Thursday, September 19, 2024

ಪ್ರಾಯೋಗಿಕ ಆವೃತ್ತಿ

ನೀತಿ ಆಯೋಗ ಸಭೆಯಲ್ಲಿ ರಾಜಕೀಯ ಪಕ್ಷಪಾತ| ಸಭೆಯಿಂದ ಹೊರನಡೆದ ಮಮತಾ ಬ್ಯಾನರ್ಜಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶನಿವಾರ ನಡೆದ ನೀತಿ ಆಯೋಗದ ಸಭೆಯಿಂದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೊರನಡೆದಿದ್ದಾರೆ. “ನನಗೆ ಮಾತನಾಡಲು ಅವಕಾಶ ನೀಡಿಲ್ಲ, ಮೈಕ್ ಆಫ್ ಮಾಡಿದರು” ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಜುಲೈ 23ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ ರಾಜಕೀಯ ಪಕ್ಷಪಾತದಿಂದ ಕೂಡಿದೆ ಎಂದು ಆರೋಪಿಸಿ ವಿಪಕ್ಷಗಳ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ನೀತಿ ಆಯೋಗ ಸಭೆಯನ್ನು ಬಹಿಷ್ಕರಿಸಿದ್ದಾರೆ. ಆದರೆ ಮಮತಾ ಬ್ಯಾನರ್ಜಿ ಸಭೆಗೆ ಹಾಜರಾಗಿದ್ದರು.

ಸಭೆಯಲ್ಲಿ ಮಾತನಾಡಲು ಅವಕಾಶ ನೀಡದ ಕಾರಣ ಸಭೆಯಿಂದ ಹೊರನಡೆದ ಮಮತಾ ಬ್ಯಾನರ್ಜಿ, “ಕೇಂದ್ರ ಬಜೆಟ್ ‘ರಾಜಕೀಯ ಪಕ್ಷಪಾತ’ದಿಂದ ಕೂಡಿದೆ” ಎಂದು ಆರೋಪಿಸಿದರು.

“ನಾನು ಸಭೆಯನ್ನು ಬಹಿಷ್ಕರಿಸಿ ಹೊರಗೆ ಬಂದಿದ್ದೇನೆ. ಚಂದ್ರಬಾಬು ನಾಯ್ಡು ಅವರಿಗೆ ಮಾತನಾಡಲು 20 ನಿಮಿಷ ಅವಕಾಶ ನೀಡಲಾಗಿದೆ. ಅಸ್ಸಾಂ, ಗೋವಾ ಮತ್ತು ಛತ್ತೀಸ್‌ಗಢದ ಸಿಎಂಗಳು 10-12 ನಿಮಿಷಗಳ ಕಾಲ ಮಾತನಾಡಿದರು. ಆದರೆ ಕೇವಲ ಐದು ನಿಮಿಷ ಆಗುತ್ತಿದ್ದಂತೆ ನನ್ನ ಮಾತಿಗೆ ಅಡ್ಡಿಪಡಿಸಲಾಗಿದೆ, ತಡೆಯಲಾಗಿದೆ” ಎಂದು ದೂರಿದರು.

“>

 

“ಇದು ಅನ್ಯಾಯ. ನನ್ನನ್ನು ಯಾಕೆ ತಡೆದಿರಿ, ಏಕೆ ತಾರತಮ್ಯ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದೆ. ನಾನು ಸಭೆಗೆ ಹಾಜರಾಗುತ್ತಿದ್ದೇನೆ, ಇದರಿಂದ ನೀವು (ಕೇಂದ್ರ ಸರ್ಕಾರ) ಸಂತೋಷವಾಗಿರಬೇಕು. ಬದಲಿಗೆ ನಿಮ್ಮ ಪಕ್ಷಕ್ಕೆ ನಿಮ್ಮ ಸರ್ಕಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದೀರಿ. ಇದು ಬಂಗಾಳಕ್ಕೆ ಮಾತ್ರವಲ್ಲ ಎಲ್ಲ ಪ್ರಾದೇಶಿಕ ಪಕ್ಷಗಳಿಗೂ ಮಾಡಿದ ಅವಮಾನ. ಇದು ಅನ್ಯಾಯವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ವಿರೋಧ ಪಕ್ಷದಿಂದ, ನಾನು ಮಾತ್ರ ಪ್ರತಿನಿಧಿಸಿದೆ. ಸಹಕಾರಿ ಫೆಡರಲಿಸಂ ಅನ್ನು ಬಲಪಡಿಸಬೇಕು ಎಂಬ ಹೆಚ್ಚಿನ ಆಸಕ್ತಿಯಿಂದಾಗಿ ಈ ಸಭೆಯಲ್ಲಿ ಭಾಗವಹಿಸಿದೆ. ಬಜೆಟ್ ಕೂಡ ರಾಜಕೀಯ ಪಕ್ಷಪಾತವನ್ನು ಹೊಂದಿದೆ. ಬೇರೆ ರಾಜ್ಯಗಳ ಬಗ್ಗೆ ಏಕೆ ತಾರತಮ್ಯ ಮಾಡುತ್ತಿದ್ದೀರಿ” ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

“ನೀತಿ ಆಯೋಗಕ್ಕೆ ಯಾವುದೇ ಹಣಕಾಸಿನ ಅಧಿಕಾರವಿಲ್ಲ, ಅದು ಹೇಗೆ ಕೆಲಸ ಮಾಡುತ್ತದೆ? ಅದಕ್ಕೆ ಹಣಕಾಸಿನ ಅಧಿಕಾರ ನೀಡಿ ಅಥವಾ ಯೋಜನಾ ಆಯೋಗವನ್ನು ಮರಳಿ ತನ್ನಿ” ಎಂದು ಆಗ್ರಹಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!