Tuesday, June 25, 2024

ಪ್ರಾಯೋಗಿಕ ಆವೃತ್ತಿ

ವರ್ಷವಿಡೀ ರಾಜಕೀಯ ಮಾಡಿದ್ದಾರೆ ಅಷ್ಟೇ : ಅಶ್ವಥ್ ನಾರಾಯಣ್

ಈ ಹಿಂದೆ ಪದವೀಧರ ಕ್ಷೇತ್ರ ಪ್ರತಿನಿಧಿಸಿದ ಸದಸ್ಯರ ವ್ಯವಸ್ಥೆಯಲ್ಲಿ ಯಾವುದೇ ಸುಧಾರಣೆ ಮಾಡದೆ ವರ್ಷವಿಡೀ ಓದಿಕೊಂಡು ಬರೀ ರಾಜಕಾರಣ ಮಾಡಿದ್ರಷ್ಟೇ ಎಂದು ಉನ್ನತ ಶಿಕ್ಷಣ ಹಾಗೂ ಐಟಿಬಿಟಿ ಸಚಿವ ಅಶ್ವಥ್ ನಾರಾಯಣ್ ಟೀಕಿಸಿದರು.

ಮಂಡ್ಯದ ಮಾಂಡವ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಪರವಾಗಿ ಮತಯಾಚನೆ ಮಾಡಿ. ಹಿಂದಿನ ಸದಸ್ಯರು ಬರೀ ಮಾತಲ್ಲಿ ಹೊಟ್ಟೆ ತುಂಬಿಸಿಕೊಂಡರು.

ಕೇವಲ ಆಶ್ವಾಸನೆ ನೀಡಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ವರ್ಷವಿಡಿ ಸುತ್ತಾಡಿಕೊಂಡು ರಾಜಕೀಯ ಮಾಡಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿ ಹಾಗಲ್ಲ. ರವಿಶಂಕರ್ ಅವರು ಬಾಲ್ಯದಿಂದಲೂ ಸ್ವಯಂಸೇವಕರಾಗಿ ಕೆಲಸ ಮಾಡಿದ್ದಾರೆ. ತಮ್ಮ ಹಲವು ನಾಯಕರನ್ನು ಬೆಳೆಸಿದ್ದಾರೆ.

ಕಳೆದ ಬಾರಿ ಇವರು ಅಲ್ಪಮತದಿಂದ ಸೋತಿದ್ದರು. ಈ ಬಾರಿ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಆಯ್ಕೆ ಮಾಡಿಕೊಡಲು ಮನವಿ ಮಾಡಿದರು. ಹಿಂದಿನ ವಿಧಾನಪರಿಷತ್ ಸದಸ್ಯರಿಗೆ ಅವಕಾಶ ಸಿಕ್ಕಿರುವ ವ್ಯವಸ್ಥೆಯಲ್ಲಿ ಯಾವ ಸುಧಾರಣೆಯನ್ನು ಮಾಡಿಲ್ಲ.

ಅದೇನೇ ಸುಧಾರಣೆ ಕೆಲಸ ಮಾಡಿದರೂ ಕಾಣಬಹುದಿತ್ತು. ಆದರೆ ಅಭಿವೃದ್ಧಿ ಮಾಡದೆ ವರ್ಷ ವಿಡಿ ಸುತ್ತಾಡಿಕೊಂಡು ರಾಜಕಾರಣ ಮಾಡಿದರು ಅಷ್ಟೇ ಎಂದು ಟೀಕಿಸಿದರು.

ರವಿಶಂಕರ್, ಬಿಜೆಪಿ ಮುಖಂಡರಾದ ಅಶೋಕ್ ಜಯರಾಮ್, ಬಿ.ಶಿವಲಿಂಗಯ್ಯ, ಮೀರಾ ಶಿವಲಿಂಗಯ್ಯ, ವಿಜಯಕುಮಾರ್ ಅಭ್ಯರ್ಥಿ ರವಿಶಂಕರ್, ಬಿಜೆಪಿ ಮುಖಂಡರಾದ ಅಶೋಕ್ ಜಯರಾಮ್, ಬಿ.ಶಿವಲಿಂಗಯ್ಯ, ಮೀರಾ ಶಿವಲಿಂಗಯ್ಯ, ವಿಜಯಕುಮಾರ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!