Thursday, September 19, 2024

ಪ್ರಾಯೋಗಿಕ ಆವೃತ್ತಿ

ಜೆಡಿಎಸ್ ಶಾಸಕರು ಒಂದು ಯೋಜನೆಯನ್ನು ತಂದಿಲ್ಲ :ಬಿ.ಸೋಮಶೇಖರ್

ಹತ್ತು ವರ್ಷ ಆಡಳಿತ ನಡೆಸಿದ ಜೆಡಿಎಸ್ ಶಾಸಕರು ಒಂದು ಯೋಜನೆಯನ್ನು ತಂದಿಲ್ಲ, ಜೊತೆಗೆ ತಂದಿರುವ ಯೋಜನೆಗಳನ್ನು ಪೂರ್ಣಗೊಳಿಸದೇ ನಿಲ೯ಕ್ಷ್ಯ ವಹಿಸಿದ್ದಾರೆಂದು ಶಾಸಕ ಡಾ.ಕೆ.ಅನ್ನದಾನಿ ವಿರುದ್ದ ಕಾಂಗ್ರೆಸ್ ಮುಖಂಡ ಬಿ.ಸೋಮಶೇಖರ್ ಟೀಕಿಸಿದರು.

ಮಳವಳ್ಳಿ ತಾಲ್ಲೂಕಿನ ಪಂಡಿತಹಳ್ಳಿಯಲ್ಲಿ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಮ್ಮ ಕುಟುಂಬಕ್ಕೆ ಸೀಮಿತವಾಗಿರುವ ಜೆಡಿಎಸ್ ಪಕ್ಷವನ್ನು ಅಧಿಕಾರದಿಂದ ದೂರವಿಡಬೇಕು. ಭ್ರಷ್ಟಾಚಾರ ರಹಿತ ಆಡಳಿತ ಹಾಗೂ ಅಭಿವೃದ್ಧಿಯ ಯೋಜನೆಗಳನ್ನು ಜಾರಿ ಮಾಡುವ ಶಕ್ತಿ ದಕ್ಷ ನಾಯಕ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಇದೆ. ಅವರ ಕೈಬಲಪಡಿಸಲು ಎಲ್ಲರೂ ಮುಂದಾಗಬೇಕೆಂದು ಕೋರಿದರು.

ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಪೂರಿಗಾಲಿ ಹನಿ ನೀರಾವರಿ ಯೋಜನೆಯ ಮೂಲಕ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತಾಗಲಿ ಎನ್ನುವ ದೃಷ್ಟಿಯಿಂದ ತಂದಿದ್ದ ಯೋಜನೆಯು ಶಾಸಕರ ಇಚ್ಛಾಶಕ್ತಿಯ ಕೊರತೆಯಿಂದ ಆರು ವರ್ಷ ಕಳೆದರೂ ಪೂರ್ಣಕೊಂಡಿಲ್ಲ, ಗೆದ್ದ ಕೂಡಲೇ ಈ ಭಾಗದಲ್ಲಿ ಬಿ.ಸೋಮಶೇಖರ್ ನೇತೃತ್ವದ ನೀರಾವರಿ ಯೋಜನೆಯ ಕೈಗಾರಿಕಾ ವಲಯ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.

ಬಿ.ಸೋಮಶೇಖರ್ ಮತ್ತ ನಾನು ಬೇರೆ ಬೇರೆ ಪಕ್ಷದಲ್ಲಿದ್ದರೂ ನಮ್ಮ ಸಿದ್ದಾಂತಗಳು ಒಂದೇ ಆಗಿತ್ತು. ಅವರ ಅಭಿವೃದ್ಧಿ ಪರ ಚಿಂತನೆಗಳು ಹಾಗೂ ಮಾರ್ಗದರ್ಶನ ನಮಗೆ ಮುಖ್ಯವಾಗಿದೆ. ಬಿ.ಜಿ.ಪುರ ಭಾಗದ ಜನರ ಪ್ರೀತಿ ಅಪಾರ, ನಿಮ್ಮ ಋಣ ನನ್ನ ಮೇಲಿದ್ದು, ಅದನ್ನು ಅಭಿವೃದ್ಧಿ ಕಾರ್ಯಗಳ ಮೂಲಕ ತೀರಿಸುವೆ ಎಂದರು.

593 ಕೋಟಿ ರೂ.ವೆಚ್ಚದ ಪೂರಿಗಾಲಿ ಹನಿ ನೀರಾವರಿ ಯೋಜನೆಗಾಗಿ ಪೂರ್ಣಗೊಳಿಸಿ ಬಿಜಿಪುರ ಹೋಬಳಿಯನ್ನು ಹಸಿರು ಮಾಡುವ ಕನಸು ಕಂಡಿರುವ ತಮಗೆ ಅಶಿ೯ವದೊಸಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಚುನಾವಣಾ ವೀಕ್ಷಕ ತಮಿಳುನಾಡು ಶಾಸಕ ಕರುಮಾಣಿಕ್ಯಂ, ಎಐಸಿಸಿ ಕಾರ್ಯದರ್ಶಿ ರೋಜಿ ಬೇಗಂ, ಜಿ‌.ಪಂ.ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಮಾಜಿ ಸದಸ್ಯೆ ಸುಷ್ಮಾ ರಾಜು, ಕರ್ನಾಟಕ ಪ್ರದೇಶ ಕುರುಬರ ಸಂಘ ರಾಜ್ಯ ಉಪಾಧ್ಯಕ್ಷ ಬಿ.ಪುಟ್ಟಬಸವಯ್ಯ, ಕೆಪಿಸಿಸಿ ಸದಸ್ಯ ಪುಟ್ಟಸ್ವಾಮಿ, ನರೇಂದ್ರಸ್ವಾಮಿ ಪುತ್ರ ಯುವರಾಜ್ ತಾ.ಪಂ.ಮಾಜಿ ಅಧ್ಯಕ್ಷ ವಿ.ಪಿ.ನಾಗೇಶ್, ಉಪಾಧ್ಯಕ್ಷ ಸಿ.ಮಾಧು, ಗ್ರಾ.ಪಂ.ಅಧ್ಯಕ್ಷೆ ಉಷಾ, ತಾ.ಪ.ಮಾಜಿ ಸದಸ್ಯೆ ರತ್ನಮ್ಮ, ಮುಖಂಡರಾದ ಬಂಕ್ ಮಹದೇವು, ಕರಿಯಪ್ಪ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!