ಆರ್.ಪೇಟೆ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್ ಅವರು ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿದರು.
ಗ್ರಾಮದ ಮುಖಂಡರು ದೇವಾಲಯ ನಿರ್ಮಾಣಕ್ಕೆ ಹಣದ ಕೊರತೆ ಉಂಟಾಗಿದ್ದು, ಗ್ರಾನೈಟ್ ಮತ್ತು ಸಿಮೆಂಟ್ ಅವಶ್ಯಕತೆ ಇದೆ ಎಂದ ಕೂಡಲೇ ಸ್ಪಂದಿಸಿದ ಕಿಕ್ಕೇರಿ ಸುರೇಶ್ 5 ಲಕ್ಷ ರೂ.ವೆಚ್ಚದ ಗ್ರಾನೈಟ್ ಮತ್ತು ಸಿಮೆಂಟ್ ತರಿಸಿ ಕೊಟ್ಟಿದ್ದಾರೆ.
ಈ ವೇಳೆ ಚೌಡೇನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಭದ್ರಯ್ಯ ಮಾತನಾಡಿ, ನಮ್ಮ ತಾಲ್ಲೂಕಿನಲ್ಲಿ ಯಾವುದೇ ಕಷ್ಟ-ಸುಖಗಳಿಗೆ ಕೊಡಲೇ ಸ್ವಂದಿಸುವ ಮನೋಭಾವನೆ ಇರುವ ಸುರೇಶ್ ಅವರಂತ ನಾಯಕರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿ. ನಮ್ಮ ಪರಂಪರೆಯ ದೇವಾಲಯಗಳ ಅಭಿವೃದ್ಧಿಗಾಗಿ ತಮ್ಮ ಕೈಲಾದ ಸೇವೆ ಸಲ್ಲಿಸುತ್ತಿರುವ ಕಿಕ್ಕೇರಿ ಸುರೇಶ್ ಅವರಿಗೆ ತಾಯಿ ಚಿಕ್ಕಾಳಮ್ಮ ಆಶೀರ್ವಾದ ಸದಾ ಇರಲಿ ಎಂದು ಹಾರೈಸಿದರು.
ಮುಖಂಡರಾದ ಸಾಸಲು ಈರಪ್ಪ, ಚೌಡೇನಹಳ್ಳಿ ಗ್ರಾ.ಪಂ. ಅಧ್ಯಕ್ಷ ಚಿಕ್ಕಳಲೆ ದೇವರಾಜು, ಮುಖಂಡರಾದ ಲಕ್ಷ್ಮೀಪುರ ಚಂದ್ರೇಗೌಡ, ನಾಗರಾಜು, ಸಣ್ಣಪ್ಪ, ಮಹಾದೇವು, ಲೋಕೇಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.