Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಅಂಚೆ ನೌಕರರ ಧರಣಿ

ಸೇವಾ ಅವಧಿಯನ್ನು ಎಂಟು ಗಂಟೆಗೆ ಸೀಮಿತಗೊಳಿಸಬೇಕು, ಪಿಂಚಣಿ ಸವಲತ್ತು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರು ಮಂಡ್ಯನಗರದಲ್ಲಿ ಧರಣಿ ನಡೆಸಿದರು.

ಮಂಡ್ಯ ನಗರದ ಕೇಂದ್ರ ಅಂಚೆ ಕಚೇರಿ ಎದುರು ಗ್ರಾಮೀಣ ಅಂಚೆ ನೌಕರರ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಿ ನೌಕರರು, ಸೇವಾ ಹಿರಿತನದ ಆಧಾರದ ಮೇಲೆ ವಿಶೇಷ ಭತ್ಯೆ ನೀಡಬೇಕು. ಅವೈಜ್ಞಾನಿಕ ಗು ರಿ ನೀಡಿ ಮೇಳಗಳನ್ನು ನಡೆಸುತ್ತಿರುವುದನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.

ಗುಂಪು ವಿಮೆಯನ್ನು ಐದು ಲಕ್ಷದವರೆಗೆ ಹೆಚ್ಚಳ ಮಾಡಬೇಕು. ಅವೈಜ್ಞಾನಿಕ ಗುರಿ ಸಾಧಿಸದಿರುವ ನೌಕರರಿಗೆ ಕಿರುಕುಳ ನಿಲ್ಲಿಸಬೇಕು. ಗ್ರಾಚ್ಯುಟಿ ಹಣವನ್ನು ಐದು ಲಕ್ಷಗಳವರೆಗೆ ಹೆಚ್ಚಳ ಮಾಡಬೇಕು, 180 ದಿನಗಳ ರಜೆ ಉಳಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಗ್ರಾಮೀಣ ಅಂಚೆ ನೌಕರರು ಮತ್ತು ಅವರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!