Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಜಿಲ್ಲೆಯಲ್ಲಿ 1264 ಮಂದಿಯಿಂದ ಅಂಚೆ ಮತದಾನ

ಮಂಡ್ಯ ಜಿಲ್ಲೆ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮನೆಯಿಂದಲೇ ಅಂಚೆ ಮತದಾನ ಮಾಡಲು ಕೋರಿಕೆ ಸಲ್ಲಿಸಿದ್ದ ಹಿರಿಯ ನಾಗರಿಕರು, ವಿಶೇಷಚೇತನರಲ್ಲಿ 1264 ಮಂದಿ ಮತದಾರರು ಮೇ.3ರಂದು ಜಿಲ್ಲಾದ್ಯಂತ ಮತದಾನ ಮಾಡಿದ್ದಾರೆ.

ಮನೆಯಿಂದಲೇ ಮತದಾನ ಮಾಡಲು ಕೋರಿಕೆ ಸಲ್ಲಿಸಿದ್ದ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಶೇಷಚೇತನರಿಗೆ ಮನೆಯಿಂದಲೇ ಗೌಪ್ಯವಾಗಿ ಮತದಾನ ಮಾಡಲು ಎಲ್ಲಾ ವ್ಯವಸ್ಥೆ ಕೈಗೊಳ್ಳಲಾಗಿತ್ತು.

ಮೇ 3ರಂದು ಕೆ.ಆರ್.ಪೇಟೆ ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ 109 ಮಂದಿ,  29 ವಿಕಲಚೇತನರು‌ ಸೇರಿ ಒಟ್ಟು 138 ಜನರು ಮತ ಚಲಾಯಿಸಿದ್ದಾರೆ.

ಮದ್ದೂರಿನಲ್ಲಿ 80 ವರ್ಷ ಮೇಲ್ಪಟ್ಟ 177 ಮಂದಿ, 47 ವಿಕಲಚೇತನರು‌ ಸೇರಿ ಒಟ್ಟು 224 ಜನರು ಮತ ಚಲಾಯಿಸಿದ್ದಾರೆ.

ಮಳವಳ್ಳಿ 80 ವರ್ಷ ಮೇಲ್ಪಟ್ಟ 343 ಮಂದಿ ಹಾಗೂ 85 ವಿಕಲಚೇತನರು‌ ಸೇರಿ ಒಟ್ಟು 428 ಜನರು ಮತ ಚಲಾಯಿಸಿದ್ದಾರೆ.

ಮಂಡ್ಯ 80 ವರ್ಷ ಮೇಲ್ಪಟ್ಟ 78 ಮಂದಿ ಹಾಗೂ 24 ವಿಕಲಚೇತನರು‌ ಸೇರಿ ಒಟ್ಟು 102 ಜನರು ಮತ ಚಲಾಯಿಸಿದ್ದಾರೆ.

ಮೇಲುಕೋಟೆ 80 ವರ್ಷ ಮೇಲ್ಪಟ್ಟ 116 ಮಂದಿ ಹಾಗೂ 26 ವಿಕಲಚೇತನರು‌ ಸೇರಿ ಒಟ್ಟು 142 ಜನರು ಮತ ಚಲಾಯಿಸಿದ್ದಾರೆ.

ನಾಗಮಂಗಲ 80 ವರ್ಷ ಮೇಲ್ಪಟ್ಟ 80 ಮಂದಿ ಹಾಗೂ 26 ವಿಕಲಚೇತನರು‌ ಸೇರಿ ಒಟ್ಟು 106 ಜನರು ಮತ ಚಲಾಯಿಸಿದ್ದಾರೆ.

ಶ್ರೀರಂಗಪಟ್ಟಣ 80 ವರ್ಷ ಮೇಲ್ಪಟ್ಟ 87 ಮಂದಿ ಹಾಗೂ 37 ವಿಕಲಚೇತನರು‌ ಸೇರಿ ಒಟ್ಟು 124 ಜನರು ಮತ ಚಲಾಯಿಸಿದ್ದಾರೆ.

ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 990 ಮಂದಿ ಹಾಗೂ 274 ವಿಕಲಚೇತನರು‌ ಸೇರಿ ಒಟ್ಟು 1264 ಜನರು ಮತ ಚಲಾಯಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ