Wednesday, November 18, 2026

ಪ್ರಾಯೋಗಿಕ ಆವೃತ್ತಿ

ಗುಂಡಿ ಬಿದ್ದ ರಸ್ತೆಗೆ ನಾಟಿ ಮಾಡಿ ಪತ್ರಿಭಟನೆ

ಗುಂಡಿ ಬಿದ್ದಿರುವ ಹೊಸಹಳ್ಳಿ ಮುಖ್ಯ ರಸ್ತೆಗೆ ನಾಟಿ ಮಾಡುವ ಮೂಲಕ ಬಿಜೆಪಿ ರೈತ ಮೋರ್ಚಾದ ಮಂಡ್ಯ ನಗರ ಘಟಕದ ಅಧ್ಯಕ್ಷ ಹೊಸಹಳ್ಳಿ ಶಿವು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮಂಡ್ಯ ನಗರದ ಹೊಸಹಳ್ಳಿ ಮುಖ್ಯ ರಸ್ತೆಯಿಂದ ಮಹದೇಶ್ವರ ಬೆಟ್ಟ, ಚಾಮರಾಜನಗರ, ಕೊಳ್ಳೇಗಾಲ , ನರಸೀಪುರ , ಕಿರಗಾವಲು ಕಡೆಗೆ ಹೋಗುವ ಪ್ರಮುಖ ರಸ್ತೆಯಾಗಿದ್ದು , ಪ್ರತಿನಿತ್ಯ ಹತ್ತಾರು ಶಾಲಾ ವಾಹನಗಳು ಸಂಚರಿಸುತ್ತಿದ್ದು, ಹಲವಾರು ಅವಘಡಗಳಿಗೆ ಕಾರಣವಾಗಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಹಲವು ದಿನಗಳಿಂದ ವಾಹನಗಳ ಅಪಘಾತಗಳು ಆಗುತ್ತಿರುವುದರಿಂದ ಲೋಕೋಪಯೋಗಿ ಮತ್ತು ನಗರಸಭಾ ಅಧಿಕಾರಿಗಳಿಗೆ 2 ತಿಂಗಳಿಂದ ಮನವಿ ಮಾಡಿದ್ದರೂ, ಕೂಡ ಗುಡಿಗಳನನ್ನು ಸರಿಪಡಿಸುವಲ್ಲಿ ವಿಫಲರಾಗಿದ್ದಾರೆ,  ಕಳೆದ 4 ದಿನಗಳ ಹಿಂದೆ ಅದೇ ರಸ್ತೆಯಲ್ಲಿ ನೀರಿನ ಪೈಪ್ ಲೈನ್ ಒಡ್ಡೆಡಿದ್ದು ಸಂಬಂಧಪಟ್ಟ ನೀರಾವರಿ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಕೂಡ ರಸ್ತೆಯನ್ನು ಸರಿಪಡಿಸಿಲ್ಲ ಎಂದು ಕಿಡಿಕಾರಿದರು.

ಬಿಜೆಪಿ ರೈತ ಮೋರ್ಚಾ ನಗರ ಘಟಕದ ಅಧ್ಯಕ್ಷ ಹೊಸಹಳ್ಳಿ ಶಿವು ಮಾತನಾಡಿ, ಹೊಸಹಳ್ಳಿ ರಸ್ತೆಯಿಂದ ಸರ್ಕಾರಿ ಶಾಲೆಯವರೆಗೂ 250 ಗುಂಡಿಗಳಿದ್ದು , ದಿನನಿತ್ಯ 50 ಶಾಲೆಯ ವಾಹನಗಳು ಸಂಚರಿಸುತ್ತದೆ, ಈ ಗುಂಡಿಗಳಿಂದ ಶಾಲೆಯ ವಾಹನಗಳಲ್ಲಿ ಮಕ್ಕಳು ಸಂಚರಿಸುವಾಗ ತೊಂದರೆಯಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಮರ್ದಿನಿ ರಮೇಶ್, ಎಚ್.ಕೆ.ಮಂಜುನಾಥ್ , ಕೃಷ್ಣ, ಕಾಂತರಾಜು, ಮಾದರಾಜ ಅರಸ್, ಉಮೇಶ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ