ಮದ್ಧೂರು ತಾಲೂಕಿನ ಕೊತ್ತನಹಳ್ಳಿ ಗ್ರಾಮದ ಡಿ.ದಿವಾಕರ ಅವರು ಮಂಡಿಸಿದ್ದ ‘ಆ್ಯನ್ ಇಂಪ್ಯಾಕ್ಟ್ ಆಫ್ ಮಹಾತ್ಮ ಗಾಂಧಿ ನ್ಯಾಷನಲ್ ರೂರಲ್ ಎಂಪ್ಲಾಯ್‌ಮೆಂಟ್ ಗ್ಯಾರಂಟಿ ಆಕ್ಟ್ ಆನ್ ಎಂಪ್ಲಾಯ್‌ಮೆಂಟ್ ಜನರೇಷನ್ ಇನ್ ಕರ್ನಾಟಕ: ಎ ಕೇಸ್ ಸ್ಟಡಿ ಆಫ್ ಮಂಡ್ಯ ಡಿಸ್ಟ್ರಿಕ್ಟ್’ ಎಂಬ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿಯನ್ನು ಪ್ರದಾನ ಮಾಡಿದೆ.
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಅ.8ರಂದು ನಡೆದ ಅರವತ್ತನೇ ವಾರ್ಷಿಕ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಯಿತು.
ಅರ್ಥಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಎನ್. ರಂಗಸ್ವಾಮಿ ಅವರ ಮಾರ್ಗದರ್ಶನದಲ್ಲಿ ದಿವಾಕರ್ ಮಹಾಪ್ರಬಂಧ ಮಂಡಿಸಿದ್ದರು.
ಡಿ.ದಿವಾಕರ ಅವರು ಕೊತ್ತನಹಳ್ಳಿ ಗ್ರಾಮದ ಜಿ.ಟಿ.ದಾಸಯ್ಯ ನಿಂಗಮ್ಮ ದಂಪತಿಯ ಪುತ್ರರಾಗಿದ್ದು,
ಪ್ರಸ್ತುತ ಇವರು ಮದ್ದೂರು ತಾಲೂಕಿನ ಕೆ. ಹೊನ್ನಲಗೆರೆಯಲ್ಲಿರುವ ಆರ್. ಕೆ. ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.




