Saturday, November 21, 2026

ಪ್ರಾಯೋಗಿಕ ಆವೃತ್ತಿ

ಪಾಟ್ನಾ ರೈಲು ನಿಲ್ದಾಣದಲ್ಲಿ ಪೋರ್ನ್ ಕ್ಲಿಪ್ ವೈರಲ್

ಬಿಹಾರದ ಪಾಟ್ನಾದ ರೈಲ್ವೇ ನಿಲ್ದಾಣದಲ್ಲಿ ಡಿಸ್ಪ್ಲೇ ಸ್ಕ್ರೀನ್‌ನಲ್ಲಿ ಅಶ್ಲೀಲ ಕ್ಲಿಪ್ ಪ್ಲೇ ಆಗಿದ್ದು ರೈಲ್ವೇ ಅಧಿಕಾರಿಗಳನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ.

ಭಾನುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಪಾಟ್ನಾ ಜಂಕ್ಷನ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಜಾಹೀರಾತುಗಳ ಬದಲಿಗೆ ಎಲ್ಇಡಿ ಪರದೆಗಳಲ್ಲಿ ಪೋರ್ನ್ ಕ್ಲಿಪ್ ಪ್ಲೇ ಆಗಿದೆ. ಅಶ್ಲೀಲ ದೃಶ್ಯಗಳು ಸುಮಾರು 3 ನಿಮಿಷಗಳ ಕಾಲ ಪ್ರಸಾರವಾಗಿದೆ. ಅನೇಕ ಪ್ರಯಾಣಿಕರು ಅದನ್ನು ತಮ್ಮ ಫೋನ್‌ಗಳಲ್ಲಿ ರೆಕಾರ್ಡ್ ಮಾಡಿ ವೈರಲ್ ಮಾಡಿದ್ದಾರೆ ಎನ್ನಲಾಗಿದೆ.

ನಿಲ್ಧಾಣದಲ್ಲಿದ ಹಲವರು ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ರೈಲ್ವೆ ರಕ್ಷಣಾ ಪಡೆ ಮಧ್ಯ ಪ್ರವೇಶಿಸಿ ದೃಶ್ಯಾವಳಿಗಳನ್ನು ನಿಲ್ಲಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ದೃಶ್ಯಗಳು ವೈರಲ್ ಆಗಿದ್ದು, ಈ ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ರೈಲ್ವೆ ಸಚಿವಾಲಯವನ್ನು ಟ್ಯಾಗ್ ಮಾಡಿದ್ದಾರೆ ಎನ್ನಲಾಗಿದೆ.

ದತ್ತಾ ಕಮ್ಯುನಿಕೇಷನ್ ಎಂಬ ಏಜೆನ್ಸಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ, ಇದು ಪರದೆಯ ಮೇಲೆ ಜಾಹೀರಾತುಗಳು ಮತ್ತು ಮಾಹಿತಿಯನ್ನು ಪ್ರದರ್ಶಿಸುವ ಉಸ್ತುವಾರಿ ವಹಿಸಿಕೊಂಡಿತ್ತು.

ವರದಿಗಳ ಪ್ರಕಾರ ಏಜೆನ್ಸಿಯನ್ನು ರೈಲ್ವೇ ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಈ ರೀತಿ ಪ್ರಸಾರವಾಗಲೂ ಕಾರಣವೇನು ಎಂದು ರೈಲ್ವೆ ಪೊಲೀಸರು  ತನಿಖೆ ನಡೆಸುತ್ತಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ