Wednesday, November 18, 2026

ಪ್ರಾಯೋಗಿಕ ಆವೃತ್ತಿ

ವಿದ್ಯುತ್ ಪರಿವರ್ತಕ ಅಳವಡಿಸುವ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ 4.39 ಕೋಟಿ ರೂ.ವೆಚ್ಚದಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಮಂಡ್ಯ ತಾಲೂಕಿನ ಬೇವಿನಹಳ್ಳಿ, ಕೊತ್ತತ್ತಿ,ಲಾಳನ ಕೆರೆ, ಮೊತ್ತಹಳ್ಳಿ ವ್ಯಾಪ್ತಿಯ ಮಾರ್ಗ ಬಲವರ್ಧನೆ ನಷ್ಟ ಕಡಿಮೆಗೊಳಿಸಿ ಪರಿವರ್ತಕಗಳ ವಿಫಲತೆ ತಡೆದು ರೈತರಿಗೆ ಪರಿವರ್ತಕಗಳನ್ನು ಅಳವಡಿಸುವ ಯೋಜನೆಯ ಕಾಮಗಾರಿಗೆ ಬೇವಿನಹಳ್ಳಿ ಗ್ರಾಮದಲ್ಲಿ ಚೆಸ್ಕಾಂ ಅಧ್ಯಕ್ಷ ಹಾಗೂ ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಗುದ್ದಲಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು ರೈತಾಪಿ ಜನರ ಕೃಷಿ ಪಂಪುಸೆಟ್ ಗಳಿಗೆ ಕುಡಿಯುವ ನೀರಿನ ಯೋಜನೆಗಳಿಗೆ ನಿರಂತರವಾಗಿ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ತೊಂದರೆಯಾಗುತ್ತಿರುವುದನ್ನ ಮನಗಂಡು ತೂಬಿನಕೆರೆ ಹಾಗೂ ಸಂತೆಕಸಲಗೆರೆ ಭೂಮಿಸಿದ್ದೇಶ್ವರ ದೇವಸ್ಥಾನ ಬಳಿ 66/11 ಕೆವಿ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರ ಪ್ರಾರಂಭಿಸುತ್ತಿರುವುದರಿಂದ ರೈತರಿಗೆ ವಿದ್ಯುತ್ ಸಮಸ್ಯೆ ಬರಲ್ಲ ಎಂದು ಹೇಳಿದರು.

ಅನಧಿಕೃತ ಪಂಪಸೆಟ್‌ಗಳಿಂದ ವಿದ್ಯುತ್ ದುರ್ಬಳಕೆ ಆಗದಂತೆ ರೈತರು ಗಮನಿಸಬೇಕು. ಅನಧಿಕೃತ ಸಂಪರ್ಕದಿಂದ ಒತ್ತಡ ಹೆಚ್ಚಾಗಿ ಟಿಸಿ ಹಾಳಾಗುವುದರಿಂದ ಹೊಸ ಟಿಸಿ ಜೋಡಣೆ ಆಗುವವರೆಗೆ ನೀರಿನ ಕೊರತೆ ಉಂಟಾಗಿ ಬೆಳೆ ನಾಶವಾಗುತ್ತವೆ.ಈ ಹಿನ್ನೆಲೆಯಲ್ಲಿ ಅನಧಿಕೃತ ಬಳಕೆದಾರರು ಅಧಿಕೃತ ಸಂಪರ್ಕಗಳ ಅನುಸಾರ ನೂತನ ಟಿಸಿ ಅಳವಡಿಸಿ ವಿದ್ಯುತ್ ಕೊರತೆಯಾಗದಂತೆ ಕ್ರಮವಹಿಸುತ್ತೇವೆ ಎಂದರು.

ಫೀಡರ್ ಗಳನ್ನು ಮಾಡಿದರೆ ರೈತರಿಗೆ ಬೆಳಗಿನ ವೇಳೆಯಲ್ಲಿ ನಿರಂತರವಾಗಿ 7 ಗಂಟೆಗಳ ವಿದ್ಯುತ್ ಕೊಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚಂದ್ರ ಮೌಳಿ, ಸಹಾಯಕ ಇಂಜಿನಿಯರ್ ಲೋಕೇಶ್, ಬೇವಿನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಂ.ರಮೇಶ್, ಮುಖಂಡರಾದ ಶಿವಣ್ಣ, ತಿಮ್ಮೇಗೌಡ,ಮಹೇಶ್,ನಾಗರಾಜು, ಬಸವಲಿಂಗ, ರಾಜಪ್ಪ, ನಾಗೇಶ್,ಮಾಯಣ್ಣ, ಚೌಡಪ್ಪ, ನಿಂಗರಾಜು ಸೇರಿದಂತೆ ಇತರರು ಭಾಗವಹಿಸಿದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ